ಡಾ.ಡಿ.ವೀರೇಂದ್ರ ಹೆಗ್ಗಡೆ ಅವರ ಹುಟ್ಟುಹಬ್ಬದ ಪ್ರಯುಕ್ತ ಹಣ್ಣು, ದಿನಸಿ ವಿತರಿಸಿ

KannadaprabhaNewsNetwork |  
Published : Nov 30, 2026, 02:30 AM IST
29ಕೆಎಂಎನ್ ಡಿ15 | Kannada Prabha

ಸಾರಾಂಶ

ಅನಾಥಾಶ್ರಮ, ವೃದ್ಧಾಶ್ರಮಗಳಿಗೆ ಹಣ್ಣು ಹಂಪಲು, ದಿನಸಿ ವಿತರಣೆ ಸೇರಿ ಕೆಲವೊಂದು ಗ್ರಾಮಗಳಲ್ಲಿ ರಕ್ತದಾನ ಶಿಬಿರ ಇಂತಹ ಒಳ್ಳೆಯ ಸಮಾಜಮುಖಿ ಕಾರ್ಯಕ್ರಮಗಳು ನಡೆಯುತ್ತಿವೆ.

ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ

ತಾಲೂಕಿನ ಅರಕೆರೆ ವಲಯದ ಕಸ್ತೂರಿ ಬಾ ಗಾಂಧಿ ವೃದ್ಧಾ ಸೇವಾಶ್ರಮದಲ್ಲಿ ಪರಮ ಪೂಜ್ಯ ಡಾ.ಡಿ.ವೀರೇಂದ್ರ ಹೆಗ್ಗಡೆ ಅವರ ಹುಟ್ಟುಹಬ್ಬದ ಪ್ರಯುಕ್ತ ಹಣ್ಣು ಹಂಪಲು ಹಾಗೂ ದಿನಸಿ ವಿತರಿಸಿ ಹುಟ್ಟುಹಬ್ಬ ಆಚರಿಸಲಾಯಿತು.

ಪುರಸಭೆ ಮಾಜಿ ಉಪಾಧ್ಯಕ್ಷ ಕೃಷ್ಣಪ್ಪ ಮಾತನಾಡಿ, ಧರ್ಮಸ್ಥಳ ಕ್ಷೇತ್ರವನ್ನು ಉನ್ನತ ಮಟ್ಟಕ್ಕೆ ತೆಗೆದುಕೊಂಡು ಹೋದ ಪೂಜ್ಯರನ್ನ ನಡೆದಾಡುವ ದೇವರು ಎನ್ನಬಹುದು. ರಾಜ್ಯಾದ್ಯಂತ ಪೂಜ್ಯರು ಹುಟ್ಟು ಹಬ್ಬದ ಪ್ರಯುಕ್ತ ಉತ್ತಮ ಕಾರ್ಯಗಳು ನಡೆಯುತ್ತಿದೆ ಎಂದರು.

ಅನಾಥಾಶ್ರಮ, ವೃದ್ಧಾಶ್ರಮಗಳಿಗೆ ಹಣ್ಣು ಹಂಪಲು, ದಿನಸಿ ವಿತರಣೆ ಸೇರಿ ಕೆಲವೊಂದು ಗ್ರಾಮಗಳಲ್ಲಿ ರಕ್ತದಾನ ಶಿಬಿರ ಇಂತಹ ಒಳ್ಳೆಯ ಸಮಾಜಮುಖಿ ಕಾರ್ಯಕ್ರಮಗಳು ನಡೆಯುತ್ತಿವೆ. ಪೂಜ್ಯರಿಗೆ ಮಂಜುನಾಥಸ್ವಾಮಿ ಉತ್ತಮ ಆರೋಗ್ಯ, ಆಯಸ್ಸು ಭಾಗ್ಯ ಕೊಟ್ಟು ಇವರ ಮತ್ತಷ್ಟು ಸಮಾಜಮುಖಿ ಅಭಿವೃದ್ದಿ ಕಾರ್ಯಗಳು ಇಡೀ ಭಾರತ ದೇಶಕ್ಕೆ ದೊರಕುವಂತೆ ಆಗಲಿ ಎಂದು ಪ್ರಾರ್ಥಿಸಿದರು.

ಈ ವೇಳೆ ಜನಜಾಗೃತಿ ಸದಸ್ಯರಾದ ಅಪ್ಪಾಜಿ, ಪೂರ್ಣಿಮಾ ವಿದ್ಯಾ ಸಂಸ್ಥೆಯ ಕಾರ್ಯದರ್ಶಿ ನಟರಾಜು, ಪ್ರಗತಿಪರ ರೈತ ಅರಕೆರೆ ಸಿದ್ದೇಗೌಡ , ತಾರಂ ಮಾಜಿ ಸದಸ್ಯೆ ಸುನಿತಾ ದಿವಾಕರ್, ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಅನಿಲ್ ಬಾಬು ಅರಕೆರೆ, ಕಸ್ತೂರಿ ಬಾ ಗಾಂಧಿ ವೃದ್ದಾ ಸೇವಾಶ್ರಮದ ಮುಖ್ಯಸ್ಥ ಗಿರೀಶ್, ಸಂಸ್ಥೆ ತಾಲೂಕು ಯೋಜನಧಿಕಾರಿ ಗಣೇಶ್ ನಾಯ್ಕ, ಅರಕೆರೆ ವಲಯದ ಮೇಲ್ವಿಚಾರಕರು ಸೇರಿದಂತೆ ಇತರರು ಇದ್ದರು.

ಇಂದು ಬೆಂಗಳೂರಿನಲ್ಲಿ ರಾಜ್ಯ ಮಟ್ಟದ ಬೃಹತ್ ಪ್ರತಿಭಟನೆ;

ಪ್ರೀಡಂ ಪಾರ್ಕಿನಲ್ಲಿ ರೈತರ ರ್‍ಯಾಲಿ: ಬಿ.ಪಿ.ಅಪ್ಪಾಜಿ ಬೂದನೂರು

ಕನ್ನಡಪ್ರಭ ವಾರ್ತೆ ಮಂಡ್ಯಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ನ.30ರಂದು ಭಾರತೀಯ ಕಿಸಾನ್ ಸಂಘ-ಕರ್ನಾಟಕ ಪ್ರದೇಶ (ಕರ್ನಾಟಕ ದಕ್ಷಿಣ ಪ್ರಾಂತ)ದಿಂದ ರೈತರ ವಿವಿಧ ಸಮಸ್ಯೆಗಳ ಪರಿಹಾರಕ್ಕೆ ಒತ್ತಾಯಿಸಿ ರಾಜ್ಯ ಮಟ್ಟದ ಬೃಹತ್ ಪ್ರತಿಭಟನೆ ಹಾಗೂ ರೈತರ ರ್‍ಯಾಲಿ ನಡೆಸಲಾಗುತ್ತಿದೆ ಎಂದು ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಬಿ.ಪಿ.ಅಪ್ಪಾಜಿ ಬೂದನೂರು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದಕ್ಷಿಣ ಪ್ರಾಂತ್ಯದ 17 ಜಿಲ್ಲೆಗಳು ಹಾಗೂ ಉತ್ತರ ಪ್ರಾಂತ್ಯದ 12 ಜಿಲ್ಲೆಗಳು ಸೇರಿದಂತೆ ರಾಜ್ಯದ ವಿವಿಧೆಡೆಯಿಂದ ಸಾವಿರಾರು ಮಂದಿ, ಮಂಡ್ಯ ಜಿಲ್ಲೆಯಿಂದಲೂ ಸುಮಾರು ಎರಡು ಸಾವಿರಕ್ಕೂ ಹೆಚ್ಚು ರೈತರು ಭಾಗವಹಿಸುವರು ಎಂದರು.ಕಬ್ಬು ಬೆಳೆಗಾರರಿಗೆ ಕೇಂದ್ರ ಸರ್ಕಾರದ ಎಫ್.ಆರ್.ಪಿ.ದರದಲ್ಲಿ ಮೋಸವಾಗುತ್ತಿದೆ. ರಾಜ್ಯ ಸರ್ಕಾರದಿಂದ ಹೆಚ್ಚುವರಿ ದರ ದೊರೆಯುತ್ತಿಲ್ಲ. ಉತ್ತರ ಮತ್ತು ದಕ್ಷಿಣ ಭಾಗದ ಕಬ್ಬು ಕಟಾವು ಹಾಗೂ ಕಾರ್ಖಾನೆಗಳ ವ್ಯವಸ್ಥೆಯಲ್ಲಿನ ವ್ಯತ್ಯಾಸದಿಂದ ರೈತರಿಗೆ ತೀವ್ರ ನಷ್ಟ ಉಂಟಾಗುತ್ತಿದೆ. ಮೈಷುಗರ್ ಕಾರ್ಖಾನೆಯು ಪೂರ್ಣ ಪ್ರಮಾಣದಲ್ಲಿ ಕಬ್ಬನ್ನು ಅರಿಯಬೇಕು. ಇಲ್ಲವೇ ಖಾಸಗಿಯವರಿಗೆ ವಹಿಸಿ ಕಾರ್ಖಾನೆಯನ್ನು ನಡೆಸಬೇಕು ಎಂದು ಆಗ್ರಹಿಸಿದರು.

ರಂಗರಾಜನ್ ಸಮಿತಿ ಶಿಫಾರಸಿನಂತೆ ಸಕ್ಕರೆ ಮತ್ತು ಉಪ ಉತ್ಪನ್ನಗಳಲ್ಲಿ ರೈತರಿಗೆ ಶೇ.70 ರಷ್ಟು ಪಾಲು ನೀಡಬೇಕು, ಎಫ್ಆರ್‌ಪಿ ಜತೆಗೆ ಹೆಚ್ಚುವರಿ ಪ್ರೋತ್ಸಾಹಧನ ನೀಡಿ 15 ದಿನಗಳೊಳಗೆ ಹಣ ಪಾವತಿಸಬೇಕು. ಎಲ್ಲ ಕೃಷಿ ಉತ್ಪನ್ನಗಳಿಗೆ ಲಾಭದಾಯಕ ಬೆಲೆ ನಿಗದಿಪಡಿಸಬೇಕು. ಈ ವರ್ಷ ಕಾವೇರಿ ಜಲಾಶಯದಲ್ಲಿ ನೀರು ಇದ್ದರೂ ಒಣಗುತ್ತಿರುವ ಬೆಳೆಗಳಿಗೆ ನೀರು ಬಿಡದೆ ತಮಿಳುನಾಡಿಗೆ ನೀರು ಹರಿಸಿರುವುದು ಸರಿಯಲ್ಲ ಎಂದು ಬೇಸರ ವ್ಯಕ್ತಪಡಿಸಿದರು.ನೀರಿಲ್ಲದೆ ಒಣಗಿ ನಷ್ಟಕ್ಕೊಳಗಾದ ಬೆಳೆಗಳ ಬಾಕಿ ಪರಿಹಾರವನ್ನು ತಕ್ಷಣವೇ ಪಾವತಿಸಬೇಕು. ಬೆಳೆ ವಿಮೆ ಲೋಪದೋಷ ಸರಿಪಡಿಸಿ ಸಂಕಷ್ಟದಲ್ಲಿರುವ ರೈತರ ಕೃಷಿ ಸಾಲವನ್ನು ಮನ್ನಾ ಮಾಡಬೇಕು ಹಾಗೂ 10 ಲಕ್ಷ ರು.ವರೆಗೆ ಬಡ್ಡಿರಹಿತ ಬೆಳೆ ಸಾಲ ನೀಡಬೇಕು ಎಂಬ ಇತ್ಯಾದಿ ರೈತರ ಸಮಸ್ಯೆಗಳನ್ನು ಇಟ್ಟುಕೊಂಡು ಪ್ರತಿಭಟನೆ ನಡೆಸಲಾಗುತ್ತಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಸಂಘದ ಜಿಲ್ಲಾ ವಕ್ತಾರ ಜಿ.ಡಿ.ನರಸಿಂಹನ್, ತಾಲೂಕು ಘಟಕದ ಅಧ್ಯಕ್ಷ ಎಲ್.ಜಯರಾಮು ತೂಬಿನಕೆರೆ, ಕಾರ್ಯಕಾರಿಣಿ ಸದಸ್ಯ ಸ್ವಾಮಿ ತೂಬಿನಕೆರೆ, ಮುಖಂಡರಾದ ಸತೀಶ್ ಇಂಡುವಾಳು, ರಾಘವೇಂದ್ರ, ಜೆ.ಕೆ.ಬಸವರಾಜು ಜೈಪುರ ಹಾಜರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಜನರ ಸಮಸ್ಯೆಗೆ ಅಧಿಕಾರಿಗಳೇ ಮೂಲ ಕಾರಣಕರ್ತರು
ಉತ್ತಮ ಸಮಾಜ ನಿರ್ಮಾಣದ ಹೊಣೆ ನಮ್ಮೆಲ್ಲರ ಮೇಲಿದೆ