ಆಶ್ರಯ ಬಡಾವಣೆ, ಅಂಗನವಾಡಿ ಕೇಂದ್ರ ಕಟ್ಟಡಕ್ಕೆ ಭೂಮಿಪೂಜೆ । ₹1.45 ಕೋಟಿ ವೆಚ್ಚ
ಮೂರ್ನಾಲ್ಕು ತಿಂಗಳಲ್ಲಿ ನಿವೇಶನಗಳನ್ನು ವಿಂಗಡಿಸಿ ಮುಂದಿನ ದಿನಗಳಲ್ಲಿ ಮನೆಗಳನ್ನು ಕಟ್ಟಿಸಿಕೊಡುತ್ತೇನೆಂದು ಶಾಸಕ ಡಾ.ಎಂ.ಚಂದ್ರಪ್ಪ ಭರವಸೆ ನೀಡಿದರು.
ಭರಮಸಾಗರ ಹೋಬಳಿ ಬಹದ್ದೂರ್‌ಘಟ್ಟ ಹೊಸಹಟ್ಟಿ ಗ್ರಾಮದಲ್ಲಿ 1.45 ಕೋಟಿ ರು. ವೆಚ್ಚದಲ್ಲಿ ನೂತನ ಆಶ್ರಯ ಬಡಾವಣೆ ನಿರ್ಮಾಣ ಕಾಮಗಾರಿ ಮತ್ತು ಅಂಗನವಾಡಿ ಕೇಂದ್ರ ಕಟ್ಟಡ ಕಾಮಗಾರಿಗೆ ಬುಧವಾರ ಭೂಮಿಪೂಜೆ ಸಲ್ಲಿಸಿ ಮಾತನಾಡಿದರು.ಹೊಸದಾಗಿ ಮತ ಕೇಳಲು ಬಂದಾಗ ಭರಮಸಾಗರದಲ್ಲಿ ಓಡಾಡಲು ರಸ್ತೆಗಳಿರಲಿಲ್ಲ. ಗೆದ್ದ ನಂತರ ಎಲ್ಲಾ ಹಳ್ಳಿಗಳಲ್ಲಿಯೂ ರಸ್ತೆಗಳನ್ನು ಮಾಡಿಸಿದ್ದರಿಂದ ರಸ್ತೆ ರಾಜ ಎಂಬ ಬಿರುದು ನೀಡಿ ಹೆಗಲ ಮೇಲೆ ಎತ್ತಿಕೊಂಡು ಕುಣಿಸಿ ಎರಡನೆ ಬಾರಿಗೂ ನನ್ನನ್ನು ಭರಮಸಾಗರ ವಿಧಾನಸಭಾ ಕ್ಷೇತ್ರದಿಂದ ಚುನಾವಣೆಯಲ್ಲಿ ಗೆಲ್ಲಿಸಿದ್ದೀರಿ. ಹಾಗಾಗಿ ನಿಮ್ಮಗಳ ಋಣ ನನ್ನ ಮೇಲಿರುವುದರಿಂದ ಎಲ್ಲಾ ಜಾತಿ ಜನಾಂಗದವರನ್ನು ಪ್ರೀತಿ, ಗೌರವದಿಂದ ಕಾಣುವುದರ ಜತೆಗೆ ಅಭಿವೃದ್ಧಿ ಕೆಲಸಗಳನ್ನು ಮಾಡಿಸುತ್ತಿದ್ದೇನೆಂದು ತಿಳಿಸಿದರು.
ಭರಮಸಾಗರ ಬಿಜೆಪಿ. ಮಂಡಲ ಅಧ್ಯಕ್ಷ ಶೈಲೇಶ್, ಡಿ.ಎಸ್.ಪ್ರವೀಣ್‍ಕುಮಾರ್, ಆನಂದಪ್ಪ, ಹಿರೇಬೆನ್ನೂರು ರಾಜಣ್ಣ, ಮಂಜಣ್ಣ, ಶಿವಣ್ಣ, ಚಂದ್ರಶೇಖರ್, ಬಸಣ್ಣ ಹನುಮಂತಪ್ಪ, ಚನ್ನಬಸಪ್ಪ, ವಾಸುದೇವ್, ಕೆಆರ್‌ಡಿಐಎಲ್ ಎಂಜಿನಿಯರ್ ತೇಜಸ್, ಗ್ರಾಮದ ಮುಖಂಡರು ಹಾಜರಿದ್ದರು.