ಹೊಸಕೋಟೆ: ತಾಲೂಕಿನ ಬಹುತೇಕ ರೈತರು ಹೈನುಗಾರಿಕೆಯಿಂದಲೇ ಜೀವನ ಮಾಡುತ್ತಿದ್ದು, ಅಂತಹ ರೈತರಿಗೆ ಕಷ್ಟ ಕಾಲದಲ್ಲಿ ಅನುಕೂಲವಾಗಲೆಂದು ಬಮೂಲ್ ಕಲ್ಯಾಣ ಟ್ರಸ್ಟ್ ವತಿಯಿಂದ ಚೆಕ್ ವಿತರಣೆ ಮಾಡಲಾಗಿದೆ ಎಂದು ಬೆಂಗಳೂರು ಹಾಲು ಒಕ್ಕೂಟದ ನಿರ್ದೇಶಕ ಹುಲ್ಲೂರು ಸಿ.ಮಂಜುನಾಥ್ ತಿಳಿಸಿದ್ದಾರೆ.
ತಾಲೂಕಿನ ಬೆಂಗಳೂರು ಸಹಕಾರ ಹಾಲು ಒಕ್ಕೂಟ ನಿಯಮಿತ ಶಿಬಿರದ ಆವರಣದಲ್ಲಿ ಡೇರಿ ಸದಸ್ಯರಿಗೆ ಚೆಕ್ ಹಾಗೂ ಉಚಿತ ಹಾಲಿ ಕ್ಯಾನ್‌ಗಳನ್ನು ವಿತರಿಸಿ ಮಾತನಾಡಿದ ಅವರು, ತಾಲೂಕಾದ್ಯಂತ ಹಾಲು ಸರಬರಾಜು ಮಾಡುವ 6 ಸಾವಿರ ರೈತರಿಗೆ ಹಾಲಿನ ಕ್ಯಾನ್ ವಿತರಿಲಾಗುವುದು. ಮೊದಲ ಹಂತದಲ್ಲಿ 3 ಸಾವಿರ ಹಾಲು ಉತ್ಪಾದಕರಿಗೆ 10 ಲೀಟರ್ ಸಾಮರ್ಥ್ಯದ 16 ಲಕ್ಷ ವೆಚ್ಚದ ಹಾಲಿನ ಕ್ಯಾನ್ ವಿತರಣೆ ಹಾಗೂ 8.5 ಲಕ್ಷ ಪ್ರೋತ್ಸಾಹ ಧನ ಚೆಕ್ ವಿತರಣೆ ಮಾಡಲಾಗಿದೆ. ಉಳಿದ 3 ಸಾವಿರ ಕ್ಯಾನ್‌ಗಳನ್ನು ಲೋಕಸಭೆ ಚುನಾವಣೆ ಬಳಿಕ ವಿತರಿಸಲಾಗುವುದು.ಹೊಸಕೋಟೆ ಶಿಬಿರದ ಮುಖ್ಯ ಅಧಿಕಾರಿ ಶಿವಾಜಿನಾಯಕ್, ಗ್ರಾಪಂ ಅಧ್ಯಕ್ಷರಾದ ನೀಲಾಂಜಿನಪ್ಪ, ಚೊಕ್ಕಹಳ್ಳಿ ಕೆಂಪಣ್ಣ, ಶಿಬಿರಾಧಿಕಾರಿ ಶ್ರೀರಾಮ್, ದೊಡ್ಡಹುಲ್ಲೂರು ಕಿಶೋರ್ ಹಾಗೂ ತಾಲ್ಲೂಕಿನ ಎಂಪಿಸಿಎಸ್ ಘಟಕಗಳ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಹಾಗೂ ಅಧ್ಯಕ್ಷ, ಉಪಾಧ್ಯಕ್ಷರು ಉಪಸ್ಥಿತರಿದ್ದರು.
ಬಾಕ್ಸ್ :ನಾನು ಚಿಕ್ಕಬಳ್ಲಾಪುರ ಟಿಕೆಟ್ ಆಕಾಂಕ್ಷಿಯಾಗಿದ್ದೆ
ಲೋಕಸಭಾ ಕ್ಷೇತ್ರ ಬಿಜೆಪಿ ಅಭ್ಯರ್ಥಿಯಾಗಿ ನಾನು ಸಹ ಆಕಾಂಕ್ಷಿಯಾಗಿದ್ದು, ಅರ್ಜಿ ಹಾಕಿದ್ದೆ. ಆದರೆ ಹೈಕಮಾಂಡ್ ಭೇಟಿ ಮಾಡಿದ ನಂತರ ಸುಧಾಕರ್ ಹಾಗೂ ವಿಶ್ವನಾಥ್ ಅವರ ಅಲೋಕ್ ಕುಮಾರ್‌ಗೆ ತೀವ್ರ ಪೈಪೋಟಿ ಇರುವುದು ಕಂಡು ಬಂತು. ನಾನು ಪಕ್ಷದ ಟಿಕೆಟ್ ಸಿಗದಿದ್ದರೂ ಪಕ್ಷದ ಪರವಾಗಿ ಕೆಲಸ ಮಾಡುತ್ತೇನೆ. ಮೋದಿ ಅವರನ್ನು ಮತ್ತೊಮ್ಮೆ ಪ್ರಧಾನಿ ಮಾಡಲು ಪಕ್ಷಾತೀತವಾಗಿ ಬಿಜೆಪಿ ಪರ ಕೆಲಸ ಮಾಡಲ ಸಿದ್ಧವಿದ್ದೇವೆ ಎಂದು ಬಮುಲ್ ನಿರ್ದೇಶಕ ಹುಲ್ಲೂರು ಸಿ.ಮಂಜುನಾಥ್ ತಿಳಿಸಿದರು.ಫೋಟೋ: 14 ಹೆಚ್‌ಎಸ್‌ಕೆ 1ಹೊಸಕೋಟೆ ತಾಲ್ಲೂಕಿನ ಬೆಂಗಳೂರು ಸಹಕಾರ ಹಾಲು ಒಕ್ಕೂಟ ನಿಯಮಿತ ಶಿಬಿರದ ಆವರಣದಲ್ಲಿ ಹಾಲು ಉತ್ಪಾದಕ ಸದಸ್ಯರುಗಳಿಗೆ ಉಚಿತ ಹಾಲಿ ಕ್ಯಾನ್‌ಗಳನ್ನು ಬಮುಲ್ ನಿರ್ದೇಶಕ ಹುಲ್ಲೂರು ಸಿ.ಮಂಜುನಾಥ್ ವಿತರಿಸಿದರು.