ಬೀರೂರಿನಲ್ಲಿ ಜಿಲ್ಲಾ ಮಟ್ಟದ ಯುವ ಕನ್ನಡ ಸಾಹಿತ್ಯ ಸಮ್ಮೇಳನ ಆಯೋಜನೆ: ಸವಿತಾ ರಮೇಶ್

KannadaprabhaNewsNetwork |  
Published : Sep 20, 2025, 01:00 AM IST
19 ಬೀರೂರು 1ಬೀರೂರಿನ ರೋಟರಿ ಭವನದಲ್ಲಿ ಆಯೋಜಿಸಿದ್ದ ಬೀರೂರು ಹೋಬಳಿ ಕನ್ನಡ ಸಾಹಿತ್ಯ ಪರಿಷತ್ತಿನ ಯುವ ಘಟಕವನ್ನು ಜಿಲ್ಲಾ ಕಸಾಪ  ಅಧ್ಯಕ್ಷ ಸೂರಿ ಶ್ರೀನಿವಾಸ್  ಉದ್ಘಾಟಿಸಿದರು. ಸವಿತಾ ರಮೇಶ್, ಪುರಸಭಾ ಅಧ್ಯಕ್ಷರಾದ ಭಾಗ್ಯಲಕ್ಷ್ಮಿ ಮೋಹನ್ ಮತ್ತಿತರಿದ್ದರು. | Kannada Prabha

ಸಾರಾಂಶ

ಬೀರೂರು, ಕನ್ನಡ ಭಾಷೆ ನೆಲ, ಜಲ ಇವುಗಳಿಗೆ ಸಂಬಂಧಿಸಿದಂತೆ ವಿಶೇಷವಾದ ಮಾನ್ಯತೆ ಮತ್ತು ಮನ್ನಣೆಯನ್ನು ನಾವೆಲ್ಲರೂ ಕಲ್ಪಿಸಿ ಕೊಡಬೇಕಾಗಿದೆ. ಹಾಗೇನೆ ಕನ್ನಡ ಭಾಷೆ ಉಳಿದಿರುವಂತದ್ದು ಗ್ರಾಮೀಣ ಪ್ರದೇಶದಲ್ಲಿ ಮಾತ್ರ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಮಹಿಳಾ ಘಟಕದ ಪ್ರಧಾನ ಕಾರ್ಯದರ್ಶಿ ಸವಿತಾ ರಮೇಶ್ ತಿಳಿಸಿದರು.

ಬೀರೂರಿನ ರೋಟರಿ ಭವನದಲ್ಲಿ ಹೋಬಳಿ ಕಸಾಪ ಯುವ ಘಟಕ ಉದ್ಘಾಟನಾ ಸಮಾರಂಭ

ಕನ್ನಡಪ್ರಭ ವಾರ್ತೆ, ಬೀರೂರು

ಕನ್ನಡ ಭಾಷೆ ನೆಲ, ಜಲ ಇವುಗಳಿಗೆ ಸಂಬಂಧಿಸಿದಂತೆ ವಿಶೇಷವಾದ ಮಾನ್ಯತೆ ಮತ್ತು ಮನ್ನಣೆಯನ್ನು ನಾವೆಲ್ಲರೂ ಕಲ್ಪಿಸಿ ಕೊಡಬೇಕಾಗಿದೆ. ಹಾಗೇನೆ ಕನ್ನಡ ಭಾಷೆ ಉಳಿದಿರುವಂತದ್ದು ಗ್ರಾಮೀಣ ಪ್ರದೇಶದಲ್ಲಿ ಮಾತ್ರ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಮಹಿಳಾ ಘಟಕದ ಪ್ರಧಾನ ಕಾರ್ಯದರ್ಶಿ ಸವಿತಾ ರಮೇಶ್ ತಿಳಿಸಿದರು.

ಬೀರೂರಿನ ರೋಟರಿ ಭವನದಲ್ಲಿ ಆಯೋಜಿಸಿದ್ದ ಬೀರೂರು ಹೋಬಳಿ ಕಸಾಪ ಯುವ ಘಟಕ ಉದ್ಘಾಟನಾ ಸಮಾರಂಭ ದಲ್ಲಿ ಮಾತನಾಡಿದರು. ಕನ್ನಡ ಭಾಷೆ, ಕಲೆ, ಸಾಹಿತ್ಯ. ಸಂಸ್ಕೃತಿ ಉಳಿಸಬೇಕಾದ ಅಗತ್ಯತೆ ಇಂದು ಅನಿವಾರ್ಯವಾಗಿದೆ ಜಿಲ್ಲಾಮಟ್ಟದ ಕಸಾಪ ಯುವ ಘಟಕದ ಯುವ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಬೀರೂರಿನಲ್ಲಿ ಆಯೋಜಿಸಲು ಸರ್ವಾನು ಮತದ ಅಭಿಪ್ರಾಯ ಮತ್ತು ಸಮ್ಮತಿಯನ್ನು ಜಿಲ್ಲಾ ಕಸಾಪ ನಮಗೆ ಅವಕಾಶ ನೀಡಿದೆ. ಈ ಸದವಕಾಶವನ್ನು ನಾವು ಬಳಸಿ ಕೊಂಡು ವಿಶೇಷವಾಗಿ ಅರ್ಥಪೂರ್ಣವಾಗಿ ಯುವ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಯಶಸ್ವಿಗೊಳಿಸೋಣ ಆ ನಿಟ್ಟಿನಲ್ಲಿ ಸಾಧ್ಯವೇ ಸಭೆ ಕರೆದು ಸ್ವಾಗತ ಸಮಿತಿ ರಚನೆ ಮಾಡೋಣ ಎಂದು ತಿಳಿಸಿದರು.

ಕಾರ್ಯಕ್ರಮ ಉದ್ಘಾಟಿಸಿದ ಜಿಲ್ಲಾ ಕಸಾಪ ಅಧ್ಯಕ್ಷ ಸೂರಿ ಶ್ರೀನಿವಾಸ್ ಮಾತನಾಡಿ, ಕನ್ನಡ ಭಾಷೆಗೆ 2500 ವರ್ಷಗಳ ಇತಿಹಾಸವಿದೆ. ಇಂತಹ ಪ್ರಾಚೀನ ಭಾಷೆ ಕನ್ನಡ ವಿಶ್ವದಲ್ಲಿಯೇ ಅಗ್ರಗಣ್ಯ ಭಾಷೆಯಾಗಿದೆ. ಅತ್ಯಂತ ಸುಂದರ ಹಾಗೂ ಸುಲಲಿತವಾದ ಮತ್ತೊಂದು ಭಾಷೆ ನಾವು ಕಾಣಲು ಸಾಧ್ಯವಿಲ್ಲ. ಹಾಗಾಗಿ ನಮ್ಮೆಲ್ಲರ ಹೆಮ್ಮೆ ಕನ್ನಡ ಲಿಪಿ ಕನ್ನಡ ಭಾಷೆ ಕನ್ನಡದ ತಂತ್ರಾಂಶ ಎಂದು ಹೇಳಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ತಾಲೂಕು ಕಸಾಪ ಅಧ್ಯಕ್ಷ ಚಿಕ್ಕನಲ್ಲೂರು ಎಸ್ ಪರಮೇಶ್ ವಹಿಸಿದ್ದರು. ಪ್ರತಿಜ್ಞಾವಿಧಿ ಬೋಧನೆ ಹಾಗೂ ದ್ವಜ ಹಸ್ತಾಂತರವನ್ನು ಜಿಲ್ಲಾ ಕಸಾಪ ಕೋಶಾಧ್ಯಕ್ಷ ಬಿ. ಪ್ರಕಾಶ್, ಬೀರೂರು ಹೋಬಳಿ ಘಟಕದ ಯುವ ಘಟಕದ ಅಧ್ಯಕ್ಷ ಕೆ. ಆರ್. ಸುಪ್ರೀತ್ ಅವರಿಗೆ ಧ್ವಜ ಹಸ್ತಾಂತರಿಸಿ ಪ್ರತಿಜ್ಞಾ ವಿಧಿ ಬೋಧಿಸಿದರು.ಪ್ರಾಸ್ತಾವಿಕವಾಗಿ ತಾಲೂಕು ಕಸಾಪ ಯುವ ಘಟಕದ ಅಧ್ಯಕ್ಷ ಕೆ.ವಿ. ಚೇತನ್ ಕುಮಾರ್ ಪ್ರಾಸ್ತಾವಿಕ ನುಡಿ ನುಡಿದರುಬೀರೂರು ಪುರಸಭಾ ಅಧ್ಯಕ್ಷೆ ಭಾಗ್ಯಲಕ್ಷ್ಮಿ ಮೋಹನ್ , ಉಪಾಧ್ಯಕ್ಷ ನಾಗರಾಜ್ ಎಸ್.ಎಂ, ಬೀರೂರು ಹೋಬಳಿ ಯುವ ಘಟಕದ ಗೌರವಾಧ್ಯಕ್ಷ ಅಡಕೆ ಚಂದ್ರು, ಜಿಲ್ಲಾ ಕಸಾಪ ಯುವ ಘಟಕದ ಅಧ್ಯಕ್ಷ ಪ್ರಿಯಾಂಕ, ಭರತ್, ಪುರಸಭಾ ಸದಸ್ಯ ರಾದ ಬಿ.ಆರ್ .ಮೋಹನ್ ಕುಮಾರ್ , ಗೌರವ ಸಂಘಟನಾ ಕಾರ್ಯದರ್ಶಿ ಶಶಿಧರ್ ಸಿ.ಜೆ. ಶಬರೀಶ್ ಕಲ್ಲೇಶ್ಇ ತರರು ಉಪಸ್ಥಿತರಿದ್ದರು.19 ಬೀರೂರು 1ಬೀರೂರು ರೋಟರಿ ಭವನದಲ್ಲಿ ಆಯೋಜಿಸಿದ್ದ ಹೋಬಳಿ ಕನ್ನಡ ಸಾಹಿತ್ಯ ಪರಿಷತ್ತಿನ ಯುವ ಘಟಕವನ್ನು ಜಿಲ್ಲಾ ಕಸಾಪ ಅಧ್ಯಕ್ಷ ಸೂರಿ ಶ್ರೀನಿವಾಸ್ ಉದ್ಘಾಟಿಸಿದರು. ಸವಿತಾ ರಮೇಶ್, ಪುರಸಭಾ ಅಧ್ಯಕ್ಷೆ ಭಾಗ್ಯಲಕ್ಷ್ಮಿ ಮೋಹನ್ ಮತ್ತಿತರಿದ್ದರು.

PREV

Recommended Stories

ಶಿವಯೋಗಿ ಸೊಸೈಟಿಗೆ 20.97 ಲಕ್ಷ ಲಾಭ
ಯುವಜನತೆಗೆ ರಕ್ತದಾನದ ಮಹತ್ವ ತಿಳಿಸಿಕೊಡಿ