ದುಷ್ಟಶಕ್ತಿಗಳ ಸಂಹಾರಕ್ಕೆ ದೈವಿಕ ಶಕ್ತಿ ಅಗತ್ಯ: ನಳಿನ್

KannadaprabhaNewsNetwork |  
Published : Oct 23, 2026, 02:30 AM IST
ಶಿವಯೋಗಿ ಶ್ರೀ ದುರ್ಗಾನಂದ ಸ್ವಾಮೀಜಿ ಕಾರ್ಯಕ್ರಮ ಉದ್ಘಾಟಿಸುತ್ತಿರುವುದು. | Kannada Prabha

ಸಾರಾಂಶ

ಸಮಾಜದಲ್ಲಿ ದುಷ್ಟಶಕ್ತಿಗಳು ವಿವಿಧ ರೂಪಗಳಲ್ಲಿ ಕಾಣಿಸಿಕೊಳ್ಳುತ್ತಿದ್ದು, ಅವುಗಳ ಸಂಹಾರಕ್ಕೆ ದೈವಿಕ ಶಕ್ತಿ ಅಗತ್ಯವಾಗಿದೆ. ನವರಾತ್ರಿಯ ಸಂದರ್ಭದಲ್ಲಿ ದುಷ್ಟಶಕ್ತಿಗಳನ್ನು ನಾಶಪಡಿಸಿ, ಧರ್ಮದ ರಕ್ಷಣೆಗೆ ಶಕ್ತಿ ನೀಡುವಂತೆ ದೇವಿಯಲ್ಲಿ ಭಕ್ತಿಯಿಂದ ಪ್ರಾರ್ಥಿಸಬೇಕು ಎಂದು ಮಾಜಿ ಸಂಸದ ನಳಿನ್ ಕುಮಾರ್ ಕಟೀಲು ಹೇಳಿದರು.

ಕನ್ನಡಪ್ರಭವಾರ್ತೆ ಉಳ್ಳಾಲ

ಸಮಾಜದಲ್ಲಿ ದುಷ್ಟಶಕ್ತಿಗಳು ವಿವಿಧ ರೂಪಗಳಲ್ಲಿ ಕಾಣಿಸಿಕೊಳ್ಳುತ್ತಿದ್ದು, ಅವುಗಳ ಸಂಹಾರಕ್ಕೆ ದೈವಿಕ ಶಕ್ತಿ ಅಗತ್ಯವಾಗಿದೆ. ನವರಾತ್ರಿಯ ಸಂದರ್ಭದಲ್ಲಿ ದುಷ್ಟಶಕ್ತಿಗಳನ್ನು ನಾಶಪಡಿಸಿ, ಧರ್ಮದ ರಕ್ಷಣೆಗೆ ಶಕ್ತಿ ನೀಡುವಂತೆ ದೇವಿಯಲ್ಲಿ ಭಕ್ತಿಯಿಂದ ಪ್ರಾರ್ಥಿಸಬೇಕು ಎಂದು ಮಾಜಿ ಸಂಸದ ನಳಿನ್ ಕುಮಾರ್ ಕಟೀಲು ಹೇಳಿದರು.

ಕೋಟೆಕಾರು ಮಾಡೂರು ಮರಿಯಣ್ಣಪಾಲಿನ ಶ್ರೀ ಶಿವ ದುರ್ಗಾಂಬ ಮಠದಲ್ಲಿ ನಡೆಯುತ್ತಿರುವ ನವರಾತ್ರಿ ಉತ್ಸವದ ಅಂಗವಾಗಿ ಸೋಮವಾರ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಮಹಿಷಾಸುರ, ಚಂಡಮುಂಡರಂತಹ ರಾಕ್ಷಸರು ಇಂದು ಇಲ್ಲದಿದ್ದರೂ, ಭಯೋತ್ಪಾದಕರು ಹಾಗೂ ಜಿರಳೆಗಳ ರೂಪದಲ್ಲಿ ರಾಕ್ಷಸ ಪ್ರವೃತ್ತಿಗಳು ಸೃಷ್ಟಿಯಾಗುತ್ತಿವೆ ಎಂದರು.

ಕೋಟೆಕಾರು ಪ್ರದೇಶದಲ್ಲಿ ಶ್ರೀ ಶಿವ ದುರ್ಗಾಂಬ ಮಠವನ್ನು ನಿರ್ಮಿಸುವ ಮೂಲಕ ಹಿಂದೂ ಧರ್ಮದ ಶ್ರದ್ಧೆ ಮತ್ತು ಭಕ್ತಿಯನ್ನು ಬೆಳಗಿಸುವ ಕಾರ್ಯವನ್ನು ಶಿವಯೋಗಿ ಶ್ರೀ ದುರ್ಗಾನಂದ ಸ್ವಾಮೀಜಿ ಮಾಡುತ್ತಿದ್ದಾರೆ ಎಂದರು.

ಸಭೆ ಉದ್ಘಾಟಿಸಿ ಮಾತನಾಡಿದ ಶ್ರೀ ಶಿವ ದುರ್ಗಾಂಬ ಮಠದ ಶಿವಯೋಗಿ ಶ್ರೀ ದುರ್ಗಾನಂದ ಸ್ವಾಮೀಜಿ, ಧಾರ್ಮಿಕ ಕಾರ್ಯ ನಡೆಸಲು ರಾಜಕೀಯ ಭೇದಗಳನ್ನು ಬದಿಗಿಟ್ಟು ಹಿಂದೂ ಧರ್ಮೀಯರು ಒಗ್ಗಟ್ಟಾಗಬೇಕು. ಈ ಮಠವನ್ನು ವೈಯಕ್ತಿಕ ಹಿತಾಸಕ್ತಿಗಾಗಿ ನಿರ್ಮಿಸದೆ, ಹಿಂದೂ ಸಮಾಜದ ಏಳಿಗೆಗಾಗಿ ನಿರ್ಮಿಸಲಾಗಿದೆ ಎಂದರು.

ಕೋಟೆಕಾರು ಶೃಂಗೇರಿ ಶಾಖಾ ಮಠದ ಧರ್ಮಾಧಿಕಾರಿ ಸತ್ಯಶಂಕರ ಬೊಳ್ಳಾವ, ಪಿಲಾರು ಸಾಯಿಬಾಬಾ ಮಂದಿರದ ಧರ್ಮದರ್ಶಿ ದಿನೇಶ್ ಶರ್ಮ, ಶ್ರೀ ಶಿವ ದುರ್ಗಾಂಬ ಮಠದ ಟ್ರಸ್ಟಿ ಯಶವಂತ ಆಳ್ವ, ಕೋಟೆಕಾರು ಪಟ್ಟಣ ಪಂಚಾಯಿತಿ ಅಧ್ಯಕ್ಷೆ ದಿವ್ಯಾ ಶೆಟ್ಟಿ, ಬೀರಿ ಸಾರ್ವಜನಿಕ ಗಣೇಶೋತ್ಸವ ಸಮಿತಿ ಅಧ್ಯಕ್ಷೆ ರಾಜೀವಿ ಕೆಂಪುಮಣ್ಣು, ಹೊಸಬೀಡು ಅರಮನೆಯ ಮುಖ್ಯಸ್ಥ ಜನಾರ್ದನ ಬಲ್ಲಾಳ್, ಪೈವಳಿಕೆ ಅರಮನೆಯ ಮುಖ್ಯಸ್ಥ ರಾಜಗೋಪಾಲ್ ಬಲ್ಲಾಳ್, ರಾಷ್ಟ್ರೀಯ ಸ್ವಯಂಸೇವಕ ಸಂಘದ ಹಿರಿಯ ಕಾರ್ಯಕರ್ತ ಸಂಕಪ್ಪ ಭಂಡಾರಿ ಮತ್ತಿತರರಿದ್ದರು.

ಮಠದ ನವನಿರ್ಮಾಣ ಸಮಿತಿಯ ಪ್ರಧಾನ ಕಾರ್ಯದರ್ಶಿ ಆನಂದ ಶೆಟ್ಟಿ ಭಟ್ನಗರ ಸ್ವಾಗತಿಸಿದರು. ಆಡಳಿತ ಮೊಕ್ತೇಸರ ಚಂದ್ರಶೇಖರ ಉಚ್ಚಿಲ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಮಹಿಳಾ ಸಮಿತಿಯ ಪ್ರಧಾನ ಕಾರ್ಯದರ್ಶಿ ಬಬಿತಾ ಉಳ್ಳಾಲ್ ಕಾರ್ಯಕ್ರಮ ನಿರೂಪಿಸಿದರು. ಸಮಿತಿಯ ಅಧ್ಯಕ್ಷೆ ಅಮಿತಾ ಅಶ್ವಿನ್ ಬಂಡಿಕೊಟ್ಯ ವಂದಿಸಿದರು.

ಮಠದ ಅಭಿವೃದ್ಧಿಗೆ ಶ್ರಮಿಸುತ್ತಿರುವ ಬಾಬು ಚೌಟ ಮರಿಯಣ್ಣಪಾಲು, ಸತೀಶ್ ಪಣಿಕ್ಕರ್ ದೀಪಮ್, ಸದಾಶಿವ ಆಚಾರ್ಯ ಹರೇಕಳ, ರಿತಿಕ್ ಪೂಜಾರಿ ಹಾಗೂ ಕುಸುಮಾ ಮಡ್ಯಾರು ಅವರನ್ನು ಸನ್ಮಾನಿಸಲಾಯಿತು

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅಧರ್ಮದ ನಾಶ ಧರ್ಮದ ವಿಜಯವೇ ವಿಜಯದಶಮಿ: ರಂಭಾಪುರಿ ಜಗದ್ಗುರು
ಇಳಕಲ್ಲದಲ್ಲಿ ಆರೆಸ್ಸೆಸ್‌ ಆಕರ್ಷಕ ಪಥಸಂಚಲನ