ಜಿಲ್ಲಾ ಉಸ್ತುವಾರಿ ಸಚಿವರು ಕೆಡಿಪಿ ಸಭೆಗೆ ಸೀಮಿತ

KannadaprabhaNewsNetwork | Published : Apr 20, 2025 1:48 AM

ಸಾರಾಂಶ

ಹೆಣ್ಣು ಮಕ್ಕಳಿಗೆ ೨ ಸಾವಿರ ರೂ ನೀಡುವುದಾಗಿ ಹೇಳಿ ನಾಲ್ಕು ತಿಂಗಳಿಗೊಮ್ಮೆ ಹಣ ಹಾಕುತಿದ್ದಾರೆ. ಹಾಲಿನ ದರ, ಪ್ರಯಾಣದರ, ಮುದ್ರಾಂಕ ಶುಲ್ಕ ದುಪ್ಪಟ್ಟು ಏರಿಕೆ ಮಾಡಿ ಗಂಡಸರ ಜೇಬಿಗೆ ಕತ್ತರಿಹಾಕಿ ಲೂಟಿ ಮಾಡುತ್ತಿದ್ದಾರೆ. ಹಾಲಿನ ದರ ಏರಿಕೆಯಾದರೂ ರೈತರಿಗೆ ಸಿಗಬೇಕಾದ ಪ್ರೋತ್ಸಾಹಧನ ನೀಡಿಲ್ಲ.

ಕನ್ನಡಪ್ರಭ ವಾರ್ತೆ ಕೋಲಾರಕೋಲಾರ ಜಿಲ್ಲೆ ಕರ್ನಾಟಕದ ಭೂಪಟದಲ್ಲಿ ಇದೆ ಎಂಬುದನ್ನೇ ರಾಜ್ಯದ ಭ್ರಷ್ಟ ಕಾಂಗ್ರೆಸ್ ಸರ್ಕಾರ ಮರೆತಿದೆ. ಜಿಲ್ಲೆಗೆ ನೇಮಕವಾಗಿರುವ ಉಸ್ತುವಾರಿ ಸಚಿವರು ಕೇವಲ ಕೆಡಿಪಿ ಸಭೆ, ಧ್ವಜಾರೋಹಣಕ್ಕೆ ಮಾತ್ರ ಸೀಮಿತರಾಗಿದ್ದಾರೆ ಎಂದು ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಕೆ.ಬಿ.ಗೋಪಾಲಕೃಷ್ಣ ಟೀಕಿಸಿದ್ದಾರೆ.ಶನಿವಾರ ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಜಿಲ್ಲೆಗೆ ನೇಮಕವಾಗಿರುವ ಉಸ್ತುವಾರಿ ಸಚಿವರು ಕೇವಲ ರಾಷ್ಟ್ರೀಯ ಹಬ್ಬಗಳಿಗೆ ಬಂದು ಪೋಸ್ ನೀಡಿ ಧ್ವಜಾರೋಹಣ ಮಾಡಿ ಸುದ್ದಿಗೋಷ್ಠಿ ನಡೆಸಿ ಒಂದೆರಡು ಮಾತು ಹೇಳಿ ಹೋದರೆ ಅವರ ಕೆಲಸ ಮುಗಿತು ಎಂದು ವ್ಯಂಗ್ಯವಾಡಿದರು.ಹಾಲಿನ ಪ್ರೋತ್ಸಾಹಧನ ನೀಡಿಲ್ಲ

ಹೆಣ್ಣು ಮಕ್ಕಳಿಗೆ ೨ ಸಾವಿರ ರೂ ನೀಡುವುದಾಗಿ ಹೇಳಿ ನಾಲ್ಕು ತಿಂಗಳಿಗೊಮ್ಮೆ ಹಣ ಹಾಕುತಿದ್ದಾರೆ. ಹಾಲಿನ ದರ, ಪ್ರಯಾಣದರ, ಮುದ್ರಾಂಕ ಶುಲ್ಕ ದುಪ್ಪಟ್ಟು ಏರಿಕೆ ಮಾಡಿ ಗಂಡಸರ ಜೇಬಿಗೆ ಕತ್ತರಿಹಾಕಿ ಲೂಟಿ ಮಾಡುತ್ತಿದ್ದಾರೆ. ಹಾಲಿನ ದರ ಏರಿಕೆಯಾದರೂ ರೈತರಿಗೆ ಸಿಗಬೇಕಾದ ಪ್ರೋತ್ಸಾಹಧನ ರೈತರ ಖಾತೆಗೆ ಜಮಾ ಆಗಲಿಲ್ಲ ಎಂದು ಆರೋಪಿಸಿದರು.

ಗಡಿ ಜಿಲ್ಲೆಯಾದ ಕೋಲಾರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರೇ ಕಣಕ್ಕಿಳಿಯುವುದಾಗಿ ನಾಟಕವಾಡಿ ಕೊನೆ ಘಳಿಗೆಯಲ್ಲಿ ಕೊತ್ತೂರು ಮಂಜುನಾಥ್‌ರನ್ನು ಶಾಸಕರಾಗಿಸಿದರು ಆದರೆ ಅವರು ಕೇವಲ ಗುದ್ದಲಿ ಪೂಜೆಗೆ ಸೀಮಿತರಾಗಿದ್ದು, ಜಿಲ್ಲೆಯಲ್ಲಿ ಯಾವುದೇ ಅಭಿವೃದ್ದಿ ಕಾರ್ಯಗಳು ನಡೆದಿಲ್ಲ ಹಾಗಾಗಿ ಕೋಲಾರ ೨೦ ವರ್ಷಗಳಷ್ಟು ಹಿನ್ನಡೆ ಅನುಭವಿಸುವಂತಾಗಿದೆ ಎಂದು ಟೀಕಿಸಿದರು.

ಕೆಸಿ ವ್ಯಾಲಿ 3 ನೇ ಹಂತ:

ಚುನಾವಣೆಗೆ ಮುನ್ನಾ ಕೆಸಿ ವ್ಯಾಲಿ ಮೂರನೇ ಹಂತದ ಶುದ್ದೀಕರಣದ ಕುರಿತು ಭಾಷಣ ಮಾಡಿದ್ದ ಕಾಂಗ್ರೆಸ್ ಮುಖಂಡರು ಈಗ ಎಲ್ಲಿ ಮರೆಯಾಗಿದ್ದಾರೆ. ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗಳಿಗೆ ಎತ್ತಿನಹೊಳೆ ನೀರು ಎಂದು ಯೋಜನೆ ಆರಂಭಿಸಿ ಇದೀಗ ಈ ಎರಡು ಜಿಲ್ಲೆಯ ಜನರನ್ನು ವಂಚಿಸಿ ಬೇರೆ ಜಿಲ್ಲೆಗಳಿಗೆ ಹರಿಸಿದ್ದಾರೂ, ಸ್ಥಳೀಯ ಶಾಸಕರು,ಉಸ್ತುವಾರಿ ಸಚಿವರು ಈ ಬಗ್ಗೆ ತುಟಿ ಬಿಚ್ಚಿಲ್ಲ ಎಂದು ಲೇವಡಿ ಮಾಡಿದ್ದಾರೆ.

Share this article