ಒಗ್ಗಟಿಟ್ಟಿನ ಶ್ರಮದಿಂದ ದೈವತ್ವ ಸಮಾಜ ಪ್ರಗತಿ ಸಾಧ್ಯ : ಕರ್ಕಿ ಸಚ್ಚಿದಾನಂದ ಜ್ಞಾನೇಶ್ವರ ಭಾರತಿ ಸ್ವಾಮೀಜಿ

KannadaprabhaNewsNetwork |  
Published : Nov 11, 2024, 01:17 AM ISTUpdated : Nov 11, 2024, 07:37 AM IST
Meditation

ಸಾರಾಂಶ

ಸಾಗರದಲ್ಲಿ ದೈವಜ್ಞ ಬ್ರಾಹ್ಮಣ ಸಮಾಜದ ಸಭಾಭವನ ಲೋಕಾರ್ಪಣೆ ಸಮಾರಂಭ ನಡೆಯಿತು.

  ಸಾಗರ :  ದೈವಜ್ಞ ಸಮಾಜ ಎಲ್ಲಾ ಕ್ಷೇತ್ರದಲ್ಲೂ ಪ್ರಗತಿ ಸಾಧಿಸಲು ಕೇವಲ ಶ್ರೀಮಠ ಪ್ರಯತ್ನಿಸಿದರೆ ಸಾಲದು, ಸಮಾಜದ ಪ್ರತಿಯೊಬ್ಬರು ತಮ್ಮ ಕರ್ತವ್ಯ ಎಂದು ಭಾವಿಸಿ ಶ್ರಮಿಸಿದಾಗ ಮಾತ್ರ ಸಮಾಜ ಮುಖ್ಯವಾಹಿನಿಗೆ ಬರಲಿದೆ ಎಂದು ಕರ್ಕಿ ಸಚ್ಚಿದಾನಂದ ಜ್ಞಾನೇಶ್ವರ ಭಾರತಿ ಸ್ವಾಮೀಜಿ ಅಭಿಪ್ರಾಯಪಟ್ಟರು.

ಪಟ್ಟಣದ ಶಿವಪ್ಪನಾಯಕ ನಗರ ವ್ಯಾಪ್ತಿಯ ಇಕ್ಕೇರಿ ರಸ್ತೆಯಲ್ಲಿ ನಿರ್ಮಿಸಿರುವ ದೈವಜ್ಞ ಬ್ರಾಹ್ಮಣ ಸಮಾಜದವರ ಸಭಾಭವನವನ್ನು ಭಾನುವಾರ ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.

ಸಮಾಜದ ಒಳಿತಾಗುವ ಕಾರ್ಯದಲ್ಲಿ ಸಾವಿರಾರು ಜನ ತಮ್ಮ ಕೈಲಾದ ಮಟ್ಟದಲ್ಲಿ ನೈಜ ದಾನ ಮಾಡಿದ್ದಾರೆ. ದಾನ ಮಾಡುವಾಗ ಪ್ರಮಾಣ ಮುಖ್ಯವಲ್ಲ. ಬದಲಾಗಿ ಸಮಾಜದ ಒಳಿತಿನ ಉದಾತ್ತ ಗುಣ, ಮನೋಭಾವ ದೊಡ್ಡದು ಎಂದರು.

ಮನುಷ್ಯ ಜನ್ಮದಲ್ಲಿ ಜನಿಸಿದ ಮೇಲೆ ಒಳ್ಳೆಯ ಕಾರ್ಯಗಳಲ್ಲಿ ತನ್ನನ್ನು ತಾನು ತೊಡೆಸಿಕೊಳ್ಳಬೇಕು. ಇದು ಎಲ್ಲರ ಕರ್ತವ್ಯ. ಸಮಾಜ ಬಾಂಧವರ ಸಹಕಾರದಿಂದ ಭವ್ಯ ಸಭಾಭವನ ಲೋಕಾರ್ಪಣೆಯಾಗಿದೆ. ಎಲ್ಲರ ನಿರಂತರ ಶ್ರಮ ಇದರಲ್ಲಿ ಕಾಣುತ್ತಿದೆ ಎಂದು ಹೇಳಿದರು.

ಸಂಸದ ಬಿ.ವೈ.ರಾಘವೇಂದ್ರ ಮಾತನಾಡಿ, ರಾಷ್ಟ್ರ ಮೊದಲು ಎಂದು ಚಿಂತನೆ ಮಾಡುವ ಕೆಲವೇ ಸಮಾಜಗಳಲ್ಲಿ ದೈವಜ್ಞ ಒಂದು. ನಮ್ಮ ನೆಲದಲ್ಲಿ ಮೊದಲು ಮಠ, ಮಂದಿರ ಉಳಿದರೆ ಮಾತ್ರ ಸಂಸ್ಕೃತಿ ಬೆಳೆಯುತ್ತದೆ. ಇದನ್ನು ನಾವೆಲ್ಲರೂ ಅರ್ಥ ಮಾಡಿಕೊಳ್ಳಬೇಕು ಎಂದು ಹೇಳಿದರು.

ಸಮಾಜ ಹಾಗೂ ದೇಶದ ಹಿತ ಚಿಂತನೆಗೆ ಬದ್ಧರಾಗಿರುವ ದೈವಜ್ಞ ಬ್ರಾಹ್ಮಣರು ಸರಸ್ವತಿ ನದಿ ದಡದಲ್ಲಿ ದೇವರ ಕಾರ್ಯದಲ್ಲಿ ತೊಡಗಿಕೊಂಡವರು ಎನ್ನುತ್ತದೆ ಇತಿಹಾಸ.

ಮನೆ, ಮನಗಳು ಸೇರಿ ಸಮಾಜದ ಆಸ್ತಿಯಾಗಿ ಬೆಳೆದಿರುವಲ್ಲಿ ತಮ್ಮೆಲ್ಲರ ಶ್ರಮವಿದೆ. ಸಾಂಸ್ಕೃತಿಕವಾಗಿ ತಾವಿರುವ ನೆಲದೊಂದಿಗೆ ಉಳಿದು, ಬೆಳೆಯುವುದು ಈ ಸಮಾಜದವರ ರಕ್ತದಲ್ಲಡಗಿದೆ ಎಂದು ಸಂತಸ ವ್ಯಕ್ತಪಡಿಸಿದರು.

ಅಧ್ಯಕ್ಷತೆ ವಹಿಸಿದ್ದ ಸಮಾಜದ ಅಧ್ಯಕ್ಷ ಎಲ್.ಕೆ.ಮೋಹನ್ ಶೆಟ್ ಮಾತನಾಡಿ, ತಾಲೂಕಿನಲ್ಲಿ 72 ವರ್ಷದ ಇತಿಹಾಸ ಹೊಂದಿರುವ ದೈವಜ್ಞ ಬ್ರಾಹ್ಮಣ ಸಮಾಜದ ಈವರೆಗಿನ 10 ಅಧ್ಯಕ್ಷರೂ ಹತ್ತಾರು ವಿಧದಲ್ಲಿ ಕೊಡುಗೆ ನೀಡಿದ್ದಾರೆ. ಸಮಾಜಕ್ಕೆ ಆಸ್ತಿಯಾಗುವ ರೀತಿಯಲ್ಲಿ ಈ ಸಮುದಾಯ ಭವನ ನಿರ್ಮಿಸಲಾಗಿದೆ ಎಂದರು.

ಮಾಜಿ ಸಚಿವ ಕಾಗೋಡು ತಿಮ್ಮಪ್ಪ, ಉಪಾಧ್ಯಕ್ಷ ಹನುಮಂತ ಶೇಟ್, ರಾಘವೇಂದ್ರ ಎನ್.ಶೇಟ್, ನೀಲಕಂಠ ಪಿ.ರಾಯ್ಕರ್, ಜ್ಯೋತಿ ಕಾಶಿನಾಥ್, ಶಿವಮೊಗ್ಗ ವಲಯಾಧ್ಯಕ್ಷ ಜಗನ್ನಾಥ್ ಎನ್.ಶೇಟ್, ಆರ್.ಎಸ್.ರಾಯ್ಕರ್, ರವಿ ಎಸ್.ಗಾವ್ಕರ್, ಎಂ.ಎಸ್.ಅರುಣ್ ಕುಮಾರ್, ಗಣಪತಿ, ಮಧು ಮಾಲತಿ, ಅರವಿಂದ್ ರಾಯ್ಕರ್, ಮೇಘರಾಜ್, ಚೇತನ್ ಹಾಲಪ್ಪ, ಶ್ರೀಪಾದ ಜೆ.ಶೇಟ್, ಶರತ್ ಜೆ.ಶೇಟ್ ಮೊದಲಾದವರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕಿಡ್ನಾಪ್‌ ಆದ 1094 ಮಕ್ಕಳು ಇನ್ನೂ ಪತ್ತೆಯಾಗಿಲ್ಲ!
ತನಗೆ ಮದುವೆ ಮಾಡಿದ್ದ ಪುರೋಹಿತಗೂ ರಾಜೀವ್‌ ಲಾಂಗ್‌ ತೋರಿಸಿ ಧಮ್ಕಿ