ಗ್ರಾಮೀಣ ಶಾಲಾ ವಿದ್ಯಾರ್ಥಿನಿಯರಿಗೆ ಉಚಿತ ಬೈಸಿಕಲ್ ವಿತರಣೆ

KannadaprabhaNewsNetwork |  
Published : Oct 25, 2024, 01:14 AM IST
24ಕೆಎಂಎನ್ ಡಿ12 | Kannada Prabha

ಸಾರಾಂಶ

ಪ್ರತಿ ವರ್ಷವೂ ಗ್ರಾಮೀಣ ಹೆಣ್ಣು ಮಕ್ಕಳ ಸಬಲೀಕರಣಕ್ಕಾಗಿ ಗ್ರಾಮೀಣ ಪ್ರದೇಶದಲ್ಲಿ ವ್ಯಾಸಂಗ ಮಾಡುತ್ತಿರುವ ಬಡ ಹೆಣ್ಣು ಮಕ್ಕಳಿಗೆ ರೋಟರಿ ಕ್ಲಬ್ ಬೆಂಗಳೂರು ನಾರ್ತ್, ಮದ್ದೂರು ವತಿಯಿಂದ ತಾಯಮ್ಮ ಚನ್ನೇಗೌಡ ಪ್ರೌಢಶಾಲೆಯ ಹೆಣ್ಣು ಮಕ್ಕಳಿಗೆ ಉಚಿತವಾಗಿ ಬೈಸಿಕಲ್ ವಿತರಿಸಲಾಯಿತು.

ಕನ್ನಡಪ್ರಭ ವಾರ್ತೆ ಮದ್ದೂರು

ರೋಟರಿ ಕ್ಲಬ್ ಬೆಂಗಳೂರು ನಾರ್ತ್, ಮದ್ದೂರು ವತಿಯಿಂದ ತಾಯಮ್ಮ ಚನ್ನೇಗೌಡ ಪ್ರೌಢಶಾಲೆಯ ಗ್ರಾಮೀಣ ಭಾಗದ ಹೆಣ್ಣು ಮಕ್ಕಳಿಗೆ ಉಚಿತವಾಗಿ ಬೈಸಿಕಲ್ ವಿತರಿಸಲಾಯಿತು.

ಸಂಸ್ಥೆ ಅಧ್ಯಕ್ಷ ರೋಟೆರಿಯನ್ ಚನ್ನಂಕೇಗೌಡ ಮಾತನಾಡಿ, ಅಂತಾರಾಷ್ಟ್ರೀಯ ಸೇವಾ ಸಂಸ್ಥೆಯಾಗಿ ರೋಟರಿ ಶೈಕ್ಷಣಿಕ ಕ್ಷೇತ್ರ, ಆರೋಗ್ಯ ಕ್ಷೇತ್ರದಲ್ಲಿ ಹಾಗೂ ಪರಿಸರ ಉಳಿಸುವ ನಿಟ್ಟಿನಲ್ಲಿ ಸೇವೆ ಸಲ್ಲಿಸುತ್ತಾ ಬಂದಿದೆ ಎಂದರು.

ಪ್ರತಿ ವರ್ಷವೂ ಗ್ರಾಮೀಣ ಹೆಣ್ಣು ಮಕ್ಕಳ ಸಬಲೀಕರಣಕ್ಕಾಗಿ ಗ್ರಾಮೀಣ ಪ್ರದೇಶದಲ್ಲಿ ವ್ಯಾಸಂಗ ಮಾಡುತ್ತಿರುವ ಬಡ ಹೆಣ್ಣು ಮಕ್ಕಳಿಗೆ ಉಚಿತವಾಗಿ ಬೈಸಿಕಲ್ ವಿತರಣೆ ಮಾಡುತ್ತಿದೆ ಎಂದರು.

ಕಾರ್ಯಕ್ರಮದಲ್ಲಿ ರೋಟರಿ ಜಿಲ್ಲೆ 3192 ಕಾರ್ಯದರ್ಶಿ ವಿನೋದ್ ಕುಮಾರ್, ರೋಟರಿ ಬೆಂಗಳೂರು ನಾರ್ತ್ ಕ್ಲಬ್‌ನ ಅಧ್ಯಕ್ಷ ಗಿರೀಶ್ ಹಾವಗಲ್, ಹೊನ್ನೇಗೌಡ, ಶಶಿಗೌಡ, ಅಕ್ಷರಂ ವೆಂಕಟೇಶ್, ಶಾಲೆ ಕಾರ್ಯದರ್ಶಿ ನಾರಾಯಣಸ್ವಾಮಿ ಹಾಗೂ ಶಿಕ್ಷಕರು ಭಾಗವಹಿಸಿದ್ದರು.ದಸರಾ ಕಲೋತ್ಸವ, ಕಲಾವಿದರಿಂದ ಪ್ರದರ್ಶನ

ಮದ್ದೂರು:

ತಾಲೂಕಿನ ಬೆಸಗರಹಳ್ಳಿಯ ಏಕದಂತ ನಾಟ್ಯಾಲಯ ವತಿಯಿಂದ ದಸರಾ ಕಲೋತ್ಸವ ನಡೆಯಿತು.

ಕಾರ್ಯಕ್ರಮದಲ್ಲಿ ಹಲವು ಜಾನಪದ ನೃತ್ಯ ಹಾಗೂ ಭರತನಾಟ್ಯ ಹಾಗೂ ವೀರಗಾಸೆ ಮತ್ತು ದೇವರ ಕುಣಿತ ಹಾಗೂ ಡೊಳ್ಳು ಕುಣಿತ ಪ್ರದರ್ಶನವನ್ನು ಕಲಾವಿದರು ನೀಡಿದರು.

ಗ್ರಾಪಂ ಅಧ್ಯಕ್ಷೆ ರಾಧಿಕಾ ಪ್ರಸಾದ್ ಹಾಗೂ ಸೊಸೈಟಿ ಅಧ್ಯಕ್ಷ ಎನ್.ಲಿಂಗರಾಜು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಈ ವೇಳೆ ಪೊಲೀಸ್ ಇನ್ಸ್ ಪೆಕ್ಟರ್ ಸತೀಶ್ ಹಾಗೂ ಆರೋಗ್ಯ ಇಲಾಖೆ ಡಾ.ಕಿರಣ್ ಕುಮಾರ್, ತಾಯಮ್ಮ, ರಾಮಕೃಷ್ಣ, ರೈತ ಸಂಘದ ಅಧ್ಯಕ್ಷ ಸೀತಾರಾಮ, ಶಾಖಾಧಿಕಾರಿ ವೆಂಕಟೇಶ್, ಸವಿ ನೆನಪು ಫೌಂಡೇಷನ್‌ನ ಮಾನಸ ವಿನಯ್, ನಿವೃತ್ತ ಉಪನ್ಯಾಸಕ ಶೈಲ ಸಂಪತ್ , ದಸಂಸ ಮುಖಂಡ ಬಿ.ಎಂ.ಸತ್ಯ, ಚೈತ್ರಾವತಿಯವರು ಹಾಗೂ ಸಂಗಡಿಗರು ಇದ್ದರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ