- ಉಪ ನೋಂದಣಾಧಿಕಾರಿಗೆ ತಾಲೂಕು ದಸ್ತಾವೇಜು ಪತ್ರ ಬರಹಗಾರರ ಸಂಘ ಮನವಿ
ಕನ್ನಡಪ್ರಭ ವಾರ್ತೆ ಚನ್ನಗಿರಿ
ಕರ್ನಾಟಕ ನೋಂದಣಿ ನಿಯಮ ಅನ್ವಯ ಅಧಿಕೃತ ಪರವಾನಗಿ ಇಲ್ಲದೇ, ಅನಧಿಕೃತವಾಗಿ ಪತ್ರಗಳ ನೋಂದಣಿಗೆ ಸಂಬಂಧಿಸಿದ ಪತ್ರಗಳನ್ನು ತಯಾರಿಸಿ, ನೋಂದಣಿ ಕಚೇರಿಯಲ್ಲಿ ಖುದ್ದು ಹಾಜರಾಗಿ ನೋಂದಾಯಿಸುತ್ತಿರುವ ಏಜೆಂಟರನ್ನು ನಿರ್ಬಂಧಿಸಲು ಆಗ್ರಹಿಸಿ ಪಟ್ಟಣದ ಉಪ ನೋಂದಣಾಧಿಕಾರಿಗೆ ತಾಲೂಕು ದಸ್ತಾವೇಜು ಪತ್ರ ಬರಹಗಾರರ ಸಂಘ ಸದಸ್ಯರು ಮನವಿ ಸಲ್ಲಿಸಿದರು.ಸಂಘದ ಅಧ್ಯಕ್ಷ ಯು.ಬಸವರಾಜ್ ಮಾತನಾಡಿ, ನಾವು ಸರ್ಕಾರದಿಂದ ಮಾನ್ಯತೆ ಪಡೆದ ದಾವಣಗೆರೆ ಜಿಲ್ಲೆ ಅಧಿಕೃತ ಪರವಾನಗಿ ಹೊಂದಿದ ಪತ್ರ ಬರಹಗಾರರಾಗಿದ್ದೇವೆ. ಜಿಲ್ಲೆಯ ವಿವಿಧ ತಾಲೂಕುಗಳ ಉಪ ನೋಂದಣಿ ಕಚೇರಿಗಳಲ್ಲಿ ಪತ್ರ ಬರಹಗಾರರಾಗಿ ಕೆಲಸ ನಿರ್ವಹಿಸುತ್ತಿದ್ದೇವೆ. ಆದರೆ, ಚನ್ನಗಿರಿ ಉಪ ನೋಂದಣಾಧಿಕಾರಿ ಕಚೇರಿಯಲ್ಲಿ ಅನಧಿಕೃತ ಪತ್ರ ಬರಹಗಾರರ ಹಾವಳಿಯಿಂದ ಪರವಾನಗಿ ಹೊಂದಿದ ಪತ್ರ ಬರಹಗಾರರಿಗೆ ಅನ್ಯಾಯವಾಗುತ್ತಿದೆ ಎಂದರು.
ಮನವಿ ಸಲ್ಲಿಸುವ ಸಂದರ್ಭ ಕೆ.ಆರ್.ಮಂಜುನಾಥ್, ಪಿ.ಆರ್.ಮಲ್ಲಿಕಾರ್ಜುನ್, ನೀತಿಗೆರೆ ಜಯಪ್ಪ, ಶ್ರೀಕಾಂತ್, ಎಚ್.ಶಿವಕುಮಾರ್, ಸಿ.ಎಸ್.ಸ್ವಾಮಿ, ರಾಮಪ್ಪ, ನಾಗರಾಜ್, ಎನ್.ಶಿವಮೂರ್ತಿ, ಎನ್.ಬಿ.ಬಾಲಣ್ಣ ಹಾಜರಿದ್ದರು.
- - --19ಕೆಸಿಎನ್‌ಜಿ1.ಜೆಪಿಜಿ:
ಚನ್ನಗಿರಿ ಪಟ್ಟಣದ ಉಪ ನೋಂದಣಾಧಿಕಾರಿ ಕಚೇರಿಯಲ್ಲಿ ಅನಧಿಕೃತ ಪತ್ರ ಬರಹಗಾರರನ್ನು ನಿರ್ಬಂಧಿಸಬೇಕು ಎಂದು ಒತ್ತಾಯಿಸಿ ಉಪ ನೋಂದಣಾಧಿಕಾರಿ ಹರೀಶ್ ಅವರಿಗೆ ಮನವಿ ಸಲ್ಲಿಸಲಾಯಿತು.