- ಶ್ರೀ ಶಾರದಾ ಪೀಠದಲ್ಲಿ ಜಗದ್ಗುರುಗಳಿಂದ ಗೋಪೂಜೆ । ತಾಲೂಕಿನೆಲ್ಲೆಡೆ ಬಲಿಪಾಡ್ಯಮಿ । ಲಕ್ಷ್ಮಿಪೂಜೆ ಹಬ್ಬದ ಸಡಗರ
ತಾಲೂಕಿನಾದ್ಯಂತ ಕಳೆದ 3 ದಿನಗಳಿಂದ ಮಳೆ ನಡುವೆ ದೀಪಾವಳಿ ಸಂಭ್ರಮ ಕಂಡುಬಂದಿತು. ಬಲಿಪಾಡ್ಯಮಿ ದಿನ ಬುಧವಾರ ಶ್ರೀಮಠದ ನರಸಿಂಹವನದಲ್ಲಿ ಗೋಪೂಜೆ, ಗೋಶಾಲೆಯಲ್ಲಿ ಜಗದ್ಗುರು ಶ್ರೀ ಭಾರತೀ ತೀರ್ಥ ಮಹಾಸ್ವಾಮಿ ಗೋವುಗಳಿಗೆ ಪೂಜೆ ನೆರವೇರಿಸಿದರು.
ಗೋಶಾಲೆಯಲ್ಲಿ ಎಲ್ಲಾ ಹಸು, ಕರುಗಳಿಗೆ ಮೈತೊಳೆಸಿ, ಬಣ್ಣದ ಚಿತ್ತಾರ ಮೂಡಿಸಿ ರೇಶ್ಮೆ ಹೊದಿಕೆ ಹಾಕಲಾಗಿತ್ತು. ವಾದ್ಯ ಮೇಳ, ಛತ್ರಿ ಚಾಮರ ವೇದಘೋಷಗಳೊಂದಿಗೆ ಗೋಶಾಲೆಗೆ ಆಗಮಿಸಿದ ಶ್ರೀಗಳು ಗೋವುಗಳಿಗೆ ಆರತಿ ಬೆಳಗಿ ಸಿಹಿ ತಿನಿಸುಗಳನ್ನು ನೀಡಿದರು. ಗಜಶಾಲೆಯಲ್ಲಿ ಗಜಗಳಿಗೆ ಪೂಜೆ ನೆರವೇರಿಸಿ ಸಿಹಿತಿನಿಸಿದರು. ಇದಕ್ಕೂ ಮೊದಲು ಶ್ರೀ ಚಂದ್ರ ಮೌಳೀಶ್ವರ ಹಾಗೂ ಶ್ರೀ ಚಕ್ರಕ್ಕೆ ಪೂಜೆ ನೆರವೇರಿಸಿದರು. ಇದೇ ಸಂದರ್ಭದಲ್ಲಿ ನರಸಿಂಹವನದ ಗೋಶಾಲೆಯಲ್ಲಿ ನೂತನ ಶ್ರೀ ಕೃಷ್ಣನ ವಿಗ್ರಹ ಪ್ರತಿಷ್ಠಾಪನೆ ನೆರವೇರಿಸಿದರು.ಮಳೆ ದೇವರು ಕಿಗ್ಗಾದಲ್ಲಿ ಗೋಪೂಜೆ:ಮಲೆನಾಡಿನ ಪ್ರಸಿದ್ಧ ಮಳೆ ದೇವರು ಕಿಗ್ಗಾ ಶ್ರೀ ಋಷ್ಯಶೃಂಗೇಶ್ವರ ಸ್ವಾಮಿ ಆವರಣದಲ್ಲಿ ಬುಧವಾರ ಗೋಪೂಜೆ ಸಹಿತ ವಿವಿಧ ಧಾರ್ಮಿಕ ಕಾರ್ಯಕ್ರಮ ನೆರವೇರಿತು. ಬೆಳಿಗ್ಗೆ ಗೋವುಗಳಿಗೆ ಪೂಜೆ ನೆರವೇರಿಸಿ ಸಿಹಿ ತಿನಿಸು ನೀಡ ತಿನಿಸಲಾಯಿತು. ನಂತರ ಬಲಿ ಉತ್ಸವ ಸಹಿತ ವಿಶೇಷ ಪೂಜೆ, ವಿವಿಧ ಧಾರ್ಮಿಕ ಕಾರ್ಯಕ್ರಮ, ಭಕ್ತರಿಗೆ ಪ್ರಸಾದ ವಿನಿಯೋಗ ನಡೆಯಿತು.
ತಾಲೂಕಿನ ಕಿಗ್ಗಾ, ಕಸಬಾ ಸೀಮೆ ವ್ಯಾಪ್ತಿಯ ಎಲ್ಲೆಡೆ ಬೆಳಿಗ್ಗೆಯಿಂದಲೂ ಗೋಪೂಜೆ, ದೀಪಾವಳಿ ಸಡಗರ ಕಂಡುಬಂದಿತು. ದನದ ಕೊಟ್ಟಿಗೆಗಳನ್ನು ಸ್ವಚ್ಛಗೊಳಿಸಿ ತಳಿರು ತೋರಣ, ಹೂ ಹಾರಗಳಿಂದ ಅಲಂಕರಿಸಲಾಗಿತ್ತು. ಹಸು,ಕರುಗಳನ್ನು ಅಲಂಕರಿಸಿ ಆರತಿ ಬೆಳಗಿ, ಸಿಹಿ ತಿನಿಸಲಾಯಿತು. ಗಂಟೆಗಳ ಶಬ್ಧ ಝೇಂಕರಿಸತೊಡಗಿತು. ಪಟಾಕಿಗಳನ್ನು ಸಿಡಿಸಲಾಯಿತು.
ವಿವಿಧ ವೇಷಾಧಾರಿಗಳ ಕುಣಿತ:
23 ಶ್ರೀ ಚಿತ್ರ 1-