ಕನ್ನಡಪ್ರಭ ವಾರ್ತೆ ಹೊಸಕೋಟೆ
ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಶರತ್ ಬಚ್ಚೇಗೌಡ, ಮೊದಲ ಸಲ ಬಂದಾಗ ಕೊಟ್ಟ ಮಾತಿನಂತೆ ಅಪಾರ್ಟ್ಮೆಂಟಿನ ಯಾವೊಬ್ಬ ನಿವಾಸಿಯು ಈ ಸ್ವತ್ತು ಪಡೆಯಲು ಪಂಚಾಯಿತಿಗೆ ತೆರಳದೆ ತಮ್ಮ ಮನೆಯ ಬಾಗಿಲಲ್ಲಿಯೇ ಪಡೆಯಬಹುದು. ಅದಕ್ಕೆ ಅವಶ್ಯವಿರುವ ದಾಖಲಾತಿಗಳನ್ನು ಪಂಚಾಯಿತಿ ಸಿಬ್ಬಂದಿಯು ತಮ್ಮಲ್ಲಿಗೆ ಬಂದು ದಾಖಲಾತಿಗಳನ್ನು ಸ್ವೀಕರಿಸಿ ಈ ದಿನ 300 ಕುಟುಂಬಗಳಿಗೆ ಈ ಸ್ವತ್ತು ಖಾತೆಗಳನ್ನು ವಿತರಿಸಿದ್ದೇವೆ, ತಾಲೂಕು ಪಂಚಾಯಿತಿ ಕಾರ್ಯನಿರ್ವಣಾಧಿಕಾರಿ ಡಾ.ಸಿ.ಎನ್. ನಾರಾಯಣಸ್ವಾಮಿ ಹಾಗೂ ಗ್ರಾಮ ಪಂಚಾಯಿತಿಯ ಪಿಡಿಒ ಅವರನ್ನು ಶ್ಲಾಘಿಸಿದರು.
ನಿವಾಸಿಗಳ ಬೇಡಿಕೆಗಳನ್ನು ಸುಧೀರ್ಘವಾಗಿ ಚರ್ಚಿಸಿ ಅಧಿಕಾರಿಗಳಿಗೆ ಪರಿಹರಿಸಲು ಸ್ಥಳದಲ್ಲಿಯೇ ಸೂಚಿಸಿದರು. ಸರ್ಕಾರದ ವತಿಯಿಂದ ಈ ಭಾಗಕ್ಕೆ ಕಾವೇರಿ ನೀರಿನ ಸರಬರಾಜು ಪೇಸ್ 6 ನಲ್ಲಿ ಮಾಡಲಾಗುವುದು ಮತ್ತು ಹತ್ತಿರದಲ್ಲಿಯೇ ಬುಲೆಟ್ ಟ್ರೈನಿನ ನಿಲ್ದಾಣವು ಈ ಭಾಗದಲ್ಲಿಯೇ ಬರುತ್ತದೆ ಎಂದರು.ಈ ಕಾರ್ಯಕ್ರಮದಲ್ಲಿ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಡಾ.ಸಿ.ಎನ್. ನಾರಾಯಣಸ್ವಾಮಿ, ವಾಗಟ ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಶ್ರೀಮತಿ ರಾಣಿ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮುನಿವೆಂಕಟಸ್ವಾಮಿ, ಮುಖಂಡರಾದ ಕೆ.ಎಸ್. ಸುರೇಶ್, ಬೋದನ ಹೊಸಹಳ್ಳಿ ಪ್ರಕಾಶ್, ಸಮೇತನಳ್ಳಿ ಸೊಣ್ಣಪ್ಪ ಹಾಗೂ ಮುಖಂಡರು ಭಾಗವಹಿಸಿದ್ದರು.