ಗ್ರಂಥಾಲಯಗಳನ್ನು ಯುವಕರು ಸದ್ಬಳಿಸಿಕೊಳ್ಳಲು ಜಿಲ್ಲಾಧಿಕಾರಿ ಅಕ್ರಂಪಾಷ ಸಲಹೆ

KannadaprabhaNewsNetwork |  
Published : Nov 16, 2024, 12:35 AM IST
೧೪ಕೆಎಲ್‌ಆರ್-೧೧ಕೋಲಾರದ ಸರ್ಕಾರಿ ಡಿ.ವಿ.ಜಿ. ಗ್ರಂಥಾಲಯ ಕೇಂದ್ರದಲ್ಲಿ ಜಿಲ್ಲಾ ಗ್ರಂಥಾಲಯ ಸಪ್ತಾಹ ಕಾರ್ಯಕ್ರಮ ಜಿಲ್ಲಾಧಿಕಾರಿ ಅಕ್ರಂಪಾಷ ಉದ್ಘಾಟಿಸಿದರು. | Kannada Prabha

ಸಾರಾಂಶ

ಆಗ ಗ್ರಂಥಾಲಯಗಳೇ ಅಧ್ಯಯನಕ್ಕೆ ಆಸರೆಯಾಗಿದ್ದವು. ಹಾಗಾಗಿ ಗ್ರಂಥಾಲಯಗಳು ಬಹಳ ಮಹತ್ವವಾದ ಸ್ಥಾನಮಾನ ಪಡೆದಿತ್ತು ಎಂದು ಅಕ್ರಂ ಪಾಷ ಹೇಳಿದರು.

ಕನ್ನಡಪ್ರಭ ವಾರ್ತೆ ಕೋಲಾರಪುಸ್ತಕಗಳೇ ದೇವರು, ಗ್ರಂಥಾಲಯಗಳೇ ದೇಗುಲಗಳು ಇದ್ದಂತೆ. ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಲು ಅವಶ್ಯಕವಾದ ಅಧ್ಯಯನಕ್ಕೆ ಗ್ರಂಥಾಲಯವು ಸೂಕ್ತವಾದ ಸ್ಥಳವಾಗಿದೆ. ಪರೀಕ್ಷೆಗಳಿಗೆ ಪೂರಕವಾದ ಎಲ್ಲಾ ಮಾಹಿತಿಗಳ ವಿವಿಧ ಪುಸ್ತಕಗಳು ಸರ್ಕಾರಿ ಗ್ರಂಥಾಲಯದಲ್ಲಿ ಲಭ್ಯವಿದ್ದು, ವಿದ್ಯಾರ್ಥಿಗಳು ಗ್ರಂಥಾಲಯ ಸದ್ಬಳಿಸಿಕೊಂಡು ಭವಿಷ್ಯದಲ್ಲಿ ಉತ್ತಮ ಸ್ಥಾನಮಾನ ಪಡೆದು ಸಮಾಜಮುಖಿಗಳಾಗಿ ಸೇವೆ ಸಲ್ಲಿಸುವಂತಾಗಬೇಕೆಂದು ಜಿಲ್ಲಾಧಿಕಾರಿ ಅಕ್ರಂಪಾಷ ಕಿವಿಮಾತು ಹೇಳಿದರು.ನಗರದ ಸರ್ಕಾರಿ ಡಿ.ವಿ.ಜಿ. ಗ್ರಂಥಾಲಯ ಕೇಂದ್ರದಲ್ಲಿ ಜಿಲ್ಲಾ ಗ್ರಂಥಾಲಯ ಸಪ್ತಾಹ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಆಧುನಿಕ ತಂತ್ರಜ್ಞಾನ ಬೆಳವಣಿಗೆಯಿಂದ ಗ್ರಂಥಾಲಯವು ಮಹತ್ವದ ಸ್ಥಾನ ಕಳೆದು ಕೊಳ್ಳುತ್ತಿರುವುದು ಕಳವಳಕಾರಿಯಾಗಿದೆ. ಈ ಹಿಂದೆ ಇಂಟರ್ ನೆಟ್‌ಗಳು ಇರಲಿಲ್ಲ. ಆಗ ಗ್ರಂಥಾಲಯಗಳೇ ಅಧ್ಯಯನಕ್ಕೆ ಆಸರೆಯಾಗಿದ್ದವು. ಹಾಗಾಗಿ ಗ್ರಂಥಾಲಯಗಳು ಬಹಳ ಮಹತ್ವವಾದ ಸ್ಥಾನಮಾನ ಪಡೆದಿತ್ತು ಎಂದು ಅಭಿಪ್ರಾಯಪಟ್ಟರು.ಒಂದು ಅಂಗೈಯಲ್ಲಿ ವಿಶ್ವದ ಯಾವೂದೆ ಮಾಹಿತಿಗಳು, ಯಾವುದೇ ಸಂರ್ಪಕವನ್ನು ಪಡೆಯುವಷ್ಟು ತಂತ್ರಜ್ಞಾನವು ಮುಂದುವರೆದಿರುವುದು. ವಿವಿಧ ಮಾದರಿಯ ನೆಟ್‌ವರ್ಕ್‌ಗಳ ಮೂಲಕ ಮಾಹಿತಿಗಳು, ವಿಡಿಯೋಗಳಲ್ಲಿ ಮಾಹಿತಿಗಳು ಸಿಗುತ್ತದೆ ಅದರೆ ಇವೆಲ್ಲದಕ್ಕಿಂತ ಪುಸ್ತಕಗಳಲ್ಲಿ ಸಿಗುವಂತ ಮಾಹಿತಿ ವಿಚಾರಗಳೇ ಪರಿಪೂರ್ಣವಾಗಿರುತ್ತದೆ ಮನಸ್ಸಿನಲ್ಲಿ ನೆಲೆಸುತ್ತವೆ ಎಂದು ತಿಳಿಸಿದರು.ಆದರೆ ಇಂದು ವಿದ್ಯಾರ್ಥಿಗಳು ಟ್ಯಾಬ್‌ಗಳಿಲ್ಲದೆ ಓದುವುದಿಲ್ಲ, ಪರೀಕ್ಷೆಗಳ ತಯಾರಿ ನಡೆಸುವುದಿಲ್ಲ ಎಂದ ಅವರು, ಯಾವುದೇ ವಿಷಯಗಳು ೫ ರಿಂದ ೩೦ ಅಥವಾ ೪೦ ನಿಮಿಷ ಏಕಾಗ್ರತೆ ಕಾಣಬಹುದು, ಆದರೆ ಇಂದು ೪-೫ ನಿಮಿಷಗಳು ಸಹ ವಿದ್ಯಾರ್ಥಿಗಳಲ್ಲಿ ಏಕಾಗ್ರತೆ ಎಂಬುವುದು ಕಂಡು ಬಾರದೆ ಚಂಚಲತೆಯಿಂದ ಕೊಡಿರುತ್ತದೆ. ಪುಸ್ತಕಗಳನ್ನು ಅಧ್ಯಯನ ಮಾಡುವುದರಿಂದ ಏಕಾಗ್ರತೆ ಬೆಳೆಸಿಕೊಳ್ಳಬಹುದಾಗಿದೆ ಎಂದರು.ಈ ಹಿಂದೆ ಯಾವ ವಿಷಯಗಳ ಅಧ್ಯಯನ ಮಾಡಬೇಕೆಂಬ ಗೊಂದಲಗಳಿದ್ದವು, ಆದರೆ ಈ ಎಲ್ಲಾ ಸಮಸ್ಯೆಗಳನ್ನು ಬಗೆಹರಿಸುವಂತ ವಿಚಾರಗಳ ಮಾಹಿತಿಗಳು ಗ್ರಂಥಾಲಗಳಲ್ಲಿನ ಪುಸ್ತಕಗಳಲ್ಲಿ ಲಭ್ಯವಿರುತ್ತದೆ. ಪುಸ್ತಕಗಳಲ್ಲಿ ಸಂಪೂರ್ಣವಾದ ವಿಚಾರಗಳನ್ನು ಅರಿಯಬಹುದಾಗಿದೆ. ಪುಸ್ತಕಗಳಲ್ಲಿರುವಷ್ಟು ಅರ್ಥಪೂರ್ಣ ವಿಶಾಲವಾದ ಮಾಹಿತಿಗಳು ನಿಮಗೆ ಮೊಬೈಲ್ ವಿಡಿಯೋಗಳಲ್ಲಿ ಸಿಗುವುದಿಲ್ಲ. ಪುಸ್ತಕಗಳ ಅಧ್ಯಯನದಿಂದ ನಿಮ್ಮ ಜ್ಞಾನವು ವಿಕಸನಗೊಳ್ಳುತ್ತದೆ ಹಾಗಾಗಿ ಪುಸ್ತಕಗಳ ಅಧ್ಯಯನಕ್ಕೆ ಹೆಚ್ಚಿನ ಒತ್ತು ನೀಡುವಂತಾಗಬೇಕೆಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.ಇಂದು ಪ್ರತಿ ಗ್ರಾಪಂ ಮಟ್ಟದಲ್ಲಿ ಡಿಜಿಟಲ್ ಲೈಬ್ರರಿಗಳು ಸ್ಥಾಪನೆಯಾಗುತ್ತಿದ್ದು, ಮಕ್ಕಳಲ್ಲಿ ಯುವಕರಲ್ಲಿ ಜ್ಞಾನ ವಿಕಸನಗೊಳ್ಳಲು ಸರ್ಕಾರವು ಹಲವಾರು ಯೋಜನೆಗಳನ್ನು ಜಾರಿ ಮಾಡಿದೆ ಅವುಗಳನ್ನು ಸದ್ಬಳಿಸಿಕೊಳ್ಳುವಂತಾಗಬೇಕೆಂದು ಹೇಳಿದರು.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಬಿ.ವಿ. ಗೋಪಿನಾಥ್ ಮಾತನಾಡಿ, ಗ್ರಂಥಾಲಯವು ಜ್ಞಾನಕ್ಕೆ ಬೆಳಕು ತೋರುವಂತ ದಾರಿ ದೀಪವಾಗಿದೆ. ದೀಪವು ಬೆಳಗಲು ಯಾವುದೇ ರೀತಿ ಕರ್ಪೂರದ ಮಾದರಿಯಲ್ಲಿ ಲಂಚ ಭ್ರಷ್ಟಾಚಾರದ ಲಾಭಿಗಳಿಲ್ಲದೆ ಪುಸ್ತಕಗಳು ನಿಮ್ಮ ಜ್ಞಾನದ ಕಿಟಕಿಗಳನ್ನು ತೆರೆದು ಬೆಳಕು ಚೆಲ್ಲಲಿದೆ ಎಂದು ಬಣ್ಣಿಸಿದರು.ಸರ್ಕಾರಿ ಶಾಲೆಯಲ್ಲಿ ವ್ಯಾಸಂಗ ಮಾಡಿದವರು ದಡ್ಡರಲ್ಲ ಎಂಬುವುದಕ್ಕೆ ನಮ್ಮ ಜಿಲ್ಲಾಧಿಕಾರಿ ಅಕ್ರಂಪಾಷ ಅವರೇ ಉದಾಹರಣೆ, ಜಿಲ್ಲೆಯಲ್ಲಿ ಪ್ರತಿಯೊಂದು ಕೆಲಸಕ್ಕೆ ಸಾರ್ವಜನಿಕರು ಕಚೇರಿಗಳಿಗೆ ಅಲೆದಾಡಬೇಕಾಗಿತ್ತು, ಆದರೆ ಜಿಲ್ಲಾಧಿಕಾರಿ ಅಕ್ರಂಪಾಷ ಸರ್ಕಾರಿ ಸೇವೆಗಳನ್ನು ಮನೆ ಬಾಗಿಲಿಗೆ ತಲುಪುವಂತೆ ಆಡಳಿತವನ್ನು ಚುರುಕುಗೊಳಿಸಿದ್ದಾರೆ ಎಂದು ಅವರ ಸೇವೆಯ ಸಾಧನೆ ಶ್ಲಾಘಿಸಿದರು.ಡಿಡಿಪಿಐ ಕೃಷ್ಣಮೂರ್ತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ವಿಜಯಲಕ್ಷ್ಮಿ, ಜಿಲ್ಲಾ ಕೇಂದ್ರದ ಗ್ರಂಥಾಲಯದ ಉಪನಿರ್ದೇಶಕ ಗಣೇಶ್.ಸಿ, ಗ್ರಂಥಪಾಲಕಿ ಆರ್.ನಾಗವೇಣಿ ಇದ್ದರು.ಫೋಟೋ: ಕೋಲಾರ ಸರ್ಕಾರಿ ಡಿ.ವಿ.ಜಿ. ಗ್ರಂಥಾಲಯ ಕೇಂದ್ರದಲ್ಲಿ ಜಿಲ್ಲಾ ಗ್ರಂಥಾಲಯ ಸಪ್ತಾಹ ಕಾರ್ಯಕ್ರಮವನ್ನು ಡಿಸಿ ಅಕ್ರಂಪಾಷ ಉದ್ಘಾಟಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಾಜ್ಯದಲ್ಲಿ ಮದ್ಯ ಮಾರಾಟ ನಿಷೇಧವಾಗುತ್ತಾ ?
ಯಾವ ದೇವ್ರಿಗೆ ಪೂಜೆ ಮಾಡಿಸಿದ್ದೀರಿ? : ಮಧುಗೆ ರವಿ!