ಮಾಗಡಿ: ರೈತರು ಸಮಗ್ರ ಬೇಸಾಯ ಮಾಡುವುದರಿಂದ ಆರ್ಥಿಕ ಸುಧಾರಣೆ ಸಾಧ್ಯ ಎಂದು ಕೃಷಿಕ ಸಮಾಜದ ಪ್ರಧಾನ ಕಾರ್ಯದರ್ಶಿ ಎಂ.ಸಿ.ಮಾರೇಗೌಡ ತಿಳಿಸಿದರು.
ಕೃಷಿಕ ಸಮಾಜದ ಅಧ್ಯಕ್ಷರು, ಪದಾಧಿಕಾರಿಗಳು ಸಹ ತಮ್ಮ ಗ್ರಾಪಂ ವ್ಯಾಪ್ತಿಯಲ್ಲಿ ರೈತರಿಗೆ ಇಲಾಖೆಯ ಸವಲತ್ತುಗಳನ್ನು ಜನಜಾಗೃತಿಗೊಳಿಸಬೇಕಿದೆ. ನರೇಗಾ ಯೋಜನೆ ರೈತರಿಗೆ ವರದಾನವಾಗಿದೆ. ಹಸಿರು ಕ್ರಾಂತಿಯ ಜತೆಗೆ ಆಹಾರ ಕ್ರಾಂತಿಗೂ ಆದ್ಯತೆ ಕೊಡಬೇಕೆಂದು ಮನವಿ ಮಾಡಿದರು.
ಶೈಕ್ಷಣಿಕ ಪ್ರವಾಸ:ಕೃಷಿಕ ಸಮಾಜದ ಅಧ್ಯಕ್ಷರು, ಕಾರ್ಯದಶಿಗಳು ಹಾಗೂ ನಿರ್ದೇಶಕರು ಹಾಗೂ ಅಧಿಕಾರಿಗಳು ಸೇರಿ ಸಮಗ್ರ ಕೃಷಿ ಅಧ್ಯಯಾನಕ್ಕೆ 3 ದಿನಗಳ ಕಾಲ ಪ್ರವಾಸ ಕೈಗೊಳ್ಳಲು ಸಭೆಯಲ್ಲಿ ತೀರ್ಮಾನಿಸಲಾಗಿದೆ ಎಂದು ಅಧ್ಯಕ್ಷ ಸಮಾಜದ ಅಧ್ಯಕ್ಷ ಉಮೇಶ್ ತಿಳಿಸಿದರು.
ಸಹಾಯಕ ಕೃಷಿ ನಿರ್ದೇಶಕಿ ವಿಜಯ ಸವಣೂರು ಮಾತನಾಡಿ, ರೈತರಿಗೆ ಸರ್ಕಾರ ಒದಗಿಸುವ ಸಹಾಯಧನ ಸವಲತ್ತುಗಳನ್ನು ಕಾಲಕಾಲಕ್ಕೆ ತಲುಪಿಸುವ ಕೆಲಸ ಮಾಡಲಾಗುತ್ತಿದೆ. ರಾಗಿ, ಭತ್ತ, ತೊಗರಿ, ಅಲಸಂದೆ, ಅವರೆ ಬೀಜ ಪೂರೈಕೆ ಮಾಡಲಾಗುತ್ತಿದೆ. ಜತೆಗೆ ಸಹಾಯಧನದಲ್ಲಿ ಲಘು ಪೋಷಕಾಂಶ, ಯಂತ್ರೋಪಕರಣಗಳನ್ನು ಒದಗಿಸಿ ತಾಂತ್ರಿಕ ಸಮಗ್ರ ಕೃಷಿ ಬೇಸಾಯದ ಕ್ರಮವನ್ನು ಅಳವಡಿಸಿಕೊಂಡು ಅಧಿಕ ಇಳುವರಿ ಪಡೆದು ಆಹಾರ ಉತ್ಪಾದನೆ ಮಾಡಬೇಕೆಂದು ಜಾಗೃತಿ ಮೂಡಿಸಲಾಗುತ್ತಿದೆ ಎಂದು ತಿಳಿಸಿದರು.
ಕೆವಿಕೆ ಮುಖ್ಯಸ್ಥೆ ಲತಾ ಕುಲಕರ್ಣಿ, ತೋಟಗಾರಿಕೆ ಅಧಿಕಾರಿ ಪ್ರಕಾಶ್, ರೇಷ್ಮೆ, ಪಶುಸಂಗೋಪನೆ ಇಲಾಖೆ ಅಧಿಕಾರಿ ಚಿಕ್ಕಹನುಮಯ್ಯ ಮಾತನಾಡಿದರು. ಕೃಷಿ ತಾಂತ್ರಿಕ ಅಧಿಕಾರಿ ಎಂ.ಮಹೇಶ್, ಕೃಷಿಕ ಸಮಾಜದ ನಿರ್ದೇಶಕರಾದ ಗೋವಿಂದರಾಜು, ರಂಗಸ್ವಾಮಯ್ಯ, ಬಸವನಪಾಳ್ಯದ ಲೋಕೇಶ್, ದೇವರಾಜು, ಅರುಣ್, ಅಜಯ್, ರವಿ, ಟಿ.ಎಂ.ಶ್ರೀನಿವಾಸ್ ಭಾಗವಹಿಸಿದ್ದರು.(ಫೋಟೋ ಕ್ಯಾಫ್ಷನ್)
ಮಾಗಡಿಯ ಸಹಾಯಕ ಕೃಷಿ ನಿರ್ದೇಶಕರ ಕಚೇರಿ ಸಭಾಂಗಣದಲ್ಲಿ ಕೃಷಿಕ ಸಮಾಜದ ಸಾಮಾನ್ಯ ಸಭೆಯಲ್ಲಿ ಸಮಾಜದ ಪ್ರಧಾನ ಕಾರ್ಯದರ್ಶಿ ಎಂ.ಸಿ.ಮಾರೇಗೌಡ ಮಾತನಾಡಿದರು.