ಕನ್ನಡಪ್ರಭ ವಾರ್ತೆ ಬೀದರ್
ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ಶನಿವಾರ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಬೃಹತ್ ‘ನಮ್ಮೂರ ನಾವದಗೇರಿ ಜಾನಪದ ಜಾತ್ರೆ’ಯನ್ನು ಶುಕ್ಲತಿರ್ಥ ಮಡಿವಾಳೇಶ್ವರ ಸಾಮಾಜಿಕ ಮತ್ತು ಸಾಂಸ್ಕೃತಿಕ ಅಭಿವೃದ್ಧಿ ಟ್ರಸ್ಟ್ ಮತ್ತು ಕರ್ನಾಟಕ ಜಾನಪದ ಪರಿಷತ್ತು ಬೀದರ ತಾಲೂಕಾ ಘಟಕ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಕಾರದೊಂದಿಗೆ ಹಮ್ಮಿಕೊಳ್ಳಲಾಗಿದೆ ಎಂದರು.
ಅಂದು ಬೆಳಗ್ಗೆ 9 ಗಂಟೆಗೆ ಗಂಟೆಗೆ ನಾವದಗೇರಿಯ ಹನುಮಾನ ಮಂದಿರದ ಆವರಣದಿಂದ ಕುಂಭ ಕಳಸ ಹಾಗೂ ಜಾನಪದ ಕಲಾ ತಂಡಗಳೊಂದಿಗೆ ಭವ್ಯ ಮೆರವಣಿಗೆ ಆರಂಭವಾಗಲಿದೆ. ಮೆರವಣಿಗೆಯು ಬೌದ್ಧ ಮಂದಿರ, ಸಿದ್ಧಾರ್ಥ ಕಾಲೇಜು ಮಾರ್ಗವಾಗಿ ಶುಕ್ಲತೀರ್ಥ ಮಡಿವಾಳೇಶ್ವರ ಶಿವಮಂದಿರದ ಸಭಾ ಮಂಟಪ ವನ್ನು ತಲುಪಲಿದೆ. ಗಾಂಧಿಗಂಜ್ ಬ್ಯಾಂಕ್ ಅಧ್ಯಕ್ಷರಾದ ವಿಜಯಕುಮಾರ ಪಾಟೀಲ ಗಾದಗಿ ಮೆರವಣಿಗೆಯನ್ನು ಉದ್ಘಾಟಿಸಲಿದ್ದಾರೆ.ಮಧ್ಯಾಹ್ನ ಜನಪದ ಉತ್ಸವ ಹಾಗೂ ಸಂಜೆ ಸಂಗೀತ ದರ್ಬಾರ್ ಮಧ್ಯಾಹ್ನ 1 ಗಂಟೆಗೆ ಜಿಲ್ಲಾ ಜನಪದ ಸಂಗೀತ ಉತ್ಸವ ಹಾಗೂ ಕಥಾ ಕಿರ್ತನಾ ಕಾರ್ಯಕ್ರಮ ಜರುಗಲಿದ್ದು, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ರಾಮಶೆಟ್ಟಿ ಕೆಂಚಾ ಉದ್ಘಾಟಿಸಲಿದ್ದು ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ದಯಾನಂದ ಸ್ವಾಮಿ ಸಿರ್ಸಿ ಅಧ್ಯಕ್ಷತೆ ವಹಿಸಲಿದ್ದಾರೆ.
ಗುರುದೇವ ಹಾಗೂ ಪ್ರಿಯಂಕಾ ಸೇರಿದಂತೆ ವಿವಿಧ ಜಾನಪದ ಕಲಾ ತಂಡಗಳಾದ ಲಂಬಾಣಿ ನೃತ್ಯ, ಹಲಗೆ ವಾದನ, ಕೋಲಾಟ ನೃತ್ಯಗಳು ಹಾಗೂ ವಿವಿಧ ಭಜನಾ ಮಂಡಳಿಗಳು ಈ ಜಾತ್ರೆಯಲ್ಲಿ ಪಾಲ್ಗೊಂಡು ಕಳೆಗಟ್ಟಲಿವೆ. ಸಮಸ್ತ ಸರ್ವವಜನಿಕರು ಹಾಗೂ ಕಲಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಬಜಾರೆ ಮನವಿ ಮಾಡಿದರು. ಶುಕ್ಲತಿರ್ಥ ಸೇವಾ ಸಮಿತಿಯ ಅಧ್ಯಕ್ಷ ಅಧ್ಯಕ್ಷ ಸಂತೋಷ ಕಾಮಣ್ಣ, ರಾಜಕುಮಾರ ಹೆಬ್ಬಾಳೆ, ಸದಸ್ಯರಾದ ಸಂಗಪ್ಪ ಬೀಕ್ಲೆ, ನಾಗನಾಥ ಮಾನೆ, ಸಾಯಿ ಮಡಿವಾಳ, ಬಸವರಾಜ, ರವಿ ರಡ್ಡಿ, ಸಾಗರ ಗೌರ ಹಾಗೂ ಇತರರು ಪತ್ರಿಕಾ ಗೋಷ್ಠಿಯಲ್ಲಿದ್ದರು.