ಜಿಲ್ಲಾಧಿಕಾರಿಗಳಿಂದ ಬಾಡ ಅರಮನೆ ಭೇಟಿ, ಮೂಲಸೌಲಭ್ಯ ಪರಿಶೀಲನೆ

KannadaprabhaNewsNetwork |  
Published : Jan 19, 2025, 02:18 AM IST
18ಎಚ್‌ವಿಆರ್7, 7ಎ | Kannada Prabha

ಸಾರಾಂಶ

ಶಿಗ್ಗಾಂವಿ ತಾಲೂಕು ಬಾಡ ಗ್ರಾಮದ ಕನಕದಾಸ ಅರಮನೆಗೆ ಹಾಗೂ ಹಾನಗಲ್ ತಹಸೀಲ್ದಾರ್ ಕಚೇರಿಗೆ ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರ ಭೇಟಿ ನೀಡಿ ಮೂಲಸೌಲಭ್ಯ ಪರಿಶೀಲಿಸಿದರು.

ಹಾವೇರಿ: ಶಿಗ್ಗಾಂವಿ ತಾಲೂಕು ಬಾಡ ಗ್ರಾಮದ ಕನಕದಾಸ ಅರಮನೆಗೆ ಹಾಗೂ ಹಾನಗಲ್ ತಹಸೀಲ್ದಾರ್ ಕಚೇರಿಗೆ ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರ ಭೇಟಿ ನೀಡಿ ಮೂಲಸೌಲಭ್ಯ ಪರಿಶೀಲಿಸಿದರು. ಅರಮನೆಯು ಸಾರ್ವಜನಿಕರಿಗೆ ಮುಕ್ತವಾಗಿರಬೇಕು, ಹೆಚ್ಚು ಜನರು ಅರಮನೆ ವೀಕ್ಷಿಸಿಸುವಂತಾಗಬೇಕು. ಅರಮನೆಯು ಸುಂದರ ಪ್ರವಾಸಿತಾಣವಾಗಲು ಅಗತ್ಯ ಸೌಲಭ್ಯಗಳನ್ನು ಕಲ್ಪಿಸುವ ನಿಟ್ಟಿನಲ್ಲಿ ಸಂಬಂಧಪಟ್ಟ ಅಧಿಕಾರಿಗಳು ಕ್ರಮ ವಹಿಸಬೇಕು ಸಲಹೆ ನೀಡಿದರು.ಕನಕದಾಸ ಅರಮನೆ, ಯಾತ್ರಿ ನಿವಾಸ, ಕಲಾಭವನ, ಸಂಗೀತ ನೃತ್ಯ ಕಾರಂಜಿ, ಬಯಲು ರಂಗಮಂದಿರ ಮತ್ತು ಉದ್ಯಾನವನ ಸ್ವಚ್ಛತೆ ಪರಿಶೀಲನೆ ನಡೆಸಿದ ಅವರು, ಅರಮನೆ ಆವರಣ ಸೇರಿದಂತೆ ಎಲ್ಲ ಸ್ಥಳಗಳನ್ನು ಸ್ವಚ್ಛತೆ ಜೊತೆಗೆ ಅಚ್ಚುಕಟ್ಟಾಗಿ ನಿರ್ವಹಣೆಗ ಮಾಡಬೇಕು ಎಂದು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದರು.ನಂತರ ಹಾನಗಲ್ ತಹಸೀಲ್ದಾರ್ ಕಾರ್ಯಾಲಯಕ್ಕೆ ಭೇಟಿ ನೀಡಿದ ಅವರು, ಕಚೇರಿ ಸ್ವಚ್ಛತೆ, ಕುಡಿಯುವ ನೀರಿನ ವ್ಯವಸ್ಥೆ, ಶೌಚಾಲಯ ವ್ಯವಸ್ಥೆ ಪರಿಶೀಲಿಸಿದರು. ಕಚೇರಿಯ ಕಾರ್ಯನಿರ್ವಹಣೆ ಪರಿಶೀಲಿಸಿದ ಅವರು, ಸಾರ್ವಜನಿಕ ಅರ್ಜಿಗಳನ್ನು ಕಾಲಮಿತಿಯೊಳಗೆ ವಿಲೇವಾರಿ ಮಾಡಬೇಕು ಹಾಗೂ ಕಚೇರಿಗೆ ಬರುವಂತ ಸಾರ್ವಜನಿಕರೊಂದಿಗೆ ಸೌಜನ್ಯದಿಂದ ವರ್ತಿಸಬೇಕು ಎಂದರು.ಕಚೇರಿಯಲ್ಲಿ ಸಿಬ್ಬಂದಿಗಳು ವಿನಾಕಾರಣ ಕಾಲಹರಣ ಮಾಡದೇ ನಿಗದಿತ ಸಮಯದೊಳಗೆ ಸಾರ್ವಜನಿಕ ಕುಂದು ಕೊರತೆಗಳ ವಿಲೇಮಾಡಬೇಕು ಎಂದು ಅಧಿಕಾರಿ ಹಾಗೂ ಸಿಬ್ಬಂದಿಗಳಿಗೆ ಸೂಚನೆ ನೀಡಿದರು. ಇದೆ ಸಂದರ್ಭದಲ್ಲಿ ಹಾನಗಲ್ ತಾಲೂಕಿನ ಹರವಿ ಗ್ರಾಮದ ಸಂಗಪ್ಪ ಬಸವಣ್ಣೆಪ್ಪ ಬಾಣದ ಅವರಿಗೆ ಜಿಲ್ಲಾಧಿಕಾರಿಗಳು ಭೂ ನ್ಯಾಯ ಮಂಡಳಿಯ ಆದೇಶದ ಪ್ರಕಾರ ಫಾರ್ಮ ನಂ-10 ವಿತರಣೆ ಮಾಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗೌಡ ಸಾರಸ್ವತ ಬ್ರಾಹ್ಮಣ ಸೇವಾ ಸಂಘದ ವಾಗ್ದೇವಿ ಟವರ್ಸ್‌ಗೆ ಭೂಮಿ ಪೂಜೆ
ಆತ್ಮನಿರ್ಭರ ಭಾರತಕ್ಕೆ ಸ್ವದೇಶಿ ವಸ್ತು ಬಳಕೆ ಅಗತ್ಯ: ನಾರಾಯಣಸಾ ಭಾಂಡಗೆ