ದಾವಣಗೆರೆಯಲ್ಲಿ ದೀಪಾವಳಿ: ಹಬ್ಬದ ಖರೀದಿ ಜೋರು

KannadaprabhaNewsNetwork |  
Published : Oct 20, 2025, 01:02 AM IST
ಕ್ಯಾಪ್ಷನ19ಕೆಡಿವಿಜಿ43, 44 ದಾವಣಗೆರೆಯ ಮಾರುಕಟ್ಟೆಯಲ್ಲಿ ದೀಪಾವಳಿ ಹಬ್ಬಕ್ಕೆ ಹಣತೆಗಳನ್ನು ಖರೀದಿಸುತ್ತಿರುವ ಗ್ರಾಹಕರು. ........ಕ್ಯಾಪ್ಷನ19ಕೆಡಿವಿಜಿ45, 46 ದಾವಣಗೆರೆಯ ವಿವಿಧ ಅಂಗಡಿಗಳಲ್ಲಿ ದೀಪಾವಳಿಗೆ ಆಕಾಶ ಬುಟ್ಟಿಗಳನ್ನು ಖರೀದಿಸುತ್ತಿರುವುದು. | Kannada Prabha

ಸಾರಾಂಶ

ದಾವಣಗೆರೆ ಜನತೆ ಸಂಭ್ರಮ ಸಡಗರದಿಂದ ದೀಪಾವಳಿ ಆಚರಿಸಲು ಸಿದ್ದತೆ ನಡೆಸಿತ್ತು. ಎಲ್ಲಿ ನೋಡಿದರಲ್ಲಿ ಜನವೋ ಜನ. ಬಟ್ಟೆ ಅಂಗಡಿ, ಆಭರಣಗಳ ಅಂಗಡಿ, ಶೋರೂಂ, ಮಾರುಕಟ್ಟೆ, ಕಿರಾಣಿ ಅಂಗಡಿ, ಸ್ಟೋರ್‌ಗಳು, ಮಾಲ್‌ಗಳಲ್ಲಿ ಜನರು ಹಬ್ಬದ ಸಾಮಾನು ಖರೀದಿಸಲು ಮುಂದಾಗಿದ್ದರು.

ಕನ್ನಡಪ್ರಭ ವಾರ್ತೆ ದಾವಣಗೆರೆ

ದಾವಣಗೆರೆ ಜನತೆ ಸಂಭ್ರಮ ಸಡಗರದಿಂದ ದೀಪಾವಳಿ ಆಚರಿಸಲು ಸಿದ್ದತೆ ನಡೆಸಿತ್ತು. ಎಲ್ಲಿ ನೋಡಿದರಲ್ಲಿ ಜನವೋ ಜನ. ಬಟ್ಟೆ ಅಂಗಡಿ, ಆಭರಣಗಳ ಅಂಗಡಿ, ಶೋರೂಂ, ಮಾರುಕಟ್ಟೆ, ಕಿರಾಣಿ ಅಂಗಡಿ, ಸ್ಟೋರ್‌ಗಳು, ಮಾಲ್‌ಗಳಲ್ಲಿ ಜನರು ಹಬ್ಬದ ಸಾಮಾನು ಖರೀದಿಸಲು ಮುಂದಾಗಿದ್ದರು.

ನರಕ ಚತುರ್ಧಶಿಯ ಮುನ್ನಾ ದಿನವಾದ ಅ.19ರ ಭಾನುವಾರ ಜನತೆ ನೀರು ತುಂಬುವ ಹಬ್ಬವನ್ನು ಆಚರಿಸಿದರು. ಅ. 20ರ ಸೋಮವಾರ ನರಕಚತುರ್ಧಶಿ, ಅಭ್ಯಂಜನ ಸ್ನಾನ ಜತೆಗೆ ದೀಪವಾಳಿ ಅಮವಾಸ್ಯೆ ಸಹ ಅಂದೇ ಮಧ್ಯಾಹ್ನವೇ ಆರಂಭವಾಗುವುದರಿಂದ ಕೆಲವು ಮನೆಗಳು, ಅಂಗಡಿ ಮುಂಗಟ್ಟುಗಳಲ್ಲಿ ಲಕ್ಷ್ಮಿ ಪೂಜೆಗೆ ಸಿದ್ದತೆ ಮಾಡಿಕೊಳ್ಳುತ್ತಿದ್ದರು.

ದಿನಸಿ, ಹೂವು, ಹಣ್ಣು, ಪಟಾಕಿ ಎಲ್ಲಾ ದರಗಳು ಏರಿಕೆ ಕಂಡಿದ್ದರೂ ಸಹಾ ವರ್ಷಕ್ಕೊಮ್ಮೆ ಬರುವ ಹಬ್ಬ ದೀಪಾವಳಿ ಮಕ್ಕಳಿಗೆ ಖುಷಿ ಕೊಡುವ ಹಬ್ಬ ಇದಾಗಿದೆ. ಜೊತೆಗೆ ಮನೆಗಳಲ್ಲಿ ಹಿರಿಯರ ಹಬ್ಬ ಮಾಡುವ ವಾಡಿಕೆ ಇದ್ದು, ಜನತೆ ಮಾರುಕಟ್ಟೆಯಲ್ಲಿ ಹಬ್ಬದ ಖರೀದಿಯಲ್ಲಿದ್ದರು. ಯಾವುದೇ ರೀತಿಯ ಮಳೆಯ ವಾತಾವರಣ ಇರಲಿಲ್ಲ. ಹಾಗಾಗಿ ದೀಪಾವಳಿ ಆಚರಣೆಗೆ ರಂಗು ಬಂದಿದೆ. ಲಕ್ಷ್ಮಿ ಪೂಜೆಗೆ ಎಲ್ಲಾ ರೀತಿಯ ಅಂಗಡಿ ಮುಂಗಟ್ಟುಗಳು ತಮ್ಮ ಅಂಗಡಿಗಳನ್ನು ಸ್ವಚ್ಛಗೊಳಿಸಿ ವಿದ್ಯುತ್ ದೀಪಗಳಿಂದ ಅಲಂಕರಿಸುತ್ತಿದ್ದರು.

ಭಾನುವಾರ ರಜಾ ಇದ್ದ ಕಾರಣ ತಮ್ಮ ತಮ್ಮ ಊರುಗಳಿಗೆ ತೆರಳಲು ಬಸ್ ನಿಲ್ದಾಣ, ರೈಲ್ವೆ ನಿಲ್ದಾಣಗಳಲ್ಲಿ ಜನಸಾಗರ ತುಂಬಿತ್ತು. ರಿರ‍್ವೇಷನ್ ಇದ್ದ ಕಾರಣ ಕೆಲವರು ಸೀಟು ಸಿಕ್ಕಿದ್ದಕ್ಕೆ ಕೆಲವರು ಸಂತಸಪಟ್ಟರು.

ದೀಪಾವಳಿ ಎಲ್ಲರ ಮನೆಗಳಲ್ಲಿ ಸಂಭ್ರಮದಿಂದ ಆಚರಿಸುವ ಹಬ್ಬವಾಗಿದ್ದು, ಬೆಳಕಿನ ಹಬ್ಬದ ಹಿನ್ನಲೆಯಲ್ಲಿ ಭಾನುವಾರ ಬೆಳಿಗ್ಗೆಯಿಂದಲೇ ನಗರದ ಬಟ್ಟೆ ಅಂಗಡಿ, ಮಾರುಕಟ್ಟೆ ಸೇರಿದಂತೆ ಎಲ್ಲೆಡೆ ಜನರು ಖರೀದಿಯಲ್ಲಿ ಮಗ್ನರಾಗಿದ್ದರು. ಕೆಲವರು ರಸ್ತೆ ಬದಿಗಳಲ್ಲಿ ಹಣತೆಗಳನ್ನು ಖರೀದಿಸುತ್ತಿದ್ದರು. ಕೆಲವು ರಸ್ತೆಗಳಲ್ಲಿ ಸಂಚಾರ ಅಸ್ತವ್ಯಸ್ತವಾಗಿದ್ದು ಸಂಚಾರಿ ಪೊಲೀಸರು ನಿಯಂತ್ರಣ ಮಾಡಿದರು.

ಯಥಾ ಪ್ರಕಾರ ಹೂವು ಹಣ್ಣುಗಳ ದರ ಏರಿಕೆಯಾಗಿದ್ದರೂ ವರ್ಷಕ್ಕೊಮ್ಮೆ ಮಾಡುವ ದೀಪಾವಳಿ ಲಕ್ಷ್ಮಿ ಪೂಜೆಗೆ ಮಾರುಕಟ್ಟೆಯಲ್ಲಿ ಜನರು ಮಣ್ಣಿನ ಹಣತೆಗಳು, ವಿವಿಧ ಬಗೆಯ ಆಕಾಶ ಬುಟ್ಟಿಗಳು, ಹೂವು, ಹಣ್ಣುಗಳು, ಕುಂಬಳಕಾಯಿ ಖರೀದಿ ಜೋರಾಗಿತ್ತು.

PREV

Recommended Stories

ಖಾಸಗಿ ಸಂಘಟನೆಗಳಿಗೆ ನಿಷೇಧ ಹೇರಿದ್ದು ಜಗದೀಶ್‌ ಶೆಟ್ಟರ್‌ : ಪರಂ
ಕರ್ನಾಟಕಕ್ಕೆ ₹385 ಕೋಟಿ ಕೇಂದ್ರೀಯ ನೆರೆ ಪರಿಹಾರ