ಕನ್ನಡಪ್ರಭ ವಾರ್ತೆ ಮೂಡುಬಿದಿರೆ ಮಂಗಳವಾರ ಮುಕ್ತಾಯವಾದ ಪ್ರಸಕ್ತ ಸಾಲಿನ ದ.ಕ. ಜಿಲ್ಲಾ ಪ್ರಾಥಮಿಕ, ಪ್ರೌಢಶಾಲಾ ಕ್ರೀಡಾಕೂಟದಲ್ಲಿ ಎಂಟು ಹೊಸದಾಖಲೆಗಳು ನಿರ್ಮಾಣವಾಗಿವೆ. ೧. 17 ವರ್ಷ ವಯೋಮಿತಿಯ ಬಾಲಕಿಯರ ವಿಭಾಗದ 1500 ಮೀ. ಓಟದಲ್ಲಿ ಕಡಬ ಸರ್ಕಾರಿ ಪ. ಪೂ. ಕಾಲೇಜಿನ ಚರಿಷ್ಮಾ (4:53.9ಸೆ) ಹೊಸ ದಾಖಲೆ ಬರೆಯುವ ಮೂಲಕ 2004ರಲ್ಲಿ ಎಡಪದವು ಸ್ವಾಮಿ ವಿವೇಕಾನಂದ ಪ.ಪೂ. ಕಾಲೇಜಿನ ಸೌಮ್ಯ ಕೆ.ಪಿ. ಅವರ ಹೆಸರಲ್ಲಿದ್ದ ದಾಖಲೆ (5:01.7 ಸೆ.) ಅಳಿಸಿದ್ದಾರೆ. 17ರ ಮೇಲಿನ ಬಾಲಕಿಯರ ವಿಭಾಗದ 3,000 ಮೀ. ಓಟದಲ್ಲಿ ಮತ್ತೆ ಕಡಬದ ಚರಿಷ್ಮಾ (10;44.7ಸೆ.) ಹೊಸ ದಾಖಲೆ ಮಾಡಿದ್ದಾರೆ. ಇವರೂ 2004ರಲ್ಲಿ ಎಸ್‌ಡಿಎಂ ಉಜಿರೆ ಆ.ಆ.ಮಾ. ಪ್ರೌಢಶಾಲೆಯ ದಿವ್ಯಾ ಜಿ.ಗೌಡ (10;49.40 ಸೆ.) ಅವರು ಮಾಡಿದ್ದ ದಾಖಲೆಯನ್ನು ಬದಿಗೆ ಸರಿಸಿದ್ದಾರೆ. 14ವರ್ಷದೊಳಗಿನ ಬಾಲಕಿಯರ 600 ಮೀ. ಓಟದಲ್ಲಿ ಪುತ್ತೂರು ವಿವೇಕಾನಂದ ಇಎಂಎಸ್‌ನ ದಿವಿಜ್ಞಾ ವಿ.ಎಸ್.(1;44;70 ಸೆ) ಅವರು 2011ರಲ್ಲಿ ಮಂಗಳೂರು ಸೈ. ಆಗ್ನೆಸ್ ಹೈಸ್ಕೂಲಿನ ವೆನಿಸ್ಸಾ ಕರೋಲ್ ಕ್ವಾಡ್ರಸ್ (1:45.30 ಸೆ.) ಅವರ ದಾಖಲೆಯನ್ನು ಮುರಿದಿದ್ದಾರೆ. ಇದೇ ವಿಭಾಗದ 4 ಇಂಟು 400 ಮೀ. ರಿಲೇ ಯಲ್ಲಿ ಪುತ್ತೂರು ವಿವೇಕಾನಂದ ಕನ್ನಡ ಮಾಧ್ಯಮ ಹೈಸ್ಕೂಲಿನ ತಂಡ (55. 7 ಸೆ.)ವು 2016ರಲ್ಲಿ ಅದೇ ಶಾಲೆಯ ತಂಡದ ದಾಖಲೆ (56.7ಸೆ.)ಯನ್ನು ಬದಿಗೆ ಸರಿಸಿ ಹೊಸ ದಾಖಲೆ ಬರೆದಿದ್ದಾರೆ. ವೈಯಕ್ತಿಕ ಚಾಂಪಿಯನ್ ಶಿಪ್ : ಪ್ರಾಥಮಿಕ ಶಾಲೆ: ಪುತ್ತೂರು ಹಳೆನೇರಂಕಿ ಸರ್ಕಾರಿ ಶಾಲೆಯ ಜಯೇಶ್(15 ಅಂಕ) , ಮಂಗಳೂರು ಉತ್ತರದ ಕಾಟಿಪಳ್ಳದ ಇನ್‌ಫೆಂಟ್ ಮೇರಿ ಇಎಂಎಸ್ ಜಯಲಕ್ಷ್ಮೀ (15 ಅಂಕ), 14 ರೊಳಗಿನ ಹುಡುಗರಲ್ಲಿ ಮಂ. ಉತ್ತರದ ಇಡ್ಯ ಮಹಾಲಿಂಗೇಶ್ವರ ಇಎಂಎಸ್‌ನ ನಿಹಾಲ್ ಕರ್ಕೆರಾ (15 ಅಂಕ), 14 ರೊಳಗಿನ ಹುಡುಗಿಯರಲ್ಲಿ ಪುತ್ತೂರು ವಿವೇಕಾನಂದ ಇಎಂಎಚ್‌ಎಸ್‌ನ ದಿವಿಜ್ಞಾ ಯು.ಎಸ್.(15 ಅಂಕ) , 17 ರೊಳಗಿನ ಬಾಲಕರಲ್ಲಿ ಆಳ್ವಾಸ್ ಆಂಗ್ಲ ಮಾಧ್ಯಮ ಹೈಸ್ಕೂಲ್‌ನ ಗೊರವರ ಚೆನ್ನಬಸವರಾಜ ( 13 ಅಂಕ), ಬಾಲಕಿಯರಲ್ಲಿ ಕಡಬ ಸಪಪೂ ಕಾಲೇಜಿನ ಚರಿಷ್ಮಾ (15 ಅಂಕ) ಇವರು ವೈಯಕ್ತಿಕ ಚಾಂಪಿಯನ್‌ಶಿಪ್ ಗಳಿಸಿದ್ದಾರೆ. ತಂಡ ಪ್ರಶಸ್ತಿ: ಪ್ರಾಥಮಿಕ ಶಾಲಾ ಹುಡುಗರ ವಿಭಾಗದಲ್ಲಿ ಪುತ್ತೂರು, ಬಾಲಕಿಯರ ವಿಭಾಗದಲ್ಲಿ ಮಂಗಳೂರು ಉತ್ತರ, 2 ಪುತ್ತೂರು, 14 ರೊಳಗಿನ ಹುಡುಗರಲ್ಲಿ ಮಂಗಳೂರು ಉತ್ತರ, ಉಳಿದಂತೆ14 ರೊಳಗಿನ ಬಾಲಕಿಯರು, 17 ರೊಳಗಿನ ಬಾಲಕರು ಮತ್ತು ಬಾಲಕಿಯರು ಈ ಮೂರೂ ವಿಭಾಗಗಳಲ್ಲಿ ಪುತ್ತೂರು ತಾ. ತಂಡಗಳು ತಂಡ ಪ್ರಶಸ್ತಿಗಳನ್ನು ಎತ್ತಿಕೊಂಡಿವೆ.