ಹೊಸಪೇಟೆ: ವಿಜಯನಗರ ಜಿಲ್ಲೆಗೆ ಖನಿಜ ನಿಧಿ ಅನುದಾನ ನೀಡಿಕೆ ಬಗ್ಗೆ ಸಂಡೂರಿನ ಶಾಸಕರಾಗಿದ್ದ ಈ.ತುಕಾರಾಂ ಸರ್ಕಾರಕ್ಕೆ ಪತ್ರ ಬರೆದಿರುವ ಕುರಿತು ಕೆಡಿಪಿ ಸಭೆಯಲ್ಲಿ ಶಾಸಕರಾದ ಕೆ. ನೇಮರಾಜ್ ನಾಯ್ಕ, ಡಾ.ಎನ್.ಟಿ. ಶ್ರೀನಿವಾಸ್ ಪ್ರಶ್ನಿಸಿದರು.
ಇದಕ್ಕೆ ಧ್ವನಿಗೂಡಿಸಿದ ಶಾಸಕರಾದ ಡಾ.ಎನ್.ಟಿ. ಶ್ರೀನಿವಾಸ್, ಕೃಷ್ಣ ನಾಯ್ಕ ಕೂಡಲೇ ಈ ಬಗ್ಗೆ ಕ್ರಮ ವಹಿಸಬೇಕು. ನ್ಯಾಯಯುತವಾಗಿ ಜಿಲ್ಲೆಗೆ ಡಿಎಂಎಫ್ ಅನುದಾನ ದೊರೆಯಬೇಕು. ಕೂಡಲೇ ಮುಖ್ಯಮಂತ್ರಿ ಕ್ರಮ ವಹಿಸಬೇಕು ಎಂದು ಒತ್ತಾಯಿಸಿದರು.
ಈ ವೇಳೆ ಸಂಸದ ತುಕಾರಾಂ ಜೊತೆಗೆ ನಾನೇ ಚರ್ಚಿಸುವೆ. ಡಿಎಂಎಫ್ ಅನುದಾನ ದೊರೆಯಲು ಕ್ರಮ ವಹಿಸುವೆ ಎಂದು ಸಭೆಯಲ್ಲೇ ಖನಿಜ ಇಲಾಖೆಯ ಕಾರ್ಯದರ್ಶಿಗೆ ಫೋನಾಯಿಸಿ, ಕೂಡಲೇ ಬಾಕಿ ಇರುವ ₹218 ಕೋಟಿ ಡಿಎಂಎಫ್ ಅನುದಾನ ಬಿಡುಗಡೆ ಮಾಡಬೇಕು. ಪ್ರತಿ ವರ್ಷ ಈ ಅನುದಾನ ಹಂಚಿಕೆಯಾಗಬೇಕು. ವಿಜಯನಗರಕ್ಕೆ ಶೇ.28 ಡಿಎಂಎಫ್ ಪಾಲಿದೆ. ಶೇ.72 ಬಳ್ಳಾರಿಗೆ ಪಾಲಿದೆ. ಈ ಅನುದಾನದಲ್ಲಿ ಯಾವುದೇ ಕೊರತೆ ಉಂಟಾಗದಂತೆ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು.ಸಭೆಯಲ್ಲಿ ಕೆರೆ ತುಂಬಿಸುವ ಯೋಜನೆ, ಎಸ್ಸೆಸ್ಸೆಲ್ಸಿ ಫಲಿತಾಂಶ ಕುಂಠಿತ, ಹಾಸ್ಟೆಲ್‌ಗಳ ಸಮಸ್ಯೆ ಕುರಿತು ಕನ್ನಡಪ್ರಭದಲ್ಲಿ ಪ್ರಕಟವಾದ ವರದಿ ಆಧಾರದ ಮೇಲೆ ಶಾಸಕರು ಅಧಿಕಾರಿಗಳನ್ನು ಪ್ರಶ್ನಿಸಿದರು.