ಕನ್ನಡಪ್ರಭ ವಾರ್ತೆ ಉಡುಪಿ
ಈ ಸಂದರ್ಭ ಮಾತನಾಡಿದ ಸಂಸ್ಥೆಯ ಪ್ರಮುಖರಾದ ಡಾ. ಶಶಿಕಿರಣ್ ಶೆಟ್ಟಿ, ಫೌಂಡೇಶನ್ ಸಮಾಜಕ್ಕೆ ಸುಮಾರು 2 ಕೋಟಿ ರು.ಗಳಷ್ಟು ಮೊತ್ತದ ಸೇವಾ ಕಾರ್ಯಗಳನ್ನು ದಾನಿಗಳ ನೆರವಿನಿಂದ ಮಾಡಿದ್ದು, ಅದೇ ರೀತಿ ಸ್ವರ್ಗ ಆಶ್ರಮವನ್ನು ಈಗಾಗಲೇ ಪ್ರಾರಂಭಿಸಲಾಗಿದೆ ಎಂದರು.ಕಾರ್ಯಕ್ರಮದ ಮುಖ್ಯ ಅತಿಥಿ ಸಮಾಜಸೇವಕ ವಿಶು ಶೆಟ್ಟಿ ಅಂಬಲಪಾಡಿ ಮಾತನಾಡಿ, ಸಮಾಜ ಸೇವೆ ಮಾಡುವಾಗ ಟೀಕೆ ಟಿಪ್ಪಣಿ ಮಾಡುವವರು ಬಹಳಷ್ಟು ಮಂದಿ ಇರುತ್ತಾರೆ. ಅವರು ಟೀಕೆ ಮಾಡಿದಷ್ಟು ನಾವು ಎತ್ತರಕ್ಕೆ ಬೆಳೆಯಲು ಸಾಧ್ಯ ಎಂದು ಹೇಳಿದರು.ಆಶ್ರಮದ ಮೇಲ್ವಿಚಾರಕರಾದ ಮಹೇಶ್, ಹರೀಶ್ ಉಪಸ್ಥಿತರಿದ್ದರು. ಡಾ. ಶಶಿಕಿರಣ್ ಶೆಟ್ಟಿ ಬರೆದ ಬದುಕು ಬದಲಿಸುವ ಕಥೆಗಳು ಪುಸ್ತಕವನ್ನು ಪ್ರದೀಪ್ ಭಟ್ ಬಿಡುಗಡೆಗೊಳಿಸಿದರು.ಕಾರ್ಯಕ್ರಮದಲ್ಲಿ ಐದು ಮಂದಿ ಅಸಹಾಯಕರಿಗೆ ದಿನಸಿ ವಸ್ತುಗಳನ್ನು ಮತ್ತು ಹತ್ತು ಮಂದಿ ಅಸಹಾಯಕರಿಗೆ ಒಂದು ಲಕ್ಷದ ಐದು ಸಾವಿರ ರು. ಸಹಾಯ ಧನ ವಿತರಿಸಲಾಯಿತು. ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಕನ್ಯಾಡಿ ಸೇವಾ ಧಾಮದ ವಿನಾಯಕ ರಾವ್ ಅವರನ್ನು ಸನ್ಮಾನಿಸಲಾಯಿತು. ಆಶ್ರಮವಾಸಿಗಳು ತಯಾರಿಸಿದ ಹಣತೆಯಿಂದ ದೀಪ ಬೆಳಗಿಸಿ ದೀಪಾವಳಿ ಆಚರಿಸಲಾಯಿತು.
ವಾಣಿಶ್ರೀ ಗೋವಿಂದ ಭಂಡಾರಿ ಕಾರ್ಯಕ್ರಮ ನಿರೂಪಿಸಿದರು. ಬಂಗಾರಪ್ಪ, ರಾಘವೇಂದ್ರ ಪೂಜಾರಿ, ಉದಯ್ ನಾಯ್ಕ್, ರಾಘವೇಂದ್ರ ಪ್ರಭು ಕರ್ವಾಲು, ರವಿ ಮತ್ತು ಸಂಸ್ಥೆಯ ಸದಸ್ಯರು ಭಾಗವಹಿಸಿದ್ದರು.