ಡಿಸಿ ಅವರು ಆಗಾಗ ಹಾಸನ ನಗರ ಮತ್ತು ಸುತ್ತ ಮುತ್ತ ರೌಂಡ್ಸ್ ಮಾಡಿ ಇಲ್ಲಿನ ಜನರಿಗೆ ಅನುಕೂಲವಾಗುವ ಹಾಗೂ ಸಮಸ್ಯೆ ಇರುವುದನ್ನು ಸರಿಪಡಿಸಲು ಪರಿಶೀಲನೆ ನಡೆಸುತ್ತಲೆ ಇದ್ದಾರೆ. ಮಂಗಳವಾರವು ಕೂಡ ತಮ್ಮ ಮನೆಯಿಂದ ಎನ್.ಆರ್. ವೃತ್ತಕ್ಕೆ ಆಗಮಿಸಿದಾಗ ಅಲ್ಲಿ ಕೆಲಸಕ್ಕೆಂದು ಕೂಲಿ ಕಾರ್ಮಿಕರು ಗುಂಪು ಸೇರಿದನ್ನ ಗಮನಿಸಿ ವಿಚಾರಿಸಿದರು. ಇವರಿಗೆ ಇದುವರೆಗೂ ಕೂಲಿ ಕಾರ್ಮಿಕರ ಸೌಲಭ್ಯ ಸಿಗದ ಬಗ್ಗೆ ಚರ್ಚಿಸಿದರು. ಎಲ್ಲರೂ ಆಧಾರ್ ಕಾರ್ಡ್ ಹಾಗೂ ಇತರೆ ದಾಖಲೆ ತಂದುಕೊಟ್ಟರೇ ಶೀಘ್ರದಲ್ಲಿಯೇ ಕಾರ್ಮಿಕರ ಕಾರ್ಡ್ ಕೊಡುವ ವ್ಯವಸ್ಥೆ ಮಾಡಲಾಗುವುದು ಎಂದು ತಿಳಿಸಿದರು.
ಕನ್ನಡಪ್ರಭ ವಾರ್ತೆ ಹಾಸನ
ಬೆಳ್ಳಂ ಬೆಳಿಗ್ಗೆ ಡಿಸಿ ಲತಾಕುಮಾರಿ ಅವರು ನಗರ ಸುತ್ತಿದಲ್ಲದೇ ಕೂಲಿ ಕಾರ್ಮಿಕರಿಗೆ ಕಾರ್ಮಿಕರ ಕಾರ್ಡ್ ಪಡೆಯಲು ಸಲಹೆ ನೀಡಿದರು, ಸಾಲಗಾಮೆ ರಸ್ತೆ ಎರಡು ಬದಿ ನಡೆಯುವ ಸಂತೆ ವ್ಯಾಪಾರ ಸ್ಥಳ, ಜಿಲ್ಲಾ ಕ್ರೀಡಾಂಗಣದ ಪರಿಶೀಲನೆ ಮಾಡಿದರು. ಜಿಲ್ಲೆಗೆ ಜಿಲ್ಲಾಧಿಕಾರಿಯಾಗಿ ಬಂದ ಕೆಲ ದಿನಗಳಲ್ಲೆ ಡಿಸಿ ಅವರು ಆಗಾಗ ಹಾಸನ ನಗರ ಮತ್ತು ಸುತ್ತ ಮುತ್ತ ರೌಂಡ್ಸ್ ಮಾಡಿ ಇಲ್ಲಿನ ಜನರಿಗೆ ಅನುಕೂಲವಾಗುವ ಹಾಗೂ ಸಮಸ್ಯೆ ಇರುವುದನ್ನು ಸರಿಪಡಿಸಲು ಪರಿಶೀಲನೆ ನಡೆಸುತ್ತಲೆ ಇದ್ದಾರೆ. ಮಂಗಳವಾರವು ಕೂಡ ತಮ್ಮ ಮನೆಯಿಂದ ಎನ್.ಆರ್. ವೃತ್ತಕ್ಕೆ ಆಗಮಿಸಿದಾಗ ಅಲ್ಲಿ ಕೆಲಸಕ್ಕೆಂದು ಕೂಲಿ ಕಾರ್ಮಿಕರು ಗುಂಪು ಸೇರಿದನ್ನ ಗಮನಿಸಿ ವಿಚಾರಿಸಿದರು. ಇವರಿಗೆ ಇದುವರೆಗೂ ಕೂಲಿ ಕಾರ್ಮಿಕರ ಸೌಲಭ್ಯ ಸಿಗದ ಬಗ್ಗೆ ಚರ್ಚಿಸಿದರು. ಎಲ್ಲರೂ ಆಧಾರ್ ಕಾರ್ಡ್ ಹಾಗೂ ಇತರೆ ದಾಖಲೆ ತಂದುಕೊಟ್ಟರೇ ಶೀಘ್ರದಲ್ಲಿಯೇ ಕಾರ್ಮಿಕರ ಕಾರ್ಡ್ ಕೊಡುವ ವ್ಯವಸ್ಥೆ ಮಾಡಲಾಗುವುದು ಎಂದು ತಿಳಿಸಿದರು. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ಡಿಸಿ ಸೂಚಿಸಿದರು. ಪಕ್ಕದಲ್ಲೆ ಬೀದಿ ಬದಿ ತಳ್ಳುವ ತಿಂಡಿ ಗಾಡಿಯಲ್ಲಿ ವಿದ್ಯಾರ್ಥಿನಿಯರು ಹಾಗೂ ವಿದ್ಯಾರ್ಥಿಗಳು ಬೆಳಗಿನ ಉಪಹಾರ ಸೇವನೆ ಮಾಡುತ್ತಿರುವ ಸ್ಥಳಕ್ಕೆ ಬಂದು ಸ್ವಚ್ಛತೆ ಹಾಗೂ ಆರೋಗ್ಯದ ಬಗ್ಗೆ ಜಾಗರೂಕತೆಯಿಂದ ಇರಲು ಸೂಚಿಸಿದರು.
ಇದಾದ ಬಳಿಕ ಸಾಲಗಾಮೆ ರಸ್ತೆಗೆ ಬಂದಾಗ ಮಂಗಳವಾರದ ಸಂತೆ ನಡೆಯುತಿತ್ತು. ಇಲ್ಲಿ ಪ್ರತಿನಿತ್ಯ ನೂರಾರು ವಾಹನಗಳು ಓಡಾಡುವ ಜಾಗವಾಗಿದ್ದು, ರಸ್ತೆ ಮೇಲೆ ಸಂತೆ ನಡೆಯುವುದರಿಂದ ಅಪಘಾತ ಸಂಭವಿಸಬಹುದು. ಈ ಸಂತೆಗೆ ಪರ್ಯಾಯವಾದ ವಿಶಾಲ ಜಾಗದಲ್ಲಿ ಅವಕಾಶ ಕಲ್ಪಿಸಬೇಕಾಗಿದೆ ಎಂದು ಡಿಸಿ ಹೇಳಿದರು. ನಂತರ ಜಿಲ್ಲಾ ಕ್ರೀಡಾಂಗಣದ ಮುಖ್ಯದ್ವಾರದ ಮೂಲಕ ಒಳ ಪ್ರವೇಶ ಮಾಡಿ ಅಲ್ಲೆ ಇದ್ದ ಖಾಲಿ ಜಾಗದ ಬಗ್ಗೆ ನಗರಸಭೆ ಆಯುಕ್ತ ಕೃಷ್ಣೇಗೌಡ ಮತ್ತು ತಹಸೀಲ್ದಾರ್ ಗೀತಾ ಸಲಹೆ ನೀಡಿದರು. ಕೊರೋನಾ ಸಮಯದಲ್ಲಿ ಕೆಲ ತಿಂಗಳುಗಳ ಕಾಲ ಸಂತೆ ನಡೆಯಲು ಅವಕಾಶ ನೀಡಿದ ಬಗ್ಗೆ ಮಾಹಿತಿ ನೀಡಿದರು. ಆದರೆ ಕ್ರೀಡಾಂಗಣದ ಕೋಚರ್ ಹಾಗೂ ಆಟಗಾರರು ಇದಕ್ಕೆ ಆಕ್ಷೇಪಣೆ ಮಾಡಿದರು. ಇದು ಕ್ರೀಡಾಂಗಣವಾಗಿದ್ದು, ಸಂತೆ ನಡೆಯುವುದರಿಂದ ಸಮಸ್ಯೆ ಆಗುತ್ತದೆ. ದಯಮಾಡಿ ಬೇರೆ ಕಡೆ ಮಾಡಿದರೆ ಒಳಿತು ಎಂದು ಮನವಿ ಮಾಡಿದರು. ನಂತರ ಜಿಲ್ಲಾಧಿಕಾರಿಗಳು ಸಂತೇ ನಡೆಯುತ್ತಿದ್ದ ಸ್ಥಳಕ್ಕೆ ಹೋಗಿ ವ್ಯಾಪಾರಿಗಳನ್ನು ವಿಚಾರಿಸಿದರು. ಪ್ಲಾಸ್ಟಿಕ್ ಬಳಕೆ ಮಾಡದಂತೆ ಸೂಚಿಸಿದರು.
ಇನ್ನು ಸಂತೆ ನಡೆಯುವ ಹಿಂಭಾಗ ಸ್ವಚ್ಛತೆ ಇಲ್ಲದೇ ಇರುವುದನ್ನು ಪರಿಶೀಲಿಸಿದರು. ರಸ್ತೆ ಮೇಲೆ ಕುಡಿಯುವ ನೀರು ಪೋಲಾಗಿ ಹೋಗುತ್ತಿರುವುದು, ನಿಲ್ದಾಣದ ಹಿಂಬಾಗ ಗಿಡಗಂಟಿ ಬೆಳೆದಿರುವುದನ್ನು ಗಮನಿಸಿ ಕೂಡಲೇ ಸ್ವಚ್ಛತೆ ಮಾಡಲು ಆದೇಶ ಮಾಡಿದರು. ಸಂತೆ ನಡೆಸಲು ಶೀಘ್ರದಲ್ಲಿಯೇ ಜಾಗ ಗುರುತು ಮಾಡುವುದಾಗಿ ವಿಶ್ವಾಸ ವ್ಯಕ್ತಪಡಿಸಿದರು. ಇನ್ನು ಹಾಸನಾಂಬ ಒಳಾಂಗಣ ಕ್ರೀಡಾಂಗಣಕ್ಕೂ ಹೋಗಿ ಪರಿಶೀಲಿಸಿದರು. ಈಜು ಕೊಳದಲ್ಲಿ ನೀರನ್ನು ಸ್ವಚ್ಛವಾಗಿಡಲು ಕೆಲ ಸಲಹೆ ನೀಡಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.