ಮಾದಕ ವಸ್ತುಗಳಿಗೆ ದಾಸರಾಗದಿರಿ: ಬಸವಲಿಂಗ ಅವಧೂತರು ಸಲಹೆ

KannadaprabhaNewsNetwork |  
Published : Jan 29, 2024, 01:31 AM IST
ಚಿತ್ರ 28ಬಿಡಿಆರ್50 | Kannada Prabha

ಸಾರಾಂಶ

ಕಲವಾಡಿ ಗ್ರಾಮದಲ್ಲಿ ಲಕ್ಷ್ಮಿ ದೇವಿಯ 14ನೇ ಜಾತ್ರಾ ಮಹೋತ್ಸವ ನಿಮಿತ್ತ ನಡೆದ ಪ್ರವಚನ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ದೇಗಲಮಡಿ ಆಶ್ರಮದ ಪೀಠಾಧಿಪತಿ ಮಾತನಾಡಿದರು.

ಕನ್ನಡಪ್ರಭ ವಾರ್ತೆ ಬೀದರ್‌

ಯುವ ಜನಾಂಗ ಮಾದಕ ವಸ್ತುಗಳ ಚಟಕ್ಕೆ ಬಿದ್ದು ಜೀವನ ವ್ಯರ್ಥ ಮಾಡಿಕೊಳ್ಳುತ್ತಿದ್ದಾರೆ. ಪಾಲಕರು ಮಕ್ಕಳನ್ನೂ ಪೋಷಿಸಿಕೊಳ್ಳಬೇಕು ಎಂದು ಜಹೀರಾಬಾದ್ ತಾಲೂಕಿನ ಮಲ್ಲಯ್ಯಗಿರಿ ಹಾಗೂ ದೇಗಲಮಡಿ ಆಶ್ರಮದ ಪೀಠಾಧಿಪತಿ ಡಾ. ಬಸವಲಿಂಗ ಅವಧೂತರು ಸಲಹೆ ನೀಡಿದರು.

ಭಾಲ್ಕಿ ತಾಲೂಕಿನ ಕಲವಾಡಿ ಗ್ರಾಮದಲ್ಲಿ ಲಕ್ಷ್ಮಿ ದೇವಿಯ 14ನೇ ಜಾತ್ರಾ ಮಹೋತ್ಸವ ನಿಮಿತ್ತ ಆಯೋಜಿಸಿದ್ದ ಪ್ರವಚನ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ಲಕ್ಷ್ಮಿ ದೇವಿ ಹಿಂದು ಧರ್ಮದಲ್ಲಿನ ದೇವತೆಗಳಲ್ಲೊಬ್ಬರು. ಈಕೆ ಸಿರಿ ಸಂಪತ್ತುಗಳ ಅಧಿದೇವತೆಯಾಗಿದ್ದಾರೆ. ಅಲ್ಲದೇ ಮನೆಯಲ್ಲಿ ಎಲ್ಲರೂ ಶಾಂತಿ ನೆಮ್ಮದಿಯಿಂದ ಬದುಕಿದರೆ ಲಕ್ಷ್ಮಿ ದೇವಿ ತಾನಾಗಿಯೇ ನೆಲೆಸುತ್ತಾಳೆ ಎಂದರು.

ಬಸವಾದಿ ಶರಣರು ನಡೆದಾಡಿದ ಭೂಮಿ ಇದಾಗಿದೆ. ಈ ನೆಲದಲ್ಲಿ ಜನಿಸಿದ ನಾವೆಲ್ಲರೂ ಧನ್ಯರು. ನಾಮಗಳು ಬೇರೆ ಬೇರೆ ಇದ್ದರೂ, ದೇವರು ಒಬ್ಬನೆ. ದೇವರ ಕೃಪೆಗೆ ಪಾತ್ರರಾಗಲು ಪೂಜೆ, ಧ್ಯಾನ ಮಾಡಬೇಕು. ಸತ್ಕಾರ್ಯಗಳಲ್ಲಿ ತೊಡಗಿಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.

ಜನ್ಮಕೊಟ್ಟ ತಂದೆ-ತಾಯಿಯ ಸೇವೆ ಮಾಡಬೇಕು. ಮನೆಯ ಹಿರಿಯರನ್ನು ಗೌರವದಿಂದ ಕಂಡು ಅನ್ನ ಹಾಕಿ ಎಂದು ಸಲಹೆ ನೀಡಿದರು.

ಇದಕ್ಕೂ ಮೊದಲು ಗ್ರಾಮದ ಮುಖ್ಯ ರಸ್ತೆಯಿಂದ ಲಕ್ಷ್ಮಿ ದೇವಿ ದೇವಸ್ಥಾನದವರೆಗೆ ಬಸವಲಿಂಗ ಅವಧೂತರನ್ನು ಬೆಳ್ಳಿ ರಥದಲ್ಲಿ ಮೆರವಣಿಗೆ ಮಾಡಲಾಯಿತು. ಕುಂಭ ಕಳಶ ಹೊತ್ತ ಮಹಿಳೆಯರು ಮೆರವಣಿಗೆಯ ಮೆರುಗು ಹೆಚ್ಚಿಸಿದವು. ಸಾವಿರಾರು ಜನ ಭಕ್ತಿ, ಶ್ರದ್ಧೆಯಿಂದ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.

ಪ್ರಮುಖರಾದ ಪರಮೇಶ್ವರ ನೆಳಗೆ, ಗಜಾನನ ತೇಗಂಪೂರೆ, ಮಲ್ಲಪ್ಪ ವಡ್ಡೆ, ದೀಪಕ ಯರನಳ್ಳೆ, ಸಂಗಮೇಶ ತೇಗಂಪೂರೆ, ಸಚೀನ್ ತೇಗಂಪೂರೆ, ಯಲ್ಲಾಲಿಂಗ ತೇಗಂಪೂರೆ, ಸಂತೋಷ ನೇಳಗೆ. ಕೆ.ಡಿ. ಗಣೇಶ. ಶಶಿಧರ ಸೀತಾ ಸಿದ್ದೇಶ್ವರ ಮೊದಲಾದವರು ಪಾಲ್ಗೊಂಡಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ದ್ವೇಷಭಾಷಣ ಬಿಲ್‌ಗೆ ಸಹಿ ಬೇಡ : ಗೌರ್ನರ್‌ಗೆ ಬಿಜೆಪಿ
‘ಜಿ ರಾಮ್‌ ಜಿ’ ವಿರುದ್ಧ ಸಮರಕ್ಕೆ ನಾಳೆ ಕೈ ವಿಶೇಷ ಸಂಪುಟ ಸಭೆ