ಬ್ಯಾಡಗಿ ಜನತಾ ಪ್ಲಾಟಿನ ನಿವಾಸಿಗಳಿಗೆ ಹಕ್ಕುಪತ್ರ ವಿತರಣೆ

KannadaprabhaNewsNetwork | Published : Apr 30, 2025 12:31 AM

ಸಾರಾಂಶ

ಕಳೆದ 1982ರಲ್ಲಿ ಜನತಾ ನಿವೇಶನಗಳಾಗಿ ಪರಿವರ್ತನೆ ಆಗಿತ್ತು. ಆದರೆ ಕಾರಣಾಂತರಗಳಿಂದ ಹಕ್ಕುಪತ್ರದಿಂದ ವಂಚಿತರಾಗಿದ್ದರು.

ಬ್ಯಾಡಗಿ: ಕಳೆದ 4 ದಶಕಗಳಿಂದ ನನೆಗುದಿಗೆ ಬಿದ್ದಿದ್ದ ಮಾಸಣಗಿ ಜನತಾ ಪ್ಲಾಟಿನ ನಿವಾಸಿಗಳಿಗೆ ಹಕ್ಕುಪತ್ರ ವಿತರಿಸುತ್ತಿದ್ದು, ಕ್ಷೇತ್ರದ ಶಾಸಕನಾಗಿದ್ದಕ್ಕೆ ಹೆಮ್ಮೆ ಎನಿಸುತ್ತಿದೆ ಇಂತಹ ಸುವರ್ಣ ಅವಕಾಶ ಕಲ್ಪಿಸಿಕೊಟ್ಟ ಮತದಾರರಿಗೆ ಚಿರಋಣಿ ಎಂದು ಶಾಸಕ ಹಾಗೂ ಅರಣ್ಯ ನಿಗಮದ ಅಧ್ಯಕ್ಷ ಬಸವರಾಜ ಶಿವಣ್ಣನವರ ತಿಳಿಸಿದರು.

ತಾಲೂಕಿನ ಮಾಸಣಗಿ ಗ್ರಾಮದ ಸಿದ್ಧಾರೂಢಮಠದಲ್ಲಿ ಜನತಾ ಪ್ಲಾಟ್ ನಿವಾಸಿಗಳಿಗೆ ಹಕ್ಕುಪತ್ರ ಹಾಗೂ ಇ- ಸ್ವತ್ತು ವಿತರಿಸಿ ಮಾತನಾಡಿದರು.

ಜನರ ಸಮಸ್ಯೆಗಳಿಗೆ ಸ್ಪಂದಿಸಿದ್ದರಿಂದ ಜನಪ್ರತಿನಿಧಿಯಾಗಿ ನಾನೊಂದು ಹೊಸ ಮೈಲಿಗಲ್ಲನ್ನು ತಲುಪಿದೆ ಎಂಬ ಮನೋಭಾವ ಹೊಂದಿದ್ದೇನೆ. ಕಳೆದ 40 ವರ್ಷದಿಂದ ಇಲ್ಲಿನ ಜನರಿಗೆ ಹಕ್ಕುಪತ್ರ ಹಾಗೂ ಇ- ಸ್ವತ್ತು ದೊರಕಿರಲಿಲ್ಲ. ಆದರೆ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಜನರ ಸಂಕಷ್ಕಕ್ಕೆ ಸ್ಪಂದಿಸಲಿದೆ ಎಂಬುದಕ್ಕೆ ಇದಕ್ಕಿಂತ ದೊಡ್ಡ ಉದಾಹರಣೆ ಬೇಕಿಲ್ಲ ಎಂದರು.

ಕಳೆದ 1982ರಲ್ಲಿ ಜನತಾ ನಿವೇಶನಗಳಾಗಿ ಪರಿವರ್ತನೆ ಆಗಿತ್ತು. ಆದರೆ ಕಾರಣಾಂತರಗಳಿಂದ ಹಕ್ಕುಪತ್ರದಿಂದ ವಂಚಿತರಾಗಿದ್ದರು. ಇಲ್ಲಿನ ಫಲಾನುಭವಿಗಳಿಗೆ ವಿತರಿಸಿದ್ದೇನೆ ನೆಮ್ಮದಿಯಿಂದ ತಮ್ಮ ಬದುಕನ್ನು ಸಾಗಿಸಲು ಅವಕಾಶ ಕಲ್ಪಿಸಿದ್ದೇನೆ ಎಂದರು.

ಇದಕ್ಕೂ ಮುನ್ನ ಪ್ರಾಸ್ತಾವಿಕವಾಗಿ ಮಾತನಾಡಿದ ಮಂಜುನಾಥ ಹಾದಿಮನಿ, ಶಾಸಕರ ಇಚ್ಛಾಶಕ್ತಿಯಿಂದ ಕಳೆದ 40 ವರ್ಷಗಳಿಂದ ಹಕ್ಕುಪತ್ರಕ್ಕಾಗಿ ಕಾದಿದ್ದ ಬಡ ಫಲಾನುಭವಿಗಳಿಗೆ ಹಕ್ಕುಪತ್ರ ದೊರಕಿದೆ ಎಂದರು.

ಈ ಸಂದರ್ಭದಲ್ಲಿ ಹಾವೆಮುಲ್ ನಿರ್ದೇಶಕ ಪ್ರಕಾಶ ಬನ್ನಿಹಟ್ಟಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಿವನಗೌಡ ಪಾಟೀಲ, ಕೆಸಿಸಿ ಬ್ಯಾಂಕ್ ನಿರ್ದೇಶಕ ಚನ್ನಬಸಪ್ಪ ಹುಲ್ಲತ್ತಿ, ಮುಖಂಡರಾದ ನಾಗರಾಜ ಆನ್ವೇರಿ, ಮಲ್ಲಪ್ಪ ದೇಸಾಯಿ, ನಿಂಗಪ್ಪ ಹೆಗ್ಗಣ್ಣನವರ, ಗ್ರಾಪಂ ಸದಸ್ಯರಾದ ಶಿವರಾಜ ಬನ್ನಿಹಟ್ಟಿ, ಬಸವರಾಜ ಬನ್ನಿಹಟ್ಟಿ, ನಾಗರಾಜ ಕೊರ್ಲಿ, ರೇಣುಕಾ ತಗಡಿನಮನಿ, ರೇಣುಕಮ್ಮ ಪಡಿಯಣ್ಣನವರ, ಮಂಜಪ್ಪ ಅಂಬ್ಲೆಪ್ಪನವರ, ತಿರಕಪ್ಪ ಗಡ್ಡದವರ ಸೇರಿದಂತೆ ಇತರರಿದ್ದರು. ಮೇ 2ರಂದು ಕಾನೂನು ಅರಿವು ಕಾರ್ಯಕ್ರಮ

ಹಾವೇರಿ: ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ನ್ಯಾಯವಾದಿಗಳ ಸಂಘ, ಕಾರ್ಮಿಕ ಇಲಾಖೆ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಾಗೂ ವಿವಿಧ ಇಲಾಖೆಗಳ ಸಹಯೋಗದಲ್ಲಿ ಅಂತಾರಾಷ್ಟ್ರೀಯ ಕಾರ್ಮಿಕ ದಿನಾಚರಣೆ ಅಂಗವಾಗಿ ಕಾನೂನು ಅರಿವು ಕಾರ್ಯಕ್ರಮ ಮೇ 2ರಂದು ಬೆಳಗ್ಗೆ 10 ಗಂಟೆಗೆ ಶಿಗ್ಗಾಂವಿಯ ಎಚ್ಎಸ್ಎಸ್ ಟೆಕ್‌ ಸ್ಟೈಲ್‌ನಲ್ಲಿ ಜರುಗಲಿದೆ.

ಹಿರಿಯ ದಿವಾಣಿ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಬಿ.ಆರ್. ಮುತಾಲಿಕದೇಸಾಯಿ ಅವರು ಉದ್ಘಾಟನೆ ನೆರವೇರಿಸಲಿದ್ದಾರೆ. ಜಿಲ್ಲಾ ಕಾರ್ಮಿಕ ಅಧಿಕಾರಿ ತರನ್ನುಮ ಬೆಂಗಾಲಿ ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಗಳಾಗಿ ದಿವಾಣಿ ನ್ಯಾಯಾಧೀಶರು ಹಾಗೂ ಜೆಎಂಎಫ್‌ಸಿ ನ್ಯಾಯಾಲಯ ಮತ್ತು ಶಿಗ್ಗಾಂವಿ ತಾಲೂಕು ಕಾನೂನು ಸೇವಾ ಸಮಿತಿ ಸದಸ್ಯ ಕಾರ್ಯದರ್ಶಿ ಅಶ್ವಿನಿ ಚಂದ್ರಕಾಂತ, ತಹಸೀಲ್ದಾರ್ ರವಿಕುಮಾರ ಕೊರವರ, ಜಿಲ್ಲಾ ನ್ಯಾಯವಾದಿಗಳ ಸಂಘದ ಅಧ್ಯಕ್ಷ ಎಸ್.ಎಚ್.ಜತ್ತಿ ಇತರರು ಭಾಗವಹಿಸುವರು.

Share this article