ಕನ್ನಡಪ್ರಭ ವಾರ್ತೆ ಮೈಸೂರು
ನಗರದ ನಂಜನಗೂಡು ರಸ್ತೆಯಲ್ಲಿರುವ ಗಣಪತಿ ಸಚ್ಚಿದಾನಂದ ಆಶ್ರಮದ ನಾದಮಂಟಪದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಗಣಪತಿ ಶ್ರೀಗಳು ವಿಶೇಷ ಚೇತನರ ಬಳಿಗೆ ಹೋಗಿ, ಅವರ ಆರೋಗ್ಯ ವಿಚಾರಿಸಿ ಸಲಕರಣೆ ವಿತರಿಸಿದರು.
ಈವೇರಳೆ ಗಣಪತಿ ಶ್ರೀಗಳು ಮಾತನಾಡಿ, ವಿಶೇಷಚೇತನರನ್ನು ನೋಡಿಕೊಳ್ಳುವುದು ಒಂದು ಪುಣ್ಯದ ಕೆಲಸ. ಅವರನ್ನು ಇನ್ನೂ ಚೆನ್ನಾಗಿ ನೋಡಿಕೊಳ್ಳುವ ಶಕ್ತಿಯನ್ನು ದೇವರು ನೀಡಲಿ. ಇಂಥವರ ಸೇವೆ ಮಾಡುವುದು ನಿಜಕ್ಕೂ ಪುಣ್ಯ, ಅವರ ಸೇವೆಯನ್ನು ಎಷ್ಟು ಶ್ಲಾಘಿಸಿದರೂ ಸಾಲದು. ದೇವರು ಇವರೆಲ್ಲರಿಗೂ ಆಯಸ್ಸು ಆರೋಗ್ಯ ಕೊಟ್ಟು ಒಳ್ಳೆಯದು ಮಾಡಲಿ. ಭಕ್ತರಿಗೂ ಒಳಿತಾಗಲಿ ಎಂದು ಅವರು ಹಾರೈಸಿದರು.40 ವೀಲ್ ಚೇರ್ಸ್, 8 ವಾಕರ್ಸ್, 10 ಕ್ರಚರ್ಸ್, 5 ಸ್ಟಿಕ್ ಗಳು ಸೇರಿ ಒಟ್ಟು 82 ಉಪಕರಣಗಳನ್ನು ವಿಕಲಚೇತನರಿಗೆ ಶ್ರೀಗಳು ವಿತರಿಸಿದರು. ನಂತರ ಅವಧೂತ ದತ್ತ ಪೀಠದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು.
ಇದಕ್ಕೂ ಮೊದಲು ದತ್ತ ಹ್ಯೂಮನ್ ಸರ್ವೀಸಸ್ ಸ್ವಯಂಸೇವಕರ ವತಿಯಿಂದ ಶ್ರೀಗಳಿಗೆ ಗಾರ್ಡ್ ಆಫ್ ಹಾನರ್ ಸಲ್ಲಿಸಲಾಯಿತು. ನಾದಮಂಟಪದಲ್ಲಿ ಲೋಕ ಕಲ್ಯಾರ್ಥವಾಗಿಶ್ರೀ ದತ್ತ ವೆಂಕಟೇಶ್ವರ ಸ್ವಾಮಿಯ ಶಾಂತಿ ಕಲ್ಯಾಣ ವೈಭವವಾಗಿ ನೆರವೇರಿತು. ಶ್ರೀ ದತ್ತ ವಿಜಯಾನಂದ ಶ್ರೀಗಳ ಸಮ್ಮುಖದಲ್ಲಿ ಈ ಕಾರ್ಯಕ್ರಮಗಳು ನೆರವೇರಿದವು.