ಅಂಕಣ್ಣನದೊಡ್ಡಿ ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ಉಚಿತ ಪರಿಕರಗಳ ವಿತರಣೆ

KannadaprabhaNewsNetwork |  
Published : Oct 03, 2024, 01:31 AM IST
೨ಕೆಎಂಎನ್‌ಡಿ-೬ಮಂಡ್ಯ ತಾಲೂಕಿನ ಅಂಕಣ್ಣನದೊಡ್ಡಿ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳಿಗೆ ಅಲೆಪ್ಪಿ ಅಲಯನ್ಸ್ ಸಂಸ್ಥೆ ವತಿಯಿಂದ ಉಚಿತ ಪರಿಕರಗಳನ್ನು ವಿತರಣೆ ಮಾಡಲಾಯಿತು. | Kannada Prabha

ಸಾರಾಂಶ

ಗ್ರಾಮೀಣ ವ್ಯಾಪ್ತಿಯಲ್ಲಿ ಬಡತನದಲ್ಲಿರುವ ಪೋಷಕರು ಖಾಸಗಿ ಶಾಲೆಗಳಲ್ಲಿ ದುಬಾರಿ ಶುಲ್ಕ ಪಾವತಿಸಿ ಮಕ್ಕಳಿಗೆ ಶಿಕ್ಷಣಕೊಡಿಸಲು ಸಾಧ್ಯವಿಲ್ಲ, ಸರ್ಕಾರಿ ಶಾಲೆಗಳು ಸಬಲೀಕರಣಗೊಂಡರೆ ದುರ್ಬಲವರ್ಗದವರಿಗೆ ಶಿಕ್ಷಣ ಸಿಗಲು ಸಾಧ್ಯ.

ಕನ್ನಡಪ್ರಭ ವಾರ್ತೆ ಮಂಡ್ಯ

ಪ್ರಸ್ತುತ ದಿನಗಳಲ್ಲಿ ಸರ್ಕಾರಿ ಶಾಲೆಗಳ ಸಬಲೀಕರಣಕ್ಕೆ ಗ್ರಾಮಸ್ಥರು ಮತ್ತು ದಾನಿಗಳ ನೆರವು ಅತ್ಯಗತ್ಯ ಎಂದು ಅಂತಾರಾಷ್ಟ್ರೀಯ ಅಲಯನ್ಸ್ ಸಂಸ್ಥೆ ಜಿಲ್ಲಾ ರಾಜ್ಯಪಾಲ ಕೆ.ಟಿ.ಹನುಮಂತು ಹೇಳಿದರು.

ತಾಲೂಕಿನ ಕೆರಗೋಡು ಹೋಬಳಿಯ ಅಂಕಣ್ಣನದೊಡ್ಡಿ ಸರ್ಕಾರಿ ಶಾಲೆಯಲ್ಲಿ ಅಲೆಪ್ಪಿ ಅಲಯನ್ಸ್ ಸಂಸ್ಥೆ ಆಯೋಜಿಸಿದ್ದ ವಿದ್ಯಾರ್ಥಿಗಳಿಗೆ ಉಚಿತ ಪರಿಕರಗಳ ವಿತರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಗ್ರಾಮೀಣ ವ್ಯಾಪ್ತಿಯಲ್ಲಿ ಬಡತನದಲ್ಲಿರುವ ಪೋಷಕರು ಖಾಸಗಿ ಶಾಲೆಗಳಲ್ಲಿ ದುಬಾರಿ ಶುಲ್ಕ ಪಾವತಿಸಿ ಮಕ್ಕಳಿಗೆ ಶಿಕ್ಷಣಕೊಡಿಸಲು ಸಾಧ್ಯವಿಲ್ಲ, ಸರ್ಕಾರಿ ಶಾಲೆಗಳು ಸಬಲೀಕರಣಗೊಂಡರೆ ದುರ್ಬಲವರ್ಗದವರಿಗೆ ಶಿಕ್ಷಣ ಸಿಗಲು ಸಾಧ್ಯ ಎಂದರು.

ಅಲಯನ್ಸ್ ಸಂಸ್ಥೆಯ ಅಲೆಪ್ಪಿ ಪದಾಧಿಕಾರಿಗಳು ಶಾಲಾ ವಿದ್ಯಾರ್ಥಿಗಳಿಗೆ ಉಚಿತವಾಗಿ ಬೆಲ್ಟ್, ಟೈ, ಬ್ಯಾಡ್ಜ್, ಲೇಖನಿ ಸಾಮಗ್ರಿಗಳನ್ನು ನೀಡಿದರು. ಅಲೆಪ್ಪಿ ಅಲೆಯನ್ಸ್ ಸಂಸ್ಥೆ ಅಧ್ಯಕ್ಷ ಶಂಕರಯ್ಯ, ಕೃಷಿಕ ಅಲಯನ್ಸ್ ಸಂಸ್ಥೆ ಅಧ್ಯಕ್ಷ ಎಸ್.ಜೆ.ಮಂಜುನಾಥ್, ಎಸ್.ಎನ್ ಕೃಷ್ಣಪ್ಪ, ಶಿವಕುಮಾರ್, ಶಿಕ್ಷಕಿಯರಾದ ನಾಗರತ್ನ, ಶಕೀಲಾಪತಿ, ಅಡುಗೆ ಸಹಾಯಕಿ ಸ್ವರೂಪ ಹಾಜರಿದ್ದರು.

ಬಡವರಿಗೆ ಲಯನ್ಸ್ ಕ್ಲಬ್ ಅಧ್ಯಕ್ಷರಿಂದ ಬಟ್ಟೆ ವಿತರಣೆ

ಹಲಗೂರು:ಲಯನ್ಸ್ ಕ್ಲಬ್ ಅಧ್ಯಕ್ಷ ಎನ್.ಕೆ.ಕುಮಾರ್ ಗಾಂಧಿ ಜಯಂತಿ ಅಂಗವಾಗಿ ಬಡ ಮಹಿಳೆಗೆ ಸೀರೆ ಹಾಗೂ ಪುರುಷನಿಗೆ ಬಟ್ಟೆ ವಿತರಿಸಿದರು.

ಲಯನ್ಸ್ ಕ್ಲಬ್ ಆವರಣದಲ್ಲಿ ಗಾಂಧಿ ಜಯಂತಿ ಅಂಗವಾಗಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು. ನಂತರ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಲಯನ್ಸ್ ಕ್ಲಬ್ ವತಿಯಿಂದ ದಿನನಿತ್ಯ ಬಡವರಿಗೆ ನೀಡುತ್ತಿರುವ ಹಸಿವು ನಿವಾರಣೆ ಕಾರ್ಯಕ್ರಮದಲ್ಲಿ ಬಂದಿದ್ದ ಮಹಿಳೆಗೆ ಸೀರೆ ಹಾಗೂ ಪುರುಷನಿಗೆ ಬಟ್ಟೆ ವಿತರಿಸಿದರು.ನಂತರ ಮಾತನಾಡಿದ ಅವರು, ಗಾಂಧೀಜಿಯವರ ಆದರ್ಶ ತತ್ವಗಳನ್ನು ನಾವುಗಳು ಸಹ ಅನುಸರಿಸಿಕೊಂಡು ಹೋಗಬೇಕು. ಗಾಂಧಿ ಜಯಂತಿ ಅಂಗವಾಗಿ ಬಟ್ಟೆಗಳನ್ನು ವಿತರಿಸಿದ್ದೇನೆ ಎಂದರು.

ಈ ವೇಳೆ ಲಯನ್ಸ್ ಕ್ಲಬ್ ಸದಸ್ಯರಾದ ಎ.ಎಸ್.ದೇವರಾಜು, ಶಿವರಾಜು, ಡಾ.ನಾಗೇಶ್, ಕೃಷ್ಣ, ಮನೋಹರ, ಗುರುಸಿದ್ದು, ಡಾ. ಶಂಷುದ್ದೀನ್, ಪ್ರವೀಣ ಸೇರಿದಂತೆ ಇತರರು ಇದ್ದರು.

PREV

Recommended Stories

ದಸರಾ ಉದ್ಘಾಟನೆಗೆ ಬಾನು : ಬಿಜೆಪಿ vs ಕಾಂಗ್ರೆಸ್ ಜಟಾಪಟಿ
ಧರ್ಮಸ್ಥಳ ಎಸ್‌ಐಟಿ ಅಧಿಕಾರಿ ಅನುಚೇತ್‌ ಅಮೆರಿಕ ಪ್ರವಾಸಕ್ಕೆ