ರಾಮನಗರ: ಡಿ.ಕೆ.ಶಿವಕುಮಾರ್ ಈ ನಾಡಿನ ಮುಖ್ಯಮಂತ್ರಿಗಳು. ದೇಶಕ್ಕೆ ಅನ್ನ ನೀಡುವ ರೈತರ ಪರವಾಗಿ ನಿಲ್ಲಬೇಕೇ ಹೊರತು ರಿಯಲ್ ಎಸ್ಟೇಟ್ ಮಾಡುವವರ ಪರವಾಗಿ ಅಲ್ಲ. ಮುಖ್ಯಮಂತ್ರಿಗಳಿಗೆ ಯಾವ ಕಾರಣಕ್ಕೂ ರೈತರ ಬದುಕಿನ ಜೊತೆ ಚೆಲ್ಲಾಟ ಆಡಲು ಬಿಡುವುದಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಎಚ್ಚರಿಕೆ ನೀಡಿದರು.
ಇಲ್ಲಿವರೆಗೆ ರೖೆತರ ಹೊಟ್ಟೆ ಮೇಲೆ ಹೊಡೆದು ಕಣ್ಣೀರು ಹಾಕಿಸಿದ ಯಾವುದೇ ಸರ್ಕಾರಕ್ಕೆ ಒಳ್ಳೆದಾಗಲ್ಲ. ಆ ಸರ್ಕಾರಗಳು ಹೆಚ್ಚು ದಿನ ಉಳಿಯುವುದೂ ಇಲ್ಲ. ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ರೈತರ ಮೇಲೆ ಗೂಂಡಾಗಿರಿ, ದಬ್ಬಾಳಿಕೆ ಮಾಡುವುದನ್ನು ಬಿಟ್ಟು ರೈತರ ಪರವಾಗಿ ನಿಲ್ಲಬೇಕು ಎಂದು ಒತ್ತಾಯಿಸಿದರು.
ಡಿ.ಕೆ.ಶಿವಕುಮಾರ್ ಅವರಿಗೆ ರಿಯಲ್ ಎಸ್ಟೇಟ್ ದಂಧೆ ಮಾಡಲು ಬೇರೆ ಕಡೆಗಳಲ್ಲಿ ಬೇಕಾದಷ್ಟು ಜಮೀನುಗಳಿವೆ. ಮುಖ್ಯಮಂತ್ರಿಗಳು, ಶಾಸಕರು ನೂರಾರು ಎಕರೆ ಜಮೀನು ಇಟ್ಟಿಕೊಳ್ಳಬಹುದು. ಅದೇ ಸಣ್ಣ ರೈತರು ಜಮೀನು ಇಟ್ಟುಕೊಂಡು ಬದುಕುವುದು ಬೇಡವೇ. ರೈತರನ್ನು ಬೀದಿಗೆ ತಂದರೆ ಆ ಭಗವಂತನು ನಿಮ್ಮನ್ನು ಕ್ಷಮಿಸುವುದಿಲ್ಲ ಎಂದರು.ಈ ಯೋಜನೆಗೆ ಬಲವಂತವಾಗಿ ಭೂ ಸ್ವಾಧೀನ ಮಾಡಲು ಹೊರಟಿರುವ ರಾಜ್ಯ ಸರ್ಕಾರದ ವಿರುದ್ಧ ರೈತರು ನಿರಂತರವಾಗಿ ಹೋರಾಟ ನಡೆಸುತ್ತಿದ್ದರೆ, ಮತ್ತೊಂದೆಡೆ ಡಿ.ಕೆ.ಶಿವಕುಮಾರ್ ರವರು ಶೇ.70ರಷ್ಟು ರೖತರು ಸ್ವಾಧೀನ ಪರವಾಗಿದ್ದಾರೆ. ಭೂ ಸ್ವಾಧೀನದ ಜಾಗ ಬರಡು ಭೂಮಿ, ಪ್ರಧಾನಿ ಮೋದಿರವರು ಒಪ್ಪಿಗೆ ನೀಡಿದ್ದಾರೆಂದು ಸುಳ್ಳು ಹೇಳುತ್ತಿದ್ದಾರೆ.
ಆಡಳಿತ ಪಕ್ಷದಷ್ಟೇ ಜವಾಬ್ದಾರಿ ವಿರೋಧ ಪಕ್ಷಕ್ಕೂ ಇದೆ. ಹಾಗಾಗಿ ಈ ರಾಜ್ಯಸರ್ಕಾರಕ್ಕೆ ವಾಸ್ತವವನ್ನು ತಿಳಿಸುವ ಕೆಲಸ ಮಾಡಬೇಕೆಂದು ನಿರ್ಧರಿಸಿ ಬಿಡದಿ ಭಾಗದ ಹೊಲಗಳಿಗೆ ಭೇಟಿ ನೀಡಿ ರೖತರಿಂದ ಅಹವಾಲು ಆಲಿಸಿದ್ದೇವೆ. ಬಿಜೆಪಿ ರೖತರ ವಿಚಾರದಲ್ಲಿ ಹುಡುಗಾಟಿಕೆ, ರಾಜಕೀಯ ಮಾಡಲು ಹಾಗೂ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಬಂದಿಲ್ಲ. ಆದರೆ, ಬಿಡದಿ, ರಾಯಚೂರು, ಬೆಳಗಾವಿ ಮಾತ್ರವಲ್ಲ ನಾಡಿನಲ್ಲಿ ಎಲ್ಲೇ ರೈತರು ಸಂಕಷ್ಟದಲ್ಲಿದ್ದರೆ ಬಿಜೆಪಿ ಅವರ ಪರವಾಗಿ ನಿಲ್ಲಲಿದೆ ಎಂದು ಹೇಳಿದರು.
ಈ ಭಾಗದಲ್ಲಿ ಗೂಂಡಗಳನ್ನು ಬಿಟ್ಟು ರೈತರೇ ಜಮೀನು ಬಿಟ್ಟು ಕೊಡುವಂತಹ ವಾತಾವರಣ ಸೃಷ್ಟಿ ಮಾಡುತ್ತಿದ್ದಾರೆ. ರಾತ್ರಿ ವೇಳೆ ಮನೆಗಳಿಗೆ ಬರುವ ಗೂಂಡಗಳು ಜೀವ ಬೆದರಿಕೆ ಹಾಕುವ ಘಟನೆಗಳು ನಡೆಯುತ್ತಿವೆ ಎಂದು ರೈತರು ಹೇಳಿಕೊಂಡಿದ್ದಾರೆ. ಹೀಗಿದ್ದರೂ ಇಲ್ಲಿನ ರೖೆತರು ಪ್ರಾಣ ಬೇಕಾದರು ಕೊಡುತ್ತೇವೆ. ಭೂಮಿ ಮಾತ್ರ ಕೊಡಲ್ಲ ಅಂದಿದ್ದಾರೆ. ಆ ರೈತರ ಫಲವತ್ತಾದ ಕೃಷಿ ಭೂಮಿ ಕಸಿದುಕೊಳ್ಳಲು ನಾವು ಅವಕಾಶ ನೀಡುವುದಿಲ್ಲ ಎಂದು ತಿಳಿಸಿದರು.
ಕರ್ನಾಟಕದಲ್ಲಿರುವ ನಿಮ್ಮದೇ ಸರ್ಕಾರಕ್ಕೆ ರೖೆತರನ್ನು ಒಕ್ಕಲೆಬ್ಬಿಸಲು ಅವಕಾಶ ನೀಡಬೇಡಿ ಎಂದು ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಅವರಿಗೆ ನಾನೇ ಪತ್ರ ಬರೆದಿದ್ದೇನೆ. ರಾಹುಲ್ ಗಾಂಧಿ ಒಂದು ಮಾತು ಹೇಳಿದರೆ ಸಾಕು ಡಿಕೆಶಿ, ಕುರ್ಚಿ ಉಳಿಸಿಕೊಳ್ಳಲಾದರು ರೖೆತರ ಪರವಾಗಿ ನಿಲ್ಲುತ್ತಾರೆ ಎಂದು ವಿಜಯೇಂದ್ರ ಹೇಳಿದರು.
17ಕೆಆರ್ ಎಂಎನ್ 1.ಜೆಪಿಜಿ