ಕನ್ನಡಪ್ರಭ ವಾರ್ತೆ ಕೋಲಾರ
ನಗರದ ತಾಪಂ ಸಭಾಂಗಣದಲ್ಲಿ ತಾಲೂಕು ಮಟ್ಟದ ಕೆಡಿಪಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಪಡಿತರ ಅಕ್ಕಿ ಸರ್ಕಾರ ನೀಡುವುದು ಬಡವರಿಗೆ. ಆದರೆ ಪಡಿತರ ಅಕ್ಕಿ ವಿತರಣೆಯ ಎಲ್ಲ ಸೊಸೈಟಿಗಳಲ್ಲೂ ಅಕ್ರಮ ನಡೆಯುತ್ತಿದೆ. ಇದರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು. ಟಿಪಿಸಿಎಸ್‌ಎಂಸ್‌ಗೆ ವಹಿಸಿತಾಲೂಕಿನ ಎಲ್ಲಾ ಪಡಿತರ ಚೀಟಿದಾರರಿಗೂ ಮೂರು ಕೆಜಿ ಅಕ್ಕಿ ಎರಡು ಕೆಜಿ ರಾಗಿ ಸಮರ್ಪಕವಾಗಿ ಕೊಡಲಾಗುತ್ತಿದೆಯೆ ಇಲ್ಲವೇ ಎಂದು ಕೋಲಾರಮ್ಮ ದೇವರ ಮೇಲೆ ಆಣೆ ಮಾಡಿ ಹೇಳಿ ಎಂದು ಸಂಬಂಧಪಟ್ಟ ಅಧಿಕಾರಿಗೆ ಹೇಳಿದಾಗ ಅಧಿಕಾರಿ ನಕ್ಕು ಏನು ಉತ್ತರ ನೀಡದೇ ಸುಮ್ಮನಾದರು, ಮೂರು ಕೆಜಿ ಅಕ್ಕಿ ಕೊಡುವ ಬದಲು ಕೆಲವು ಕಡೆ ಎರಡು ಕೆಜಿ ಕೊಡುತ್ತಿದ್ದಾರೆ ಎಂದು ದೂರುಗಳು ಬಂದಿವೆ. ಅದನ್ನ ಸರಿಪಡಿಸಬೇಕು ಪಡಿತರವನ್ನು ವಿತರಣೆ ಮಾಡಲು ಟಿಪಿಸಿಎಸ್‌ಎಂಸ್‌ಗೆ ಯಾಕೆ ಕೊಡಬಾರದು, ಈ ಬಗ್ಗೆ ಅಧಿಕಾರಿಗಳು ಗಮನ ಹರಿಸುವಂತೆ ಸೂಚಿಸಿದರು.
ಇಡೀ ತಾಲ್ಲೂಕಿನಾದ್ಯಂತ ಪ್ಲಾಸ್ಟಿಕ್ ಮುಕ್ತ ಮಾಡಲು ಸಭೆಯಲ್ಲಿ ಅಧಿಕಾರಿಗೆ ಸೂಚನೆ ನೀಡಲಾಗಿದೆ, ನಗರಸಭೆ ಹಾಗೂ ಪಂಚಾಯಿತಿ ವ್ಯಾಪ್ತಿಯಗಲ್ಲಿ ಪ್ಲಾಸ್ಟಿಕ್ ಮುಕ್ತ ಮಾಡಲು ನಗರಸಭೆ ಅಧಿಕಾರಿಗಳು ಹಾಗೂ ಪಂಚಾಯಿತಿ ಅಧಿಕಾರಿಗಳು ಕ್ರಮ ವಹಿಸಲು ಸೂಚಿಸಲಾಗಿದೆ. ಇನ್ಮುಂದೆ ಅಂಗಡಿ ಹೋಟೆಲ್ ಗಳಲ್ಲಿ ಪ್ಲಾಸ್ಟಿಕ್ ಬಳಕೆ ಮಾಡದಂತೆ ತಿಳಿಸಲಾಗಿದೆ, ಪ್ಲಾಸ್ಟಿಕ್ ನಿರ್ಮೂಲನೆ ಮಾಡಲು ಒಂದು ತಿಂಗಳ ಗಡುವು ನೀಡಲಾಗಿದೆ ನಂತರ ಪ್ಲಾಸ್ಟಿಕ್ ಕಂಡು ಬಂದಲ್ಲಿ ಅಂತಹ ಅಂಗಡಿಗಳಿಗೆ ೧೦ ಸಾವಿರ ದಂಡ ವಿಧಿಸಲಾಗುವುದು ಎಂದು ಎಚ್ಚರಿಸಿದರು.ಸಭೆಯಲ್ಲಿ ಉಪವಿಭಾಗಾಧಿಕಾರಿ ವೆಂಕಟಲಕ್ಷ್ಮೀ, ಇಒ ಮುನಿಯಪ್ಪ ಇದ್ದರು.
ಬಾಕ್ಸ್ಕೆಲಸ ಮಾಡಿಸಬೇಕು...
ಕೆಡಿಪಿ ಸಭೆ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕ ಕೊತ್ತೂರು ಮಂಜುನಾಥ್, ನಗರಸಭೆ ಕಮಿಷನರ್ ಸರಿಯಾಗಿ ಕೆಲಸ ಮಾಡುತ್ತಿಲ್ಲ ಎಂದು ನಗರಸಭೆ ಸದಸ್ಯರು ಆರೋಪಿಸಿರುವುದು ನನ್ನ ಗಮನಕ್ಕೂ ಬಂದಿದೆ, ಅದು ನಿಜ. ಅವರು ಕೆಲಸ ಮಾಡಿಲ್ಲ ಅಂತ ನಾನು ಸುಮ್ಮನೆ ಬಿಡೋಕೆ ಹಾಗೋದಿಲ್ಲ, ನಾವು ಮುಂದೆ ನಿಂತು ಕೆಲಸ ಮಾಡಿಸಿಕೊಳ್ಳಬೇಕು, ಆ ಕೆಲಸವನ್ನು ನಾವು ಮಾಡುತ್ತಿದ್ದೇವೆ, ಯರಗೋಳ್ ಯೋಜನೆಯಿಂದ ಪ್ರತಿಯೊಂದು ಮನೆಗೂ ನೀರು ತಲುಪುವಂತಹ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ ಅದನ್ನ ನಗರಸಭೆ ಪೌರಾಯುಕ್ತರನ್ನು ಇಟ್ಟುಕೊಂಡೆ ಮಾಡುತ್ತೇವೆ ಎಂದರು.