ರಾಮನಗರ: ಬೆಂಗಳೂರು ದಕ್ಷಿಣ ಜಿಲ್ಲೆ(ರಾಮನಗರ)ಯವರೇ ಆದ ಮುಖ್ಯಮಂತ್ರಿಯಾಗಿದ್ದ ಕೆಂಗಲ್ ಹನುಮಂತಯ್ಯನವರು ವಿಧಾನಸೌಧ ನಿರ್ಮಿಸಿ ಅಜರಾಮರರಾದರು. ಅವರಂತೆ ನೂತನ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಮೇಕೆದಾಟು ಸಮತೋಲನ ಜಲಾಶಯ ನಿರ್ಮಿಸಿದರೆ ಇತಿಹಾಸದ ಪುಟಗಳಲ್ಲಿ ಉಳಿಯುತ್ತಾರೆ. ಇದನ್ನು ಡಿಕೆಶಿ ಸಾಧಿಸುತ್ತಾರೆಂಬ ಅಚಲ ವಿಶ್ವಾಸ ನನಗಿದೆ...
ಕೆಂಗಲ್ ಹನುಂತಯ್ಯ ವಿಧಾನಸೌಧ ಹಾಗೂ ಎಸ್.ಎಂ.ಕೃಷ್ಣ ವಿಕಾಸಸೌಧ ನಿರ್ಮಿಸಿ ಸಾಕ್ಷಿಗುಡ್ಡೆ ಬಿಟ್ಟು ಹೋದರು. ಅದೇ ರೀತಿ ಡಿ.ಕೆ.ಶಿವಕುಮಾರ್ ಅವರು ಮೇಕೆದಾಟು ಸಮತೋಲನ ಜಲಾಶಯ ನಿರ್ಮಿಸಿದರೆ ಬೆಂಗಳೂರು ನಗರ ಸೇರಿದಂತೆ ಬಯಲು ಸೀಮೆ ಜಿಲ್ಲೆಗಳಿಗೆ ಕುಡಿಯುವ ನೀರು ಪೂರೈಸಲು ಅನುಕೂಲವಾಗುತ್ತದೆ. ಈ ಯೋಜನೆ ಸಾಕಾರಗೊಂಡರೆ ಸೂರ್ಯ ಚಂದ್ರರು ಇರುವವರೆಗೂ ನಾಡಿನ ಜನರು ಡಿಕೆಶಿ ಅವರನ್ನು ನೆನೆಯುತ್ತಾರೆ ಎಂದು ಹೇಳಿದರು.
ಶಿಸ್ತಿನ ಸಿಪಾಯಿಗಳನ್ನು ಸೃಷ್ಟಿಸಿದ ಡಿಕೆಶಿ:ಯುವಕರ ಆದಿಯಾಗಿ ಹಿರಿಯ ಮುಖಂಡರು ಒಪ್ಪಿಕೊಳ್ಳುವಂತಹ ಗುಣ ಡಿ.ಕೆ.ಶಿವಕುಮಾರ್ ಅವರಲ್ಲಿದೆ. ನನ್ನಂತಹ ಸಾವಿರಾರು ಮುಖಂಡರನ್ನು ರಾಜಕೀಯವಾಗಿ ಗುರುತಿಸಿ ನಾಯಕರನ್ನಾಗಿ ಸೃಷ್ಟಿ ಮಾಡಿದ್ದಾರೆ. ಇದು ಅವರ ಸಂಘಟನಾ ಚತುರತೆಗೆ ಸಾಕ್ಷಿಯಾಗಿದೆ. ಅವರನ್ನು ನಂಬಿಕೊಂಡು ರಾಜಕಾರಣ ಮಾಡಿದವರು ಎಂದೂ ಸೋತ ಉದಾಹರಣೆಯೇ ಇಲ್ಲ. ಎಲ್ಲರಿಗೂ ಡಿಕೆಶಿ ಶಕ್ತಿ ತುಂಬುವ ಕೆಲಸ ಮಾಡುತ್ತಿದ್ದಾರೆ. ಆ ಸಾಲಿನಲ್ಲಿ ನಾನೂ ಸೇರಿದ್ದೇನೆ. 1985ರಲ್ಲಿ ಸಾತನೂರು ಕ್ಷೇತ್ರದಿಂದ ದೇವೇಗೌಡರ ವಿರುದ್ಧ ಯುವಕರಾಗಿದ್ದ ಡಿ.ಕೆ.ಶಿವಕುಮಾರ್ ಸ್ಪರ್ಧೆ ಮಾಡಿದ್ದರು. ಆಗಲೇ ಪದವಿ ವ್ಯಾಸಂಗ ಮಾಡುತ್ತಿದ್ದ ನನ್ನ ಮೇಲೆ ಡಿಕೆಶಿ ರಾಜಕೀಯ ಪ್ರಭಾವ ಬೀರಿದ್ದರು. ವ್ಯಾಸಂಗ ಮುಗಿದ ಬಳಿಕ ರೈತ ಚಳವಳಿಯಲ್ಲಿ ಗುರುತಿಸಿಕೊಂಡ ನಾನು, 1987ರಲ್ಲಿ ಮಂಡಲ ಪಂಚಾಯತಿ ಚುನಾವಣೆಯಲ್ಲಿ ಗೆದ್ದು, ಎಂಪಿಸಿಎಸ್ ಅಧ್ಯಕ್ಷನಾದೆ. ಅಲ್ಲಿಂದ ಬೆಂಗಳೂರು ಹಾಲು ಒಕ್ಕೂಟದ ನಿರ್ದೇಶಕನಾಗಿ ಅಧ್ಯಕ್ಷನಾಗಿಯೂ ಆಯ್ಕೆಯಾಗಿದ್ದೆ.
ಡಿಕೆಶಿ ಅವರು ರಾಮನಗರ ಜಿಲ್ಲೆ ಹೆಸರನ್ನು ಬೆಂಗಳೂರು ದಕ್ಷಿಣ ಜಿಲ್ಲೆ ಎಂದು ಮರು ನಾಮಕರಣ ಮಾಡಿ ಹೊಸ ಬ್ರ್ಯಾಂಡ್ ತಂದುಕೊಟ್ಟರು. ಈ ಮೂಲಕ ಬದಲಾವಣೆಗೆ ಕಾರಣರಾದರು. ಅದೇ ರೀತಿ ರಾಮನಗರದವರೆಗೆ ಮೆಟ್ರೋ ವಿಸ್ತರಣೆ, ಮಾವು ಸಂಸ್ಕರಣಾ ಘಟಕ, ರೇಷ್ಮೆ ಉಪ ಉತ್ಪನ್ನಗಳ ತಯಾರಿಕಾ ಘಟಕ, ಕೈಗಾರಿಕಾ ಪ್ರದೇಶ ಸ್ಥಾಪನೆ ಸೇರಿದಂತೆ ಅನೇಕ ಅಭಿವೃದ್ಧಿ ಕಾರ್ಯಗಳ ಮೂಲಕ ಡಿಕೆಶಿಯವರು ಜಿಲ್ಲೆಯ ಚಿತ್ರಣವನ್ನು ಬದಲಾಯಿಸುತ್ತಾರೆಂಬ ವಿಶ್ವಾಸವನ್ನು ಪಿ.ನಾಗರಾಜು ವ್ಯಕ್ತಪಡಿಸಿದರು.
ಡಿಕೆಶಿ-ನಾಗರಾಜರ ಒಡನಾಡ
(ಮೇಲಿನ ಬಾಕ್ಸ್‌ಗೆ ನಾಗರಾಜ್‌ರ ಮಗ್‌ಶಾಟ್ ಫೋಟೋ ಬಳಸಿ)
(ಎರಡೂ ಫೋಟೋಗಳನ್ನು ಕಡ್ಡಾಯವಾಗಿ ಬಳಸಬೇಕು)