ವೀರೇಶ ಎಸ್. ಮಾಹಿತಿ । ಸಾಂಸ್ಕೃತಿಕ ಸ್ಪರ್ಧೆ ಆಯೋಜನೆ
ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಅಂದು ಬೆಳಿಗ್ಗೆ 10ಕ್ಕೆ ರಾಜ್ಯ ಮಟ್ಟದ ಯೋಗ ಸ್ಪರ್ಧೆ ನಡೆಯಲಿದ್ದು, ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ ಸ್ಪರ್ಧೆ ಉದ್ಘಾಟಿಸಲಿದ್ದು, ಶಾಸಕ ಡಾ.ಶಾಮನೂರು ಶಿವಶಂಕರಪ್ಪ ಅಧ್ಯಕ್ಷತೆ ವಹಿಸುವರು. ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ ಸೇರಿದಂತೆ ಜಿಲ್ಲೆಯ ಎಲ್ಲಾ ಚುನಾಯಿತ ಪ್ರತಿನಿಧಿಗಳು, ಜಿಲ್ಲೆಯ ಸರ್ಕಾರಿ ಅಧಿಕಾರಿಗಳು ಭಾಗವಹಿಸುವರು ಎಂದರು.
ಸಾಂಪ್ರದಾಯಿಕ ಯೋಗಾಸನ ಚಾಂಪಿಯನ್ ಶಿಪ್ ನಡೆಯಲಿದ್ದು, ಕಲಾತ್ಮಕ ವೈಯಕ್ತಿಕ ಯೋಗಾಸನ ಸ್ಪರ್ಧೆ, ಕಲಾತ್ಮಕ ಜೋಡಿ ಯೋಗಾಸನ ಸ್ಪರ್ಧೆ, ಲಯಬದ್ಧ ಜೋಡಿ ಯೋಗಾಸನ ಸ್ಪರ್ಧೆ ನಡೆಯಲಿದೆ. ಸ್ಪರ್ಧಿಗಳು ಜನ್ಮ ದಿನಾಂಕದ ಪ್ರಮಾಣ ಪತ್ರದ ನಕಲು ಪ್ರತಿ, ವೈದ್ಯಕೀಯ ಪ್ರಮಾಣ ಪತ್ರ ಸಲ್ಲಿಸಬೇಕು. ಪುರುಷರಿಗೆ ಬನಿಯನ್, ಶಾರ್ಟ್ಸ್ ಮತ್ತು ಮಹಿಳೆಯರಿಗೆ ಟ್ರ್ಯಾಕ್ ಸೂಟ್ ಹಾಗೂ ಟಿ ಶರ್ಟ್ ಧರಿಸಿರಬೇಕು ಎಂದು ಹೇಳಿದರು.ಹೆಚ್ಚಿನ ಮಾಹಿತಿಗೆ ಡಾ.ಎನ್.ಪರಶುರಾಮ (90355-51568), ತೀರ್ಥರಾಜ ಹೋಲೂರು(98800-34643), ಅನಿಲ ರಾಯ್ಕರ್ (98444-43119), ಬಿ.ಎಸ್.ನೀಲಪ್ಪ (94812-17798) ಸಂಪರ್ಕಿಸುವಂತೆ ಮನವಿ ಮಾಡಿದರು.
ಒಕ್ಕೂಟದ ಜಿಲ್ಲಾಧ್ಯಕ್ಷ ವಾಸುದೇವ ರಾಯ್ಕರ್, ಜಿಲ್ಲಾ ಯೋಗಾಸನ ಸ್ಪೋರ್ಟ್ಸ್ ಅಸೋಸಿಯೇಷನ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಡಾ.ಎನ್.ಪರಶುರಾಮ, ಬಿ.ಪಾಲಾಕ್ಷಿ, ಡಾ.ಯು.ಸಿದ್ದೇಶ, ರಾಜು ಬದ್ಧಿ, ಬಾದಾಮಿ ಜಯಣ್ಣ, ತೀರ್ಥರಾಜ ಹೋಲೂರು, ಬಾತಿ ಶಂಕರ್, ಚಂದ್ರು, ಪ್ರಕಾಶ ಉತ್ತಂಗಿ ಇತರರು ಇದ್ದರು.