ಇನ್ನು 3 ತಿಂಗಳಲ್ಲಿ ನಿವೇಶನ ಹಕ್ಕುಪತ್ರ ವಿತರಣೆ

KannadaprabhaNewsNetwork |  
Published : Aug 16, 2024, 12:47 AM IST
ಶರ‍್ಷಿಕೆ-೧೫ಕೆ.ಎಂ.ಎಲ್.ಆರ್.೨-ಮಾಲೂರು ಪಟ್ಟಣದ ಹೊಂಡಾ ಕ್ರೀಡಾಂಗಣದಲ್ಲಿ ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯ ವತಿಯಿಂದ ಹಮ್ಮಿಕೊಂಡಿದ್ದ ೭೮ನೇ ವರ್ಷದ ಸ್ವಾತಂತ್ರ‍್ಯ ದಿನಾಚರಣೆ ಕರ‍್ಯಕ್ರಮವನ್ನು ಕುರಿತು ಶಾಸಕ ಕೆ.ವೈ.ನಂಜೇಗೌಡ ಮಾತನಾಡಿದರು. | Kannada Prabha

ಸಾರಾಂಶ

ಮಾಲೂರು ಪಟ್ಟಣದ ಅಭಿವೃದ್ದಿಗೆ ಈಗಾಗಲೇ ೧೦೬ ಕೋಟಿ ಅನುದಾನ ಬಿಡುಗಡೆಯಾಗಿದೆ. ಬಸ್ ನಿಲ್ಥಾಣ, ದೊಡ್ಡಕೆರೆ, ಇಂದಿರಾ ಕ್ಯಾಟಿಂನ್, ರಾಜಕಾಲುವೆ ಅಭಿವೃದ್ದಿ, ಉದ್ಯಾನವನ ನಿರ್ಮಾಣ, ಆಶ್ರಯ ನಿವೇಶನಗಳನ್ನು ವಿತರಿಸಲು ಕ್ರಮ ಕೈಗೊಳ್ಳಲಾಗಿದೆ

ಕನ್ನಡಪ್ರಭ ವಾರ್ತೆ ಮಾಲೂರು

ಪಟ್ಟಣದಲ್ಲಿ ಮನೆ ಇಲ್ಲದ ನಿರ್ಗತಿಕರಿಗೆ ಆಶ್ರಯ ಯೋಜನೆಯಡಿ ನಿವೇಶನಗಳನ್ನು ವಿತರಿಸಲು ಜಾಗವನ್ನು ಗುರ್ತಿಸಿ ಮಾರ್ಕಿಂಗ್ ಮಾಡಿಸುತ್ತಿದ್ದು, ಮುಂದಿನ ೩ ತಿಂಗಳ ಒಳಗೆ ಎಲ್ಲ ಫಲಾನುಭವಿಗಳಿಗೆ ಹಕ್ಕುಪತ್ರ ಕೊಡುವುದರ ಜತೆಗೆ ಮನೆ ನಿರ್ಮಿಸಿಕೊಳ್ಳಲು ವ್ಯವಸ್ಥೆ ಮಾಡಲಾಗುವುದು. ಇದಕ್ಕಾಗಿ ಮುಖ್ಯಮಂತ್ರಿಗಳನ್ನು ಆಹ್ವಾನಿಸಿ ಅವರಿಂದ ಗುದ್ದಲಿಪೂಜೆ ನೆರವೇರಿಸಲಾಗುವುದು ಎಂದು ಶಾಸಕ ಕೆ.ವೈ.ನಂಜೇಗೌಡ ಹೇಳಿದರು.

ಪಟ್ಟಣದ ಹೊಂಡಾ ಕ್ರೀಡಾಂಗಣದಲ್ಲಿ ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯ ವತಿಯಿಂದ ಹಮ್ಮಿಕೊಂಡಿದ್ದ ೭೮ನೇ ವರ್ಷದ ಸ್ವಾತಂತ್ರ‍್ಯ ದಿನಾಚರಣೆ ಅಂಗವಾಗಿ ತಾಲೂಕು ಆಡಳಿತ ದಾನಿಗಳ ಸಹಕಾರದಿಂದ ನಿರ್ಮಿಸಿರುವ ೬೫ ಅಡಿ ಎತ್ತರದ ಧ್ವಜ ಸ್ತಂಭ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.

5 ಗ್ಯಾರಂಟಿಗಳ ಅನುಷ್ಠಾನ

ತಾಲೂಕಿನ ಜನತೆ ಶಾಂತಿಯನ್ನು ಬಯಸುವವರು. ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆದಿಲ್ಲ. ಇದನ್ನು ಮುಂದುವರೆಸಿಕೊಂಡು ಹೋಗಬೇಕಾಗಿದೆ. ತಾಲೂಕಿನ ಅಭಿವೃದ್ದಿಯ ದೃಷ್ಠಿಯಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಹಕಾರದಿಂದ ೫ ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನಗೊಳಿಸಿದ್ದು, ಇದರಿಂದ ಪ್ರತಿಯೊಂದು ಕುಟುಂಬಕ್ಕೂ ಸಿಗುತ್ತಿದೆ ಎಂದರು.

ಪಟ್ಟಣದ ಸರಕಾರಿ ಆಸ್ವತ್ರೆಯನ್ನು ಉನ್ನತಿಕರಣಗೊಳಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗಿದೆ. ಮಾಸ್ತಿ ಹಾಗೂ ಟೇಕಲ್ ಗ್ರಾಮದ ಸಮುದಾಯ ಆರೋಗ್ಯ ಕೇಂದ್ರವನ್ನು ಆಸ್ವತ್ರೆಯನ್ನಾಗಿ ಮೇಲ್ಥರ್ಜೆಗೆರಿಸುವುದು. ಪೊಲೀಸ್ ಇಲಾಖೆಗೆ ಸಂಬಂದಿಸಿದಂತೆ ವಸತಿ ಗೃಹ ನಿರ್ಮಾಣಕ್ಕೆ ೩.೨೦ ಕೋಟಿ ಮಂಜೂರಾಗಿದೆ. ಅಲ್ಲದೆ, ಠಾಣೆಗೆ ಡಿವೈಎಸ್ಪಿ ಪೋಸ್ಟಿಂಗ್ ನೀಡುವ ಬಗ್ಗೆ ಗೃಹ ಮಂತ್ರಿಗಳು ಆಶ್ವಾಸನೆ ನೀಡಿದ್ದಾರೆ ಎಂದರು.

ಶೀತಲಗೃಹ ನಿರ್ಮಾಣಕ್ಕೆ ಸಮ್ಮತಿ

ತೋಟಗಾರಿಕೆ ಇಲಾಖೆಗೆ ಸಂಬಂದಿಸಿದಂತೆ ಚವ್ವೇನಹಳ್ಳಿ ಗ್ರಾಮದಲ್ಲಿ ೧೦ ಎಕೆರೆ ವಿಸ್ತೀರ್ಣದಲ್ಲಿ ೧೦.೨೦ ಕೋಟಿ ವೆಚ್ಚದಲ್ಲಿ ಕೋಲ್ಥ್ ಸ್ಟೋರೇಜ್ ನಿರ್ಮಾಣಕ್ಕೆ ಮಂಜೂರಾತಿ ಸಿಕ್ಕಿದೆ. ಪಟ್ಟಣದ ಅಭಿವೃದ್ದಿಗೆ ಈಗಾಗಲೇ ೧೦೬ ಕೋಟಿ ಅನುದಾನ ಬಿಡುಗಡೆಯಾಗಿದೆ. ಬಸ್ ನಿಲ್ಥಾಣ, ದೊಡ್ಡಕೆರೆ, ಇಂದಿರಾ ಕ್ಯಾಟಿಂನ್, ರಾಜಕಾಲುವೆ ಅಭಿವೃದ್ದಿ, ಉದ್ಯಾನವನ ನಿರ್ಮಾಣ, ಆಶ್ರಯ ನಿವೇಶನಗಳನ್ನು ವಿತರಿಸಲು ಕ್ರಮ ಕೈಗೊಳ್ಳಲಾಗಿದೆ ಎಂದರು.

ಪಟ್ಟಣದ ಹಲವು ಶಾಲೆಗಳ ಮಕ್ಕಳಿಂದ ಆಕರ್ಷಕ ಮನರಂಜನಾ ಕರ‍್ಯಕ್ರಮ ನಡೆಯಿತು. ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಡಿದ ಸಾಧಕರನ್ನು ಅಭಿನಂದಿಸಲಾಯಿತು.

ಕಾರ್ಯಕ್ರಮದಲ್ಲಿ ತಹಸೀಲ್ಥಾರ್ ಕೆ.ರಮೇಶ್, ಜಿಪಂ ಮಾಜಿ ಅಧ್ಯಕ್ಷೆ ರತ್ನಮ್ಮ ನಂಜೇಗೌಡ, ಪೋಲೀಸ್ ಇನ್ಸ್ಪೆಕ್ಟರ್ ವಸಂತ್, ಬಿಇಒ ಚಂದ್ರಕಲಾ, ಸರಕಾರಿ ನೌಕರರ ಸಂಘದ ಅಧ್ಯಕ್ಷ ವಿ.ಮುನೇಗೌಡ, ವಿವಿಧ ಇಲಾಖೆಗಳ ಅಧಿಕಾರಿಗಳು, ಜನಪ್ರತಿನಿಗಳು, ಸಂಘ ಸಂಸ್ಥೆಗಳ ಪ್ರತಿನಿಗಳು, ಮುಖಂಡರು ಇನ್ನಿತರು ಹಾಜರಿದ್ದರು.

PREV

Recommended Stories

ಸಾಂಬ್ರಾ ವಿಮಾನ ನಿಲ್ದಾಣದವರೆಗೆ ಚತುಷ್ಪಥ ರಸ್ತೆ
ಮುಷ್ಕರಕ್ಕೆ ನೌಕರರಿಂದ ಮಿಶ್ರ ಪ್ರತಿಕ್ರಿಯೆ