ಕನ್ನಡಪ್ರಭ ವಾರ್ತೆ ಮೈಸೂರು
ನಾವು ಯಾವುದೇ ಉತ್ಪನಗಳನ್ನು ಮಾರಾಟ ಮಾಡಬೇಕಾದರೆ ಗುಣಮಟ್ಟ ಎಂಬುದು ಬಹಳ ಮುಖ್ಯ. ಪ್ರತಿ ಉತ್ಪನ್ನಗಳು ತನ್ನದೇ ಆದಂತಹ ಗುಣಮಟ್ಟವನ್ನು ಹೊಂದಿರುವುದರಿಂದ ಅವುಗಳ ಬಗ್ಗೆ ಹೆಚ್ಚು ಗಮನ ವಹಿಸಬೇಕು ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ಪಿ. ಶಿವರಾಜು ತಿಳಿಸಿದರು.ನಗರದ ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಭಾರತೀಯ ಮಾನಕ ಬ್ಯೂರೋ ಬೆಂಗಳೂರು ಶಾಖಾ ಕಾರ್ಯಾಲಯ, ಗ್ರಾಹಕ ವ್ಯವಹಾರಗಳ ಸಚಿವಾಲಯ, ಆಹಾರ ಮತ್ತು ಸಾರ್ವಜನಿಕ ವಿತರಣೆ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಡಿಎಲ್ಒ ಸಂವೇಧನಶೀಲತಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ಈ ಕಾರ್ಯಾಗಾರಾದ ಉದ್ದೇಶ ನಾವು ಉತ್ಪನ್ನಗಳನ್ನು ಖರೀದಿ ಮಾಡಬೇಕಾದರೆ ಉತ್ಪನ್ನಗಳ ಗುಣಮಟ್ಟ ಉತ್ತಮವಾಗಿದೆ ಅಥವಾ ಕಳಪೆ ಗುಣಮಟ್ಟದಿಂದ ಕೂಡಿದೆಯೇ ಅದನ್ನು ನಾವು ಹೇಗೆ ಪತ್ತೆ ಹಚ್ಚಬಹುದು ಎಂಬುದನ್ನು ತಿಳಿಸುವುದಾಗಿದೆ. ಇದರಿಂದ ಸಾರ್ವಜನಿಕರಿಗೆ ಏನೆಲ್ಲಾ ಲಾಭ ಆಗುತ್ತದೆ ಎಂಬುದರ ಬಗ್ಗೆ ಇರುವುದರಿಂದ ಈ ಕಾರ್ಯಾಗಾರದ ಸದುಪಯೋಗವನ್ನು ಪ್ರತಿಯೊಂದು ಇಲಾಖೆಯವರು ಪಡೆದುಕೊಂಡು, ನಿಮ್ಮ ಇಲಾಖೆಯವರಿಗೂ ಇದೇ ರೀತಿಯಾದಂತಹ ಮಾಹಿತಿಯನ್ನು ತಿಳಿಸಬೇಕು ಎಂದರು.ಉತ್ಪನ್ನಗಳ ಬಗ್ಗೆ ತಿಳಿದುಕೊಳ್ಳಲು ಅಪ್ಲಿಕೇಶನ್ ಗಳು ಸಹ ಇರುವುದರಿಂದ ನಿಮ್ಮ ಮೊಬೈಲ್ ಗಳಲ್ಲಿ ಡೌನ್ಲೋಡ್ ಮಾಡಿಕೊಂಡು ಎಫ್ಎಸ್ಐ, ಹಾಲ್ ಮಾರ್ಕ್ ನಂತಹ ಯಾವ ಯಾವ ಸ್ಟ್ಯಾಂಡರ್ಡ್ ಮಾರ್ಕ್ ಗಳು ಇರುತ್ತದೆ ಅವುಗಳ ವಿನಾಯಿತಿಯನ್ನು ಪರೀಕ್ಷಿಸಬಹುದು ಎಂದು ಅವರು ಹೇಳಿದರು.ಸರ್ಕಾರ ಕುಡಿಯುವ ನೀರಿನಿಂದ ಹಿಡಿದು ಚಿನ್ನದ ಹೂಡಿಕೆಯವರೆಗೂ ಪ್ರತಿಯೊಂದು ಮಾನದಂಡಗಳನ್ನು ವಿಧಿಸಿರುವುದರಿಂದ ಯಾವುದೇ ಉತ್ಪನವನ್ನು ಏನಾದರೂ ಮಾಡಬಹುದು ಎಂಬ ವ್ಯವಸ್ಥೆ ಸರ್ಕಾರದಲ್ಲಿ ಇಲ್ಲ. ಕೆಲವರು ನಕಲಿ ಉತ್ಪನ್ನಗಳಿಗೆ ಸರ್ಕಾರದ ಮಾರ್ಕ್ ಗಳನ್ನು ಅಳವಡಿಸಿ ಮಾರಾಟ ಮಾಡುತ್ತಿದ್ದಾರೆ. ಅಂತಹವುಗಳನ್ನು ಹೇಗೆ ಕಂಡು ಹಿಡಿಯುವುದು ಎಂಬುದು ಸಹ ಈ ಕಾರ್ಯಾಗಾರದಲ್ಲಿ ತಿಳಿಯುತ್ತದೆ ಎಂದರು.ಭಾರತೀಯ ಮಾನಕ ಬ್ಯೂರೋ ನಿರ್ದೇಶಕ ನರೇಂದ್ರ ರೆಡ್ಡಿ ಬೀಸು ಮಾತನಾಡಿ, ಗ್ರಾಹಕರು ಪ್ರತಿಯೊಂದು ಉತ್ಪನ್ನಗಳನ್ನು ಖರೀದಿಸುವುದರಿಂದ ಉತ್ಪನ್ನಗಳ ಮೇಲೆ ಹೆಚ್ಚು ಗಮನ ವಹಿಸಬೇಕು. ಪ್ರತಿಯೊಂದು ಉತ್ಪನ್ನಗಳಿಗೂ ಸರ್ಕಾರದಿಂದ ಅದರದೇ ಆದಂತಹ ಮಾರ್ಕ್ ಗಳು ಇರುವುದರಿಂದ ಪ್ರತಿ ಇಲಾಖೆಯು ಅದರ ಬಗ್ಗೆ ಹೆಚ್ಚು ಗಮನವಹಿಸಿ ಸಾರ್ವಜನಿಕರಿಗೆ ಜಾಗೃತಿಯನ್ನು ಮೂಡಿಸಬೇಕು. ಪ್ರತಿಯೊoದು ಉತ್ಪನ್ನಗಳ ಬಗ್ಗೆ ತಿಳಿದುಕೊಳ್ಳಲು ಬಯಸುವವರು ಉತ್ಪನ್ನಗಳ ಬಗ್ಗೆ ಏನಾದರು ಪ್ರಶ್ನೆ ಇದ್ದಲ್ಲಿ www.bis.gov.in ವೆಬ್ ಸೈಟ್ ಸಂಪರ್ಕಿಸಬಹುದು ಎಂದು ಹೇಳಿದರು.ಭಾರತೀಯ ಮಾನಕ ಬ್ಯೂರೋ ಸಂಸ್ಥೆಯ ಆರ್.ಎಸ್.ಟಿ ಸದಸ್ಯ ಎನ್. ಸುರೇಶ್ ಅವರು ವಿವಿಧ ಇಲಾಖೆಯ ಅಧಿಕಾರಿಗಳಿಗೆ ಉಪನ್ಯಾಸ ನೀಡಿದರು. ಭಾರತೀಯ ಮಾನಕ ಬ್ಯೂರೋ ಸದಸ್ಯ ಎಂ. ಶಿವಕುಮಾರ್ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಇದ್ದರು.