ಹಳೆಬೀಡಿನ ಸರ್ಕಾರಿ ಶಾಲೆಯ ಮಕ್ಕಳಿಗೆ ಕಲಿಕಾ ಸಾಮಗ್ರಿ ವಿತರಣೆ

KannadaprabhaNewsNetwork |  
Published : Jun 21, 2024, 01:03 AM IST
20ಎಚ್ಎಸ್ಎನ್5 : ಸರ್ಕಾರಿ ಶಾಲೆಗೆ ನೋಟ್ ಬುಕ್ ಹಾಗೂ ಕಲಿಕಾ ಸಾಮಗ್ರಿಗಳ ವಿತರಿಸಲಾಯಿತು. | Kannada Prabha

ಸಾರಾಂಶ

ಹಳೆಬೀಡಿನ ಸೊಪ್ಪಿನಹಳ್ಳಿ ಹಾಗೂ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ ಸಿದ್ದಾಪುರ ಶಾಲೆಗಳಿಗೆ ಗ್ರಾಮ ಪಂಚಾಯಿತಿ ವತಿಯಿಂದ ನೋಟ್ ಬುಕ್ ಹಾಗೂ ಕಲಿಕಾ ಸಾಮಗ್ರಿಗಳನ್ನು ಗುರುವಾರ ವಿತರಿಸಲಾಯಿತು. ಬೇಲೂರು ತಾಲೂಕು ಪಂಚಾಯತಿ ಮಾಜಿ ಅಧ್ಯಕ್ಷ ನಳಿನ ಶಿವಕುಮಾರ್ ಬ್ಯಾಗುಗಳನ್ನು ವಿತರಿಸಿದರು.

ಸೊಪ್ಪಿನಹಳ್ಳಿ, ಸಿದ್ಧಾಪುರ ಶಾಲೆಗಳಲ್ಲಿ ಗ್ರಾಮ ಪಂಚಾಯಿತಿ ಕಾರ್ಯಕ್ರಮ

ಹಳೆಬೀಡು: ಸಮೀಪ ಸರ್ಕಾರಿ ಕಿರಿಯ ಪ್ರಾಥಮಿಕ ಪಾಠಶಾಲೆ ಸೊಪ್ಪಿನಹಳ್ಳಿ ಹಾಗೂ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ ಸಿದ್ದಾಪುರ ಶಾಲೆಗಳಿಗೆ ಗ್ರಾಮ ಪಂಚಾಯಿತಿ ವತಿಯಿಂದ ನೋಟ್ ಬುಕ್ ಹಾಗೂ ಕಲಿಕಾ ಸಾಮಗ್ರಿಗಳನ್ನು ಗುರುವಾರ ವಿತರಿಸಲಾಯಿತು.

ಹಳೆಬೀಡಿನ ಸೊಪ್ಪಿನಹಳ್ಳಿ ಹಾಗೂ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ ಸಿದ್ದಾಪುರ ಶಾಲೆಗಳಿಗೆ ಗ್ರಾಮ ಪಂಚಾಯಿತಿ ವತಿಯಿಂದ ನೋಟ್ ಬುಕ್ ಹಾಗೂ ಕಲಿಕಾ ಸಾಮಗ್ರಿಗಳನ್ನು ಗುರುವಾರ ವಿತರಿಸಲಾಯಿತು. ಬೇಲೂರು ತಾಲೂಕು ಪಂಚಾಯತಿ ಮಾಜಿ ಅಧ್ಯಕ್ಷ ನಳಿನ ಶಿವಕುಮಾರ್ ಬ್ಯಾಗುಗಳನ್ನು ವಿತರಿಸಿದರು.

ಬೇಲೂರು ತಾಲೂಕು ಪಂಚಾಯತಿ ಮಾಜಿ ಅಧ್ಯಕ್ಷ ನಳಿನ ಶಿವಕುಮಾರ್ ಬ್ಯಾಗುಗಳನ್ನು ವಿತರಿಸಿ ಮಾತನಾಡಿ, ಸರ್ಕಾರಿ ಶಾಲೆಯನ್ನು ಉಳಿಸಿ-ಬೆಳೆಸಿ ಬಡ ಮಕ್ಕಳಿಗೆ ಉತ್ತಮ ಶಿಕ್ಷಣವನ್ನು ಸರ್ಕಾರಿ ಶಾಲೆ ನೀಡುತ್ತಿದ್ದರೂ ಸಹ ಪೋಷಕರು ಇಂಗ್ಲಿಷ್ ವ್ಯಾಮೋಹದಿಂದ ಖಾಸಗಿ ಶಾಲೆಗೆ ಕಳುಹಿಸುತ್ತಿದ್ದಾರೆ. ಆದರೆ ಉತ್ತಮ ತರಬೇತಿ ಹಾಗೂ ಉತ್ತಮ ಅಂಕ ಗಳಿಸಿದ ಶಿಕ್ಷಕರನ್ನು ಇಲಾಖೆ ನೇಮಕ ಮಾಡಿದ್ದು ಬುದ್ಧಿವಂತ ಶಿಕ್ಷಕರು ಸರ್ಕಾರಿ ಶಾಲೆಯಲ್ಲಿ ಪಾಠ ಮಾಡುತ್ತಿದ್ದು, ಸರ್ಕಾರಿ ಸವಲತ್ತುಗಳೊಂದಿಗೆ ಬಡ ಮಕ್ಕಳು, ಮಧ್ಯಮ ವರ್ಗದವರು ಉತ್ತಮ ಶಿಕ್ಷಣ ಪಡೆಯುವ ಸದುಪಯೋಗ ಪಡೆದುಕೊಳ್ಳಲಿ ಎಂಬುದು ನಮ್ಮ ಅಭಿಲಾಷೆಯಾಗಿದೆ ಎಂದು ಹೇಳಿದರು.

‘ಇಂದು ಸರ್ಕಾರಿ ಶಾಲೆಗಳಲ್ಲಿ ಅತ್ಯಂತ ಬಡ ಮಕ್ಕಳು ಓದುತ್ತಿದ್ದು, ಅವರ ಶ್ರೇಯೋಭಿವೃದ್ಧಿಗೆ ಉತ್ತಮ ಕಲಿಕೆಗಾಗಿ ಸಹಕರಿಸುವುದು ಉತ್ತಮವಾದ ಕೆಲಸವಾಗಿದೆ. ನಾನು ಸುಮಾರು ೧೧ ವರ್ಷಗಳಿಂದ ಈ ಸಣ್ಣ ಅಳಿಲು ಸೇವೆಯನ್ನು ಮಾಡುತ್ತಿದ್ದು, ನಾವು ಸಹ ಸರ್ಕಾರಿ ಶಾಲೆಗಳಲ್ಲಿ ಓದಿದ್ದು ಇಂದು ಸರ್ಕಾರಿ ನೌಕರಿಯಲ್ಲಿದ್ದು ನಮ್ಮಂತೆ ಬಡ ಮಕ್ಕಳು ಉತ್ತಮ ಬದುಕು ಮತ್ತು ಭವಿಷ್ಯವನ್ನು ರೂಪಿಸಿಕೊಳ್ಳಲಿ’ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಈ ವೇಳೆ ಸರ್ಕಾರಿ ಶಾಲೆಯ ಮುಖ್ಯ ಶಿಕ್ಷಕರಾದ ಗಂಗೂರು ಶಿವಕುಮಾರ್, ಜಯಮ್ಮ ಕೆ.ಟಿ., ಕೃಷ್ಣಮೂರ್ತಿ ಕೆ.ಆರ್., ಶಿಕ್ಷಕಿ ನಂಜುಂಡಮ್ಮ, ಸತೀಶ್, ಸಹನಾ, ಉಷಾ, ಮಾಜಿ ಗ್ರಾಪಂ ಸದಸ್ಯ ಸುನೀಲ್ ಭಾಗವಹಿಸಿದ್ದರು.

PREV

Recommended Stories

ಲಕ್ಷ್ಮಿ ಹಬ್ಬದ ಸಂದರ್ಭದಲ್ಲಿ ಗೃಹಲಕ್ಷ್ಮೀ ಯರಿಗೆ ಇಲ್ಲಿದೆ ಸಿಹಿ ಸುದ್ದಿ
''ಪ್ರಜ್ವಲ್‌ ಬಚಾವ್‌ಗೆ ಆತನ ಪೋಷಕರು ತಂತ್ರ ಮಾಡಿದ್ರು ''