ವೀರೇಂದ್ರ ಹೆಗ್ಗಡೆ ಹುಟ್ಟುಹಬ್ಬದಂದು ಹಣ್ಣುಹಂಪಲು ವಿತರಣೆ

KannadaprabhaNewsNetwork |  
Published : Nov 26, 2026, 01:45 AM IST
25ಎಚ್ಎಸ್ಎನ್6 : ಡಾ. ಡಿ. ವೀರೇಂದ್ರ ಹೆಗಡೆಯವರ ಹುಟ್ಟುಹಬ್ಬ ಅಂಗವಾಗಿ  ವಿಕಲ ಚೇತನರಿಗೆ  ಹಣ್ಣು ಹಂಪಲು  ವಿತರಣೆ ಮಾಡಲಾಯಿತು. | Kannada Prabha

ಸಾರಾಂಶ

ಧರ್ಮಾಧಿಕಾರಿಗಳಾದ ಡಾ. ಡಿ. ವೀರೇಂದ್ರ ಹೆಗಡೆಯವರ ಹುಟ್ಟುಹಬ್ಬ ಅಂಗವಾಗಿ ವಿಕಲ ಚೇತನರಿಗೆ ಹಣ್ಣು ಹಂಪಲು ವಿತರಣೆ ಮಾಡಲಾಯಿತು. ಬಾಗೂರು ವಲಯದ ಮೇಲ್ವಿಚಾರಕ ಸೋಮಶೇಖರ್ ಮಾತನಾಡಿ ಪೂಜ್ಯ ಕಾವಂದರ ಹುಟ್ಟುಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸುವ ಸಲುವಾಗಿ ಚನ್ನರಾಯಪಟ್ಟಣ ಯೋಜನಾ ಕಚೇರಿ ವ್ಯಾಪ್ತಿಯ 100 ಕ್ಕೂ ಹೆಚ್ಚು ವಿಕಲಚೇತನರಿಗೆ ಹಣ್ಣು ಹಂಪಲು ವಿತರಣೆ ಮಾಡಲಾಗುತ್ತಿದೆ ಈಗಾಗಲೇ ಅನೇಕ ವಿಕಲ ಚೇತನರಿಗೆ ವಾಟರ್ ಬೆಡ್ ಸೈಕಲ್ ಸೇರಿದಂತೆ ಅನೇಕ ಪರಿಕರಗಳನ್ನು ಸಂಸ್ಥೆ ವತಿಯಿಂದ ನೀಡಲಾಗುತ್ತಿದೆ ಎಂದು ತಿಳಿಸಿದರು.

ಕನ್ನಡಪ್ರಭ ವಾರ್ತೆ ಬಾಗೂರು

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಶ್ರವಣಬೆಳಗೊಳ ಯೋಜನಾ ಕಚೇರಿ ವ್ಯಾಪ್ತಿಯ ಬಾಗೂರು ವಲಯದ ವತಿಯಿಂದ ಧರ್ಮಾಧಿಕಾರಿಗಳಾದ ಡಾ. ಡಿ. ವೀರೇಂದ್ರ ಹೆಗಡೆಯವರ ಹುಟ್ಟುಹಬ್ಬ ಅಂಗವಾಗಿ ವಿಕಲ ಚೇತನರಿಗೆ ಹಣ್ಣು ಹಂಪಲು ವಿತರಣೆ ಮಾಡಲಾಯಿತು.ಹೋಬಳಿ ಕೇಂದ್ರದಲ್ಲಿ ಬಾಗೂರು ಲಯನ್ಸ್ ಕ್ಲಬ್ ಗೌರವಾಧ್ಯಕ್ಷರು ಹಾಗೂ ಎಪಿಎಂಸಿ ಮಾಜಿ ಅಧ್ಯಕ್ಷ ಬಿ ಎಚ್ ಶಿವಣ್ಣ ಯೋಜನೆ ವತಿಯಿಂದ ಹಮ್ಮಿಕೊಂಡಿದ್ದ ಹುಟ್ಟುಹಬ್ಬ ಕಾರ್ಯಕ್ರಮದ ಅಂಗವಾಗಿ ಹಮ್ಮಿಕೊಂಡಿದ್ದ ವಿಕಲ ಚೇತನರಿಗೆ ಹಣ್ಣುಹಂಪಲು ವಿತರಣೆ ಮಾಡಿ ಮಾತನಾಡಿದ ಅವರು ರಾಜ್ಯದಲ್ಲಿ ಕೃಷಿ ಶಿಕ್ಷಣ ಗ್ರಾಮಾಭಿವೃದ್ಧಿ ಡೈರಿ ಉದ್ಯಮ ಕೆರೆಗಳ ಪುನಶ್ಚೇತನ ದೇವಾಲಯಗಳ ಜೀರ್ಣೋದ್ಧಾರ ಸೇರಿದಂತೆ ಅನೇಕ ಕ್ಷೇತ್ರಗಳ ಅಭಿವೃದ್ಧಿಗೆ ಹೆಚ್ಚಿನ ಸಹಕಾರ ನೀಡುತ್ತಾ ಬರುತ್ತಿದ್ದಾರೆ ಜೊತೆಗೆ ವಿಕಲನ ಚೇತನರಿಗೆ ಹಾಗೂ ವಯೋ ವೃದ್ಧರಿಗೆ ಯೋಜನೆ ವತಿಯಿಂದ ವಾತ್ಸಲ್ಯ ಯೋಜನೆಯ ಮೂಲಕ ಮನೆ ಕಟ್ಟಿಕೊಡುವುದರ ಜೊತೆಗೆ ಮಾಶಾಸನ ನೀಡುತ್ತಿರುವುದು ಶ್ಲಾಘನೀಯ ಕೆಲಸವಾಗಿದೆ ಎಂದರು. ಬಾಗೂರು ವಲಯದ ಮೇಲ್ವಿಚಾರಕ ಸೋಮಶೇಖರ್ ಮಾತನಾಡಿ ಪೂಜ್ಯ ಕಾವಂದರ ಹುಟ್ಟುಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸುವ ಸಲುವಾಗಿ ಚನ್ನರಾಯಪಟ್ಟಣ ಯೋಜನಾ ಕಚೇರಿ ವ್ಯಾಪ್ತಿಯ 100 ಕ್ಕೂ ಹೆಚ್ಚು ವಿಕಲಚೇತನರಿಗೆ ಹಣ್ಣು ಹಂಪಲು ವಿತರಣೆ ಮಾಡಲಾಗುತ್ತಿದೆ ಈಗಾಗಲೇ ಅನೇಕ ವಿಕಲ ಚೇತನರಿಗೆ ವಾಟರ್ ಬೆಡ್ ಸೈಕಲ್ ಸೇರಿದಂತೆ ಅನೇಕ ಪರಿಕರಗಳನ್ನು ಸಂಸ್ಥೆ ವತಿಯಿಂದ ನೀಡಲಾಗುತ್ತಿದೆ ಎಂದು ತಿಳಿಸಿದರು.ಈ ಸಂದರ್ಭದಲ್ಲಿ ಯೋಜನೆಯ ಜ್ಞಾನವಿಕಾಸ ಮೇಲ್ವಿಚಾರಕರಾದ ಸರಸ್ವತಿ, ಬಾಗೂರು ಬಿ ಕಾರ್ಯಕ್ಷೇತ್ರದ ಸೇವಾ ಪ್ರತಿನಿಧಿ ಮಂಜುಳಾ ಪ್ರದೀಪ್, ಹೆಗಡಿಗೆರೆ ಕಾರ್ಯಕ್ಷೇತ್ರದ ಸೇವಾ ಪ್ರತಿನಿಧಿ ಸವಿತಾ ಹಾಜರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗರ್ಭಿಣಿಯಾದ ಅಪ್ರಾಪ್ತೆ: ಪೋಕ್ಸೋ ಕೇಸ್‌ ದಾಖಲು
ಇಳಕಲ್ಲಿಗೆ ಬಂತು ಕನ್ನಡ ಬಂಡಾರದ ರಥ