ಸಾವು - ಬದುಕಿನ ನಡುವೆ ಅತ್ಯಧಿಕ ಅಂಕ ಗಳಿಸಿದ ದೈವಿಕ್

KannadaprabhaNewsNetwork |  
Published : Apr 11, 2024, 12:46 AM IST
ದೈವಿಕ್ | Kannada Prabha

ಸಾರಾಂಶ

ಕಳೆದ ಜನವರಿ-ಫೆಬ್ರವರಿಯಲ್ಲಿ ತೀವ್ರ ಉಸಿರಾಟದ ತೊಂದರೆಗೆ ಒಳಗಾಗಿ ಸಾವು-ಬದುಕಿನೊಂದಿಗೆ ಹೋರಾಡಿ ಸ್ವಲ್ಪ ಮಟ್ಟಿಗೆ ಚೇತರಿಸಿಕೊಂಡು ಪರೀಕ್ಷೆ ಬರೆದಿದ್ದನು.

ಮಂಡ್ಯ: ಸೇಂಟ್ ಜಾನ್ಸ್ ಕಾಂಪೋಸಿಟ್ ಪದವಿ ಕಾಲೇಜಿನ ವಾಣಿಜ್ಯ ವಿಭಾಗದಲ್ಲಿ ವ್ಯಾಸಂಗ ಮಾಡುತ್ತಿರುವ ದೈವಿಕ್ ವಿಕಲಾಂಗನಾಗಿದ್ದು, ಡಿಶೂನ್ ಮಸ್ಕ್ಯುಲರ್ ಡಿಸ್ಟ್ರೋಫಿ ಎಂಬ ಮಾರಣಾಂತಿಕ ಕಾಯಿಲೆಯಿಂದ ಬಳಲುತ್ತಿದ್ದಾನೆ. ಕಳೆದ ಜನವರಿ-ಫೆಬ್ರವರಿಯಲ್ಲಿ ತೀವ್ರ ಉಸಿರಾಟದ ತೊಂದರೆಗೆ ಒಳಗಾಗಿ ಸಾವು-ಬದುಕಿನೊಂದಿಗೆ ಹೋರಾಡಿ ಸ್ವಲ್ಪ ಮಟ್ಟಿಗೆ ಚೇತರಿಸಿಕೊಂಡು ಪರೀಕ್ಷೆ ಬರೆದಿದ್ದನು. ಈ ಭೂಮಿ ಮೇಲೆ ತಾನು ಕೆಲವೇ ಕೆಲವು ದಿನಗಳು ಬದುಕುತ್ತೇನೆ ಎಂಬ ಅರಿವಿದ್ದರೂ ಪರೀಕ್ಷೆ ಬರೆಯಬೇಕೆಂಬ ಹಠ-ಛಲದೊಂದಿಗೆ ದ್ವಿತೀಯ ಪಿಯುಸಿಯಲ್ಲಿ ಶೇ. ೮೭.೬ರಷ್ಟು ಫಲಿತಾಂಶ ಪಡೆದು ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ದೈವಿಕ್‌ ಎಂಬ ಈ ವಿದ್ಯಾರ್ಥಿಯು ಇಂದಿನ ಎಲ್ಲಾ ವಿದ್ಯಾರ್ಥಿಗಳಿಗೆ ಪ್ರೇರಣೆ ಹಾಗೂ ಮಾದರಿಯಾಗಿರುತ್ತಾನೆ. ಇನ್ನೂ ಹೆಚ್ಚಿನ ಅಂಕ ಪಡೆದು ಕಾಲೇಜು ಹಾಗೂ ಜಿಲ್ಲೆಗೆ ಹೆಮ್ಮೆ ತರಬೇಕೆಂದುಕೊಂಡಿದ್ದೆ. ಆದರೆ, ನನ್ನ ದೈಹಿಕ ಅಸಮರ್ಥತತೆಯಿಂದ ಅದು ಸಾಧ್ಯವಾಗಲಿಲ್ಲ ಎಂದು ದೈವಿಕ್ ನೋವಿನಿಂದ ಹೇಳುತ್ತಾನೆ. ಈತನ ಸಾಧನೆ ಇತರರಿಗೆ ಮಾದರಿಯಾಗಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ವಾಯುಭಾರ ಕುಸಿತ : ಮೂರು ದಿನ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ
''ಮತ್ತೆ ಮೊಳಗಲಿದೆ ಜೆಡಿಎಸ್ ಕಹಳೆ: ಎಚ್ಡಿಕೆ 2028ಕ್ಕೆ ಸಿಎಂ''