ಜಿ.ದಲಿತ ಸಂಘರ್ಷ ಸಮಿತಿ ಧರಣಿ । ಎಡಿಸಿಯಿಂದ ಸಿಎಂಗೆ ಮನವಿ
ನಗರದ ಜಿಲ್ಲಾಡಳಿತ ಭವನದ ಆವರಣದಲ್ಲಿ ಸಮಾವೇಶಗೊಂಡ ಜಿಲ್ಲಾ ದಲಿತ ಸಂಘರ್ಷ ಸಮಿತಿ ಪದಾಧಿಕಾರಿಗಳು ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿ, ಆಕ್ರೋಶ ವ್ಯಕ್ತಪಡಿಸಿದರು.
ನಂತರ ಸ್ಥಳಕ್ಕಾಗಮಿಸಿದ ಹೆಚ್ಚುವರಿ ಜಿಲ್ಲಾಧಿಕಾರಿ ಗೀತಾ ಹುಡೇದ್ ಅವರ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು.ರಾಜ್ಯ ಸರ್ಕಾರ ಜಾತಿಗಣತಿ ವರದಿಯನ್ನು ಸ್ವೀಕರಿಸಿರುವುದು ಪ್ರಶಂಸನೀಯ, ಇದನ್ನು ಸ್ವೀಕರಿಸಿದ ಕೂಡಲೇ ಕೆಲ ಪಟ್ಟಭದ್ರರು, ರಾಜಕೀಯ ಪಕ್ಷಗಳು, ಸಂಘಸಂಸ್ಥೆಗಳು ಅಸಮಾಧಾನ ಹೊರಹಾಕುವ ಮೂಲಕ ಜಾತಿಗಣತಿ ವರದಿ ತಿರಸ್ಕರಿಸುವಂತೆ ಸರ್ಕಾರದ ಮೇಲೆ ಒತ್ತಡ ಹಾಕಲು ಮುಂದಾಗಿವೆ, ಸರ್ಕಾರ ಯಾರ ಒತ್ತಾಯಕ್ಕೂ ಮಣಿಯದೇ ಜಾತಿಗಣತಿ ವರದಿಯನ್ನು ಶೀಘ್ರವೇ ಅನುಷ್ಠಾನಗೊಳಿಸಬೇಕು ಎಂದು ಆಗ್ರಹಿಸಿದರು.
ದಸಂಸ ಜಿಲ್ಲಾ ಸಂಯೋಜಕ ಸಿ.ರಾಜಣ್ಣ ಯರಿಯೂರು, ಜಿಲ್ಲಾ ಸಂಘಟನಾ ಸಂಚಾಲಕರಾದ ಎಂ.ದೊರೆಸ್ವಾಮಿ, ಶಿವಕುಮಾರ್, ನಂಜುಂಡಸ್ವಾಮಿ, ಚಾಮರಾಜನಗರ ತಾಲೂಕುಸಂಚಾಲಕ ಅನಿಲ್‌ಕುಮಾರ್ ಗುಂಡ್ಲುಪೇಟೆ ತಾಲೂಕು ಸಂಚಾಲಕ ಮಾಡ್ರಳ್ಳಿ ರಂಗಸ್ವಾಮಿ, ಕೊಳ್ಳೇಗಾಲ ತಾಲೂಕು ಸಂಚಾಲಕ ದಾಸನಪುರ ಶಾಂತರಾಜು, ಯಳಂದೂರು ತಾಲೂಕು ಸಂಚಾಲಕ ಗಣಿಗನೂರುಚಂದ್ರಶೇಖರ್, ರಾಮಸಮುದ್ರಸುರೇಶ್, ಅಣಗಳ್ಳಿಬಸವರಾಜು, ಸಿ.ಎಂ.ಕೃಷ್ಣಮೂರ್ತಿ, ಬಂಗಾರಸ್ವಾಮಿ, ಕಂದಹಳ್ಳಿನಾರಾಯಣ, ಕಾಡಳ್ಳಿನಾಗರಾಜು, ಮರಿಯಾಲದ ಹುಂಡಿಕುಮಾರ್, ರವಿಚಂದ್ರಪ್ರಸಾದ್, ಷರೀಪ್, ಲೋಕೇಶ್ ಭಾಗವಹಿಸಿದ್ದರು.