ಪಾಂಡವಪುರದಲ್ಲಿ ಕಾರ್ಮಿಕರಿಗೆ ಕಿಟ್‌ಗಳ ವಿತರಣೆ

KannadaprabhaNewsNetwork |  
Published : Sep 07, 2026, 02:00 AM IST
6ಕೆಎಂಎನ್ ಡಿ18 | Kannada Prabha

ಸಾರಾಂಶ

ಕಾರ್ಮಿಕರಿಗೆ ವಿವಾಹ, ಮಕ್ಕಳ ವಿದ್ಯಾಭ್ಯಾಸಕ್ಕೆ ಸಹಾಯಧನ ಸೇರಿ ಹಲವು ಸೌಲಭ್ಯ ನೀಡಲಾಗುತ್ತಿದೆ. ಅವುಗಳನ್ನು ಎಲ್ಲರು ಸದ್ಬಳಕೆ ಮಾಡಿಕೊಳ್ಳಬೇಕು. ಸಂಘವು ಕಾರ್ಮಿಕರ ಹಿತಕಾಯುವ ಕೆಲಸ ಮಾಡಲಿದೆ. ಇಲಾಖೆಯಲ್ಲಿ ದೊರೆಯುವ ಎಲ್ಲಾ ಸೌಲಭ್ಯಗಳನ್ನು ಕಾರ್ಮಿಕರಿಗೆ ದೊರಕಿಸಿಕೊಡುವ ಪ್ರಮಾಣಿಕ ಕೆಲಸ ಮಾಡಲಾಗುವುದು.

ಕನ್ನಡಪ್ರಭ ವಾರ್ತೆ ಪಾಂಡವಪುರ

ಕಾರ್ಮಿಕ ಇಲಾಖೆಯಿಂದ ನೀಡಲಾದ ಕಿಟ್‌ಗಳನ್ನು ತಾಲೂಕು ಕಟ್ಟಡ ಕಾರ್ಮಿಕರ ಸಂಘದಿಂದ ಕಾರ್ಮಿಕರಿಗೆ ವಿತರಿಸಲಾಯಿತು.

ಪಟ್ಟಣದ ಡಾ.ಬಾಬುಜಗಜೀವನ ರಾಮ್ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸುಮಾರು 350ಕ್ಕೂ ಅಧಿಕ ಕಾರ್ಮಿಕರಿಗೆ ಕಿಟ್ ವಿತರಿಸಿದ ಸಂಘದ ಉಪಾಧ್ಯಕ್ಷ ಎಸ್.ಗುರುಕುಮಾರ್, ಇಲಾಖೆಯಿಂದ ಗಾರೆ ಕೆಲಸಗಾರರು, ಎಲೆಕ್ಟ್ರಾನಿಕ್ ಕೆಲಸದ ಕಾರ್ಮಿಕರು, ಪೇಟಿಂಗ್ ಕಾರ್ಮಿಕರು, ಮರಗೆಲಸ ಮಾಡುವ ಕಾರ್ಮಿಕರಿಗೆ ಆಯಾ ಕೆಲಸಕ್ಕೆ ಅನುಕೂಲವಾಗುವಂತೆ ಪ್ರತ್ಯೇಕವಾಗಿ ಕಿಟ್ ವಿತರಿಸಲಾಗಿದೆ ಎಂದರು.

ಅಲ್ಲದೇ, ಕಾರ್ಮಿಕರಿಗೆ ವಿವಾಹ, ಮಕ್ಕಳ ವಿದ್ಯಾಭ್ಯಾಸಕ್ಕೆ ಸಹಾಯಧನ ಸೇರಿ ಹಲವು ಸೌಲಭ್ಯ ನೀಡಲಾಗುತ್ತಿದೆ. ಅವುಗಳನ್ನು ಎಲ್ಲರು ಸದ್ಬಳಕೆ ಮಾಡಿಕೊಳ್ಳಬೇಕು. ಸಂಘವು ಕಾರ್ಮಿಕರ ಹಿತಕಾಯುವ ಕೆಲಸ ಮಾಡಲಿದೆ. ಇಲಾಖೆಯಲ್ಲಿ ದೊರೆಯುವ ಎಲ್ಲಾ ಸೌಲಭ್ಯಗಳನ್ನು ಕಾರ್ಮಿಕರಿಗೆ ದೊರಕಿಸಿಕೊಡುವ ಪ್ರಮಾಣಿಕ ಕೆಲಸ ಮಾಡಲಾಗುವುದು ಎಂದರು.

ಅಧ್ಯಕ್ಷ ಕುಮರೇಶ್ ಮಾತನಾಡಿ, ಕಟ್ಟಡ ಕಾರ್ಮಿಕರ ಸಂಘವು ಎಲ್ಲಾ ಕಾರ್ಮಿಕರ ಕಷ್ಟ ಕಾರ್ಪಣ್ಯಗಳಿಗೆ ಸ್ಪಂದಿಸಿ ಇಲಾಖೆಯಲ್ಲಿ ದೊರೆಯುವ ಎಲ್ಲಾ ಸೌಲಭ್ಯಗಳನ್ನು ದೊರಕಿಸಿಕೊಡಲು ಪ್ರಾಮಾಣಿಕ ಕೆಲಸ ಮಾಡಲಿದೆ. ಸಂಘದ ಪ್ರಗತಿಗೆ ಎಲ್ಲರು ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.

ಈ ವೇಳೆ ಕಾರ್ಮಿಕ ಇಲಾಖೆ ಅಧಿಕಾರಿ ರಾಮಚಂದ್ರ, ರೂಪ, ಕಟ್ಟಡ ಕಾರ್ಮಿಕರ ಸಂಘದ ಅಧ್ಯಕ್ಷ ಕುಮರೇಶ್, ಉಪಾಧ್ಯಕ್ಷ ಹಾಗೂ ಜೆಡಿಎಸ್ ಎಸ್ಸಿಎಸ್ಟಿ ಘಟಕದ ಟೌನ್ ಅಧ್ಯಕ್ಷ ಎಸ್.ಗುರುಕುಮಾರ್, ಕಾರ್ಯದರ್ಶಿ ಅರುಣ್ ಕುಮಾರ್, ಖಜಾಂಚಿ ಮಣಿ, ಸಹ ಕಾರ್ಯದರ್ಶಿ ಶಶಿಕುಮಾರ್, ಗೌರವಾಧ್ಯಕ್ಷರಾದ ರಾಜೇಂದ್ರ, ಆರ್ .ಕೆ.ಸ್ವಾಮಿ ವೇಲು, ಸೋಮಣ್ಣ, ಸ್ವಾಮಿ, ರವಿ, ಮಹದೇವು,ಮುಜು ಸೇರಿದಂತೆ ಹಲವರು ಹಾಜರಿದ್ದರು.

ವಿಮಾ ಸಪ್ತಾಹ, ಬೈಕ್ ರ್ಯಾಲಿ

ಶ್ರೀರಂಗಪಟ್ಟಣ: ಭಾರತೀಯ ವಿಮಾ ನಿಗಮ ಸ್ಥಾಪನೆಯಾಗಿ 70 ವರ್ಷ ತುಂಬಿದ ಹಿನ್ನೆಲೆ ಭಾರತೀಯ ವಿಮಾ ಸಪ್ತಾಹ ಕಾರ್ಯಕ್ರಮದ ಮೂಲಕ ವಿಮಾ ಪಾಲಿಸಿ ಪ್ರತಿ ನಿಧಿಗಳು ಸಂಭ್ರಮಿಸಿ ಬೈಕ್ ರ್‍ಯಾಲಿ ನಡೆಸಿದರು. ಪಟ್ಟಣದ ಶ್ರೀರಂಗನಾಥ ಸ್ವಾಮಿ ದೇವಾಲಯದಲ್ಲಿ ಪಾಲಿಸಿ ಪ್ರತಿನಿಧಿಗಳ ಒಕ್ಕೂಟದ ಸದಸ್ಯರು ಪೂಜೆ ನೆರವೇರಿಸಿ ದೇವರಿಗೆ ಈಡುಗಾಯಿ ಹೊಡೆದರು. ನಂತರ ಸಾಲಿನಲ್ಲಿ ಬೈಕ್ ನಿಲ್ಲಿಸಿ ಭಾರತೀಯ ಜೀವಾ ವಿಮಾ ನಿಗಮಕ್ಕೆ ಜೈಕಾರಗಳ ಘೋಷಣೆ ಕೂಗಿ ಬೈಕ್ ಹತ್ತಿ ಪಟ್ಟಣದ ಪ್ರಮುಖ ಬೀದಿಗಳ ಮೆರವಣಿಗೆ ನಡೆಸಿ ಸಾರ್ವಜನಿಕರಿಗೆ ಸಿಹಿ ಹಂಚಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಲೋಕ ಕಲ್ಯಾಣಾರ್ಥ ಕಲ್ಯಾಣೋತ್ಸವ ಪೂಜಾ ಮಹೋತ್ಸವ
ಶಿಕ್ಷಕ ವೃತ್ತಿಗೆ ಸಿಗುವ ಗೌರವ ಮತ್ತ್ಯಾವ ವೃತ್ತಿಗೂ ಸಿಗಲಾರದು