ಕನ್ನಡಪ್ರಭ ವಾರ್ತೆ ಹುಬ್ಬಳ್ಳಿ
ನಗರದ ವಿವಿಧೆಡೆ ದಾಖಲಾದ 7 ಪ್ರತ್ಯೇಕ ಪ್ರಕರಣದಲ್ಲಿ ಕ್ರಿಕೆಟ್ ಬೆಟ್ಟಿಂಗ್‌ನಲ್ಲಿ ತೊಡಗಿದ್ದ 9 ಜನರನ್ನು ಬಂಧಿಸಿ ಒಟ್ಟು ₹29,610 ನಗದು ಹಾಗೂ ಎರಡು ಮೊಬೈಲ್ ಜಪ್ತಿ ಮಾಡಿದ್ದಾರೆ. ಅದರಂತೆ ಹು- ಧಾ ಮಹಾನಗರ ವ್ಯಾಪ್ತಿಯಲ್ಲಿ ಇಸ್ಪೀಟ್ ಜೂಜಾಟದಲ್ಲಿ ತೊಡಗಿದ್ದ 152 ಜನ ಜೂಜುಕೋರರನ್ನು ಬಂಧಿಸಿರುವ ಪೊಲೀಸರು, ಒಟ್ಟು 28 ಪ್ರಕರಣ ದಾಖಲಿಸಿ ₹2.89 ಲಕ್ಷ ಸೇರಿದಂತೆ ಇತರೆ ವಸ್ತುಗಳನ್ನು ವಶಕ್ಕೆ ಪಡೆದಿದ್ದಾರೆ.
152 ಜನರ ಮೇಲೆ ಪ್ರಕರಣಹು-ಧಾ ಕಮಿಷನರೇಟ್‌ನ ಉತ್ತರ ವಿಭಾಗದ ಗೋಕುಲ್ ರೋಡ್ ಪೊಲೀಸ್ ಠಾಣೆಯಲ್ಲಿ 7, ಉಪನಗರ ಠಾಣೆ 2, ವಿದ್ಯಾನಗರ ಠಾಣೆ 2, ಅಶೋಕನಗರ ಠಾಣೆಯಲ್ಲಿ 2, ಕಮರಿಪೇಟೆ ಪೊಲೀಸ್ ಠಾಣೆಯಲ್ಲಿ 1, ಕೇಶ್ವಾಪೂರ ಪೊಲೀಸ್ ಠಾಣೆಯಲ್ಲಿ 1, ಎಪಿಎಂಸಿ ನವನಗರ ಪೊಲೀಸ್ ಠಾಣೆಯಲ್ಲಿ 1 ಸೇರಿದಂತೆ ಒಟ್ಟು 16 ಪ್ರತ್ಯೇಕ ಜೂಜಾಟ ಪ್ರಕರಣ ದಾಖಲಿಸಿ 97 ಜನರನ್ನು ಬಂಧಿಸಿ ₹1.98 ಲಕ್ಷ ರೂ. ನಗದು ಹಾಗೂ ಇತರೆ ವಸ್ತುಗಳನ್ನು ಜಪ್ತಿ ಮಾಡಿದ್ದಾರೆ.
ದೀಪ ಕಾಯುವ ನೆಪ:
ಕ್ರಿಕೆಟ್ ಬೆಟ್ಟಿಂಗ್ 9 ಜನರ ಬಂಧನ
ಧಾರವಾಡ ಶಹರ ಪೊಲೀಸ್ ಠಾಣೆ ವ್ಯಾಪ್ತಿಯ ಸಿ.ಎಂ. ಗಾರ್ಡ್‌ನ ಬಳಿ ಕ್ರಿಕೆಟ್ ಬೆಟ್ಟಿಂಗ್‌ನಲ್ಲಿ ತೊಡಗಿದವರ ಮೇಲೆ ದಾಳಿ ನಡೆಸಿದ ಸಿಸಿಬಿ ತಂಡ, ಒಬ್ಬ ಆರೋಪಿಯನ್ನು ಬಂಧಿಸಿ ₹15 ಸಾವಿರ ನಗದು ಹಾಗೂ ಮೊಬೈಲ್ ಜಪ್ತಿ ಮಾಡಿದೆ. ಇನ್ನು ವಿದ್ಯಾನಗರದ ಪೊಲೀಸ್ ಠಾಣೆ ವ್ಯಾಪ್ತಿಯ ಸಾಯಿನಗರದಲ್ಲಿ ಒಬ್ಬನನ್ನು ಬಂಧಿಸಿ ₹2250 ಹಾಗೂ ಇತರೆ ವಸ್ತುಗಳನ್ನು ವಶಕ್ಕೆ ಪಡೆದಿದ್ದರೆ, ಧಾರವಾಡ ಉಪನಗರ ಠಾಣೆ ವ್ಯಾಪ್ತಿಯ ಮಾಳಮರದ ಬಳಿ ದಾಳಿ ನಡೆಸಿ ಇಬ್ಬರನ್ನು ಬಂಧಿಸಿ ₹2250 ನಗದು ಹಾಗೂ ಮೊಬೈಲ್ ಜಪ್ತಿ ಮಾಡಿದ್ದಾರೆ. ಕೇಶ್ವಾಪುರ ಠಾಣೆ ವ್ಯಾಪ್ತಿಯ ರಮೇಶ ಭವನ ಹಾಗೂ ಗೋಪನಕೊಪ್ಪದಲ್ಲಿ ಕ್ರಿಕೆಟ್ ಬೆಟ್ಟಿಂಗ್‌ನಲ್ಲಿ ತೊಡಗಿದ್ದ ಮೂವರನ್ನು ಬಂಧಿಸಿ ₹3100 ನಗದು ಜಪ್ತಿ ಮಾಡಿದ್ದಾರೆ. ಗೋಕುಲ್‌ರೋಡ್ ಠಾಣೆ ವ್ಯಾಪ್ತಿಯ ಪ್ರತಿಷ್ಠಿತ ಹೊಟೇಲ್ ಹಾಗೂ ನೆಹರು ನಗರದಲ್ಲಿ ಬೆಟ್ಟಿಂಗ್‌ನಲ್ಲಿ ತೊಡಗಿದ್ದ ಇಬ್ಬರನ್ನು ಬಂಧಿಸಿ ₹7 ಸಾವಿರ ನಗದು ವಶಕ್ಕೆ ಪಡೆದಿದ್ದಾರೆ.ವಿಶೇಷ ಕಾರ್ಯಾಚರಣೆ ಮೂಲಕ ಜೂಜಾಟ ಹಾಗೂ ಬೆಟ್ಟಿಂಗ್ ಪ್ರಕರಣ ದಾಖಲಿಸುವಲ್ಲಿ ವಿಶೇಷ ಕರ್ತವ್ಯ ನಿರ್ವಹಿಸಿದ ಅಧಿಕಾರಿ ಮತ್ತು ಸಿಬ್ಬಂದಿ ವರ್ಗದ ಕಾರ್ಯವೈಖರಿಯನ್ನು ಪೊಲೀಸ್ ಆಯುಕ್ತೆ ರೇಣುಕಾ ಸುಕುಮಾರ ಶ್ಲಾಘಿಸಿದ್ದಾರೆ.