ದೃಷ್ಟಿ ದೋಷವುಳ್ಳ ವಿದ್ಯಾರ್ಥಿಗಳಿಗೆ ಕನ್ನಡಕ ವಿತರಣೆ

KannadaprabhaNewsNetwork |  
Published : Mar 25, 2024, 12:45 AM IST
ಇನ್ನರ್ ವೀಲ್ ಕ್ಲಬ್ ಆಫ್ ಮಡಿಕೇರಿ ಇವರ ವತಿಯಿಂದ ಕಣ್ಣಿನ ದೋಷ ಇರುವಂತ ವಿದ್ಯಾರ್ಥಿಗಳಿಗೆ ಕನ್ನಡಕಗಳನ್ನು ವಿತರಿಸುವ ಕಾರ್ಯಕ್ರಮ ಜಯಪ್ರಕಾಶ್ ನಾರಾಯಣ ಸ್ಮಾರಕ ಪ್ರೌಢಶಾಲೆಯ ಡಾ. ಎಂ.ಎA ಚಂಗಪ್ಪ ಮೆಮೋರಿಯಲ್ ಹಾಲ್‌ನಲ್ಲಿ ನಡೆಯಿತು. | Kannada Prabha

ಸಾರಾಂಶ

ವಿದ್ಯಾರ್ಥಿಗಳಿಗೆ ಕನ್ನಡಕವನ್ನು ವಿತರಿಸುವ ಕಾರ್ಯಕ್ರಮವನ್ನು ಶ್ವೇತ ಅಯ್ಯಪ್ಪ ನಡೆಸಿಕೊಟ್ಟರು. ಸುಮಾರು ೩೨ ವಿವಿಧ ಶಾಲೆಗಳ ವಿದ್ಯಾರ್ಥಿಗಳಿಗೆ ಕನ್ನಡಕ ವಿತರಿಸಲಾಯಿತು.

ಕನ್ನಡಪ್ರಭ ವಾರ್ತೆ ನಾಪೋಕ್ಲು

ಇನ್ನರ್‌ವೀಲ್ ಕ್ಲಬ್ ಆಫ್ ಮಡಿಕೇರಿ ವತಿಯಿಂದ ಕಣ್ಣಿನ ದೋಷ ಇರುವಂತ ವಿದ್ಯಾರ್ಥಿಗಳಿಗೆ ಕನ್ನಡಕಗಳನ್ನು ವಿತರಿಸುವ ಕಾರ್ಯಕ್ರಮ ವಿರಾಜಪೇಟೆ ಜಯಪ್ರಕಾಶ್ ನಾರಾಯಣ ಸ್ಮಾರಕ ಪ್ರೌಢಶಾಲೆಯ ಡಾ. ಎಂ.ಎಂ. ಚಂಗಪ್ಪ ಮೆಮೋರಿಯಲ್ ಹಾಲ್‌ನಲ್ಲಿ ಶನಿವಾರ ನಡೆಯಿತು.

ಅಧ್ಯಕ್ಷತೆ ವಹಿಸಿದ್ದ ಜಯಪ್ರಕಾಶ್ ನಾರಾಯಣ ಸ್ಮಾರಕ ಪ್ರೌಢಶಾಲೆಯ ಆಡಳಿತ ಮಂಡಳಿಯ ಅಧ್ಯಕ್ಷ ಡಾ. ಎಂ.ಸಿ ಕಾರ್ಯಪ್ಪ ಮಾತನಾಡಿ, ವಿದ್ಯಾರ್ಥಿಗಳು ಕಣ್ಣಿನ ಹಿತದೃಷ್ಟಿಯಿಂದ ಮಿತಿಯಲ್ಲಿ ಮೊಬೈಲ್ ಬಳಕೆ ಮಾಡಬೇಕು. ಸಮತೋಲನ ಆಹಾರದ ಸೇವನೆ ಮಾಡಬೇಕು. ಪ್ರತಿದಿನ ಕಣ್ಣಿನ ಶುಚಿತ್ವದೊಂದಿಗೆ ಕಣ್ಣಿನ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದು ಹೇಳಿದರು.

ಮುಖ್ಯ ಅತಿಥಿ ಐಚ್ಚೆಟ್ಟಿರ ಚಿಣ್ಣಪ್ಪ ಮಾತನಾಡಿ, ನಮ್ಮ ಕಣ್ಣನ್ನು ಹೇಗೆ ನಾವು ಸುರಕ್ಷಿತವಾಗಿಟ್ಟುಕೊಳ್ಳಬೇಕು ಎಂಬುದನ್ನು ವಿದ್ಯಾರ್ಥಿಗಳಿಗೆ ತಿಳಿಸಿಕೊಟ್ಟರು.

ಕ್ಷೇತ್ರ ಸಮನ್ವಯ ಅಧಿಕಾರಿಗಳಾದ ವನಜಾಕ್ಷಿ ಸಭೆಯನ್ನು ಉದ್ದೇಶಿಸಿ ವಿದ್ಯಾರ್ಥಿಗಳಿಗೆ ಹಿತನುಡಿಗಳನ್ನು ಹೇಳಿದರು.

ವಿದ್ಯಾರ್ಥಿಗಳಿಗೆ ಕನ್ನಡಕವನ್ನು ವಿತರಿಸುವ ಕಾರ್ಯಕ್ರಮವನ್ನು ಶ್ವೇತ ಅಯ್ಯಪ್ಪ ನಡೆಸಿಕೊಟ್ಟರು.

ಜಯಪ್ರಕಾಶ್ ನಾರಾಯಣ ಸ್ಮಾರಕ ಪ್ರೌಢಶಾಲೆಯ ನಿವೃತ್ತ ಮುಖ್ಯ ಶಿಕ್ಷಕ ಬಿ.ಎಸ್. ಲಾಲ್ ಕುಮಾರ್, ಇನ್ನರ್ ವೀಲ್ ಸಂಸ್ಥೆಯ ಬಗ್ಗೆ ಪರಿಚಯ ಮಾಡಿಕೊಟ್ಟರು.

ಇನ್ನರ್‌ವೀಲ್ ಸಂಸ್ಥೆಯ ಅಧ್ಯಕ್ಷ ಕಣ್ಣು ದೇವರಾಜ್, ಇನ್ನರ್‌ವೀಲ್‌ ಸಂಸ್ಥೆಯ ಮಾಜಿ ಅಧ್ಯಕ್ಷೆ ಲತಾ ಚಂಗಪ್ಪ, ಜಯ ಪ್ರಕಾಶ್ ನಾರಾಯಣ ಸ್ಮಾರಕ ಪ್ರೌಢಶಾಲೆಯ ನಿರ್ದೇಶಕರಾದ ಡಾ.ಫಾತಿಮಾ ಕಾರ್ಯಪ್ಪ ಹಾಗೂ ಮುಖ್ಯ ಶಿಕ್ಷಕರಾದ ರಾಜೇಗೌಡ, ಶ್ವೇತಾ ಅಯ್ಯಪ್ಪ, ದಿವ್ಯ ಮುತ್ತಣ್ಣ ಹಾಜರಿದ್ದರು.

ಸುಮಾರು ೩೨ ವಿವಿಧ ಶಾಲೆಗಳ ವಿದ್ಯಾರ್ಥಿಗಳಿಗೆ ಕನ್ನಡಕ ವಿತರಿಸಲಾಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಾಜ್ಯದಲ್ಲಿ ಮದ್ಯ ಮಾರಾಟ ನಿಷೇಧವಾಗುತ್ತಾ ?
ಯಾವ ದೇವ್ರಿಗೆ ಪೂಜೆ ಮಾಡಿಸಿದ್ದೀರಿ? : ಮಧುಗೆ ರವಿ!