ಶೋಷಿತರ ಅಭಿವೃದ್ಧಿಗೆ ಟೂಲ್ ಕಿಟ್ ವಿತರಣೆ: ನಗರಸಭೆ ಅಧ್ಯಕ್ಷ ಕೆ.ಶೇಷಾದ್ರಿ

KannadaprabhaNewsNetwork |  
Published : Jul 01, 2025, 12:48 AM IST
30ಕೆಆರ್ ಎಂಎನ್ 1.ಜೆಪಿಜಿರಾಮನಗರ ನಗರಸಭೆ ಸಭಾಂಗಣದಲ್ಲಿ ಅಧ್ಯಕ್ಷ ಕೆ.ಶೇಷಾದ್ರಿರವರು ಮಡಿವಾಳ ಸಮುದಾಯದವರಿಗೆ ಕಿಟ್ ಗಳನ್ನು ವಿತರಿಸಿದರು. | Kannada Prabha

ಸಾರಾಂಶ

ಸಮಾಜದಲ್ಲಿನ ಶ್ರಮಿಕರಿಗೆ ಸ್ಪಂದಿಸಬೇಕು ಎಂಬುದು ಡಾ.ಬಿ.ಆರ್.ಅಂಬೇಡ್ಕರ್, ಬಸವಣ್ಣ ಮುಂತಾದ ದಾರ್ಶನಿಕರ ಹಿತೋಕ್ತಿಗಳು. ಇದಕ್ಕೆ ಅನುಗುಣವಾಗಿ ನಗರಸಭೆ ಮೂಲಕ ಈ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.

ಕನ್ನಡಪ್ರಭ ವಾರ್ತೆ ರಾಮನಗರ

ಶೋಷಿತ ಸಮಾಜದವರಿಗೆ ಅವರ ವೃತ್ತಿಗೆ ಅನುಗುಣವಾಗಿ ಟೂಲ್ ಕಿಟ್ ಗಳನ್ನು ನೀಡಿ ಆರ್ಥಿಕವಾಗಿ ಸಬಲರನ್ನಾಗಿ ಮಾಡಿ ಸಮಾಜದ ಮುಖ್ಯ ವಾಹಿನಿಗೆ ತರುವುದು ನಗರಸಭೆ ಮುಖ್ಯ ಉದ್ದೇಶವಾಗಿದೆ ಎಂದು ನಗರಸಭೆ ಅಧ್ಯಕ್ಷ ಕೆ.ಶೇಷಾದ್ರಿ (ಶಶಿ) ಹೇಳಿದರು.

ನಗರಸಭೆ ಸಭಾಂಗಣದಲ್ಲಿ ಮಡಿವಾಳ ಸಮುದಾಯದವರಿಗೆ ಕಿಟ್ ಗಳನ್ನು ವಿತರಿಸುವುದಕ್ಕೂ ಮುನ್ನ ಮಾತನಾಡಿದ ಅವರು, ಬೀದಿ ಬದಿ ವ್ಯಾಪಾರಿಗಳಿಗೆ ಛತ್ರಿಗಳು, ಸವಿತಾ ಸಮಾಜದ ವೃತ್ತಿನಿರತರು, ಮಡಿವಾಳರು ಸೇರಿದಂತೆ ಎಲ್ಲ ಸಮುದಾಯಗಳ ವೃತ್ತಿ ನಿರತರಿಗೆ ಅವರ ವೃತ್ತಿಗೆ ಅನುಗುಣವಾಗಿ ಪರಿಕರಗಳ ಕಿಟ್ ಗಳನ್ನು ನಗರಸಭೆ ವತಿಯಿಂದ ವಿತರಣೆ ಮಾಡಿ ಆರ್ಥಿಕವಾಗಿ ಶಕ್ತಿ ತುಂಬುವ ಕೆಲಸ ಮಾಡುತ್ತಿದ್ದೇವೆ ಎಂದರು.

2025-26ನೇ ಸಾಲಿನ ಆಯವ್ಯಯದಲ್ಲಿ ಘೋಷಿಸಿದಂತೆ ನಗರಸಭಾ ವ್ಯಾಪ್ತಿಯಲ್ಲಿ ತಮ್ಮ ಸಮುದಾಯದ ಮೂಲ ವೃತ್ತಿಯಲ್ಲಿ ತೊಡಗಿಸಿಕೊಂಡವರಿಗೆ ಅವರ ವೃತ್ತಿಗೆ ಅನುಗುಣವಾಗಿ ಟೂಲ್ ಕಿಟ್ಗಳನ್ನು ಕೊಡುತ್ತಿದ್ದೇವೆ.

ಆಯವ್ಯಯ ಮಂಡಿಸಿದ ಮೂರು ತಿಂಗಳಿನಲ್ಲೇ ವೃತ್ತಿನಿರತರಿಗೆ ಕಿಟ್ಗಳನ್ನು ವಿತರಿಸಲಾರಂಭಿಸಿದ್ದೇವೆ. ಇದಕ್ಕೆ ನಗರಸಭಾ ಸದಸ್ಯರು ಹಾಗೂ ಅಧಿಕಾರಿಗಳ ಸಹಕಾರ ದೊರಕಿದೆ ಎಂದು ತಿಳಿಸಿದರು.

ಮಡಿವಾಳ ಸಮುದಾಯದ 45 ಮಂದಿ ವೃತ್ತಿದಾರರಿಗೆ ಇಸ್ತ್ರಿ ಪೆಟ್ಟಿಗೆ, ಬೆಡ್ಶೀಟ್ ಉಳ್ಳ ಕಿಟ್ ಗಳನ್ನು ವಿತರಿಸುತ್ತಿದ್ದೇವೆ. ಇದೇ ರೀತಿ ಸವಿತಾ ಸಮಾಜದ ವೃತ್ತಿನಿರತರಿಗೂ ಕಿಟ್ ಗಳು, ಬೀದಿ ಬದಿ ವ್ಯಾಪಾರಿಗಳಿಗೆ ದೊಡ್ಡ ಗಾತ್ರದ ಛತ್ರಿಗಳನ್ನು ವಿತರಿಸಲಾಗಿದೆ ಎಂದು ಹೇಳಿದರು.

ಸಮಾಜದಲ್ಲಿನ ಶ್ರಮಿಕರಿಗೆ ಸ್ಪಂದಿಸಬೇಕು ಎಂಬುದು ಡಾ.ಬಿ.ಆರ್.ಅಂಬೇಡ್ಕರ್, ಬಸವಣ್ಣ ಮುಂತಾದ ದಾರ್ಶನಿಕರ ಹಿತೋಕ್ತಿಗಳು. ಇದಕ್ಕೆ ಅನುಗುಣವಾಗಿ ನಗರಸಭೆ ಮೂಲಕ ಈ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಭವಿಷ್ಯದಲ್ಲಿಯೂ ಇಂತಹ ಕಾರ್ಯಕ್ರಮಗಳು ಮುಂದುವರೆಯಲಿವೆ ಎಂದು ತಿಳಿಸಿದರು.

ವಿದ್ಯುತ್ ಚಿತಾಗಾರ ಸೇವೆಗೆ ಲಭ್ಯ :

ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ರವರ ಆಶಯ ಹಾಗೂ ಮಾಜಿ ಸಂಸದ ಡಿ.ಕೆ.ಸುರೇಶ್ ರವರ ಕಾಳಜಿಯಿಂದಾಗಿ ರಾಮನಗರದಲ್ಲಿ ವಿದ್ಯುತ್ ಚಿತಾಗಾರ ಕಟ್ಟಡ ನಿರ್ಮಾಣಗೊಂಡಿದೆ. ಪರಿಸರ ಉಳಿಸುವುದು ಅವರ ಉದ್ದೇಶ. ಚಿತಾಗಾರಕ್ಕೆ ಅಗತ್ಯವಿರುವ ಎಲ್ಲ ಸಿದ್ದತೆಗಳನ್ನು ಮಾಡಿಕೊಳ್ಳಲಾಗುತ್ತಿದೆ. ಇನ್ನು ಕೆಲವೇ ದಿನಗಳಲ್ಲಿ ಇದು ನಾಗರೀಕರ ಸೇವೆಗೆ ಲಭ್ಯವಾಗಲಿದೆ ಎಂದು ಕೆ.ಶೇಷಾದ್ರಿ ಹೇಳಿದರು.

ನಗರಸಭೆ ಉಪಾಧ್ಯಕ್ಷೆ ಆಯಿಷಾ ಬಾನು, ಆಯುಕ್ತ ಡಾ.ಜಯಣ್ಣ, ಸದಸ್ಯರಾದ ನಿಜಾಮುದ್ದೀನ್ ಷರೀಫ್, ನರಸಿಂಹ, ಅಜ್ಮತ್, ಸೋಮಶೇಖರ್, ಪಾರ್ವತಮ್ಮ, ಮೊಯಿನ್ , ಅಕ್ಲಿಂ, ಗಿರಿಜಮ್ಮ, ನಾಗಮ್ಮ ಇತರರಿದ್ದರು.

PREV

Recommended Stories

ಧರ್ಮಸ್ಥಳ ಗ್ರಾಮ ಕೇಸ್‌ ರೀತಿ ಶ್ವಾನ ಮೂಳೆ ಪತ್ತೆಗೆ ಎಸ್‌ಐಟಿ?
ಎಸ್ಸೆಸ್ಸೆಲ್ಸಿ- ಪಿಯು : ಈ ವರ್ಷವೂ 3 ಪರೀಕ್ಷೆ ಉದ್ದೇಶ ಫೇಲ್‌