ಅರಣ್ಯ ಅಧಿಕಾರಿಗಳು ಜಿಪಿಎಸ್ ಆದಂತಹ ಅರಣ್ಯವಾಸಿಗಳಿಗೆ ಯಾವುದೇ ರೀತಿಯ ತೊಂದರೆ ನೀಡಬಾರದು ಎಂದು ಶಾಸಕ ಶಿವರಾಮ ಹೆಬ್ಬಾರ ಸೂಚನೆ ನೀಡಿದರು.
ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅಧಿಕಾರಿಗಳಿಗೆ ಶಿವರಾಮ ಹೆಬ್ಬಾರ ಸೂಚನೆಕನ್ನಡಪ್ರಭ ವಾರ್ತೆ ಶಿರಸಿ
ಅರಣ್ಯ ಅಧಿಕಾರಿಗಳು ಜಿಪಿಎಸ್ ಆದಂತಹ ಅರಣ್ಯವಾಸಿಗಳಿಗೆ ಯಾವುದೇ ರೀತಿಯ ತೊಂದರೆ ನೀಡಬಾರದು ಎಂದು ಶಾಸಕ ಶಿವರಾಮ ಹೆಬ್ಬಾರ ಸೂಚನೆ ನೀಡಿದರು.ನಗರದ ತಹಶೀಲ್ದಾರ ಕಛೇರಿಯ ಸಭಾಂಗಣದಲ್ಲಿ ನಡೆದ ಬನವಾಸಿ ಹೋಬಳಿ ವ್ಯಾಪ್ತಿಯ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಅರಣ್ಯ ಇಲಾಖೆಯ ಆರ್‌ಎಫ್‌ಓ ಭವ್ಯ ನಾಯ್ಕ್ ಮಾತನಾಡಿ, ಕಾಡು ಪ್ರಾಣಿಗಳಿಂದ ಆಗಿರುವ ನಷ್ಟಕ್ಕೆ ಕೆಲವು ರೈತರಿಗೆ ಪರಿಹಾರ ನೀಡಿದ್ದೇವೆ. ಇನ್ನೂ ಕೆಲ ರೈತರಿಗೆ ನೀಡುವುದು ಬಾಕಿ ಇದೆ ಎಂದು ತಿಳಿಸಿದರು.
ನಂತರ ಶಾಸಕರು ಮಾತನಾಡಿ, ಅರಣ್ಯ ಅಧಿಕಾರಿಗಳು ಜಿಪಿಎಸ್ ಮಾಡಿದಂತಹ ಅರಣ್ಯವಾಸಿಗಳಿಗೆ ಯಾವುದೇ ತೊಂದರೆ ನೀಡಬಾರದು ಎಂದು ಹೇಳಿದರು.
ತಾಲೂಕು ಆರೋಗ್ಯ ಅಧಿಕಾರಿ ಡಾ. ಮಧುಕರ್ ಪಾಟೀಲ್ ಮಾತನಾಡಿ, ಬನವಾಸಿ ಭಾಗದಲ್ಲಿ ಒಟ್ಟು4 ಆಸ್ಪತ್ರೆಗಳಿವೆ. ಆ ಎಲ್ಲಾ ಆಸ್ಪತ್ರೆಗಳಲ್ಲಿ ವೈದ್ಯರ ಕೊರತೆ ಇಲ್ಲ ಎಂದು ತಿಳಿಸಿದರು.
ಕೆಲವೊಂದು ಸಮಯದಲ್ಲಿ ವೈದ್ಯರನ್ನು ಬೇರೆ ಕಡೆ ಕರ್ತವ್ಯ ನಿರ್ವಹಿಸಲು ಕಳಿಸುತ್ತೇವೆ ಎಂದಾಗ ಶಾಸಕರು ಮದ್ಯಪ್ರವೇಶಿಸಿ ಸ್ಥಳೀಯರಿಗೆ ತೊಂದರೆಯಾಗದಂತೆ ನೋಡಿಕೊಳ್ಳಬೇಕು ಎಂದು ಸೂಚಿಸಿದರು.ಪಂಡಿತ್ ಸಾರ್ವಜನಿಕ ಆಸ್ಪತ್ರೆಯ ವೈದ್ಯಾಧಿಕಾರಿ ನೇತ್ರಾವತಿ ಸಿರ್ಸಿಕರ್ ಮಾತನಾಡಿ, ನಮಗೆ ಸುಮಾರು ವರ್ಷಗಳಿಂದ 10 ವೈದ್ಯರ ಅವಶ್ಯಕತೆ ಇದೆ. ಅದರಲ್ಲಿ ಎಂಟು ಜನ ವೈದ್ಯರಿದ್ದಾರೆ. ಇನ್ನೆರಡು ಜನ ವೈದ್ಯರ ಅವಶ್ಯಕತೆ ಇದೆ. ಮುಂಡಗೋಡ, ಬನವಾಸಿ, ಹಾನಗಲ್, ಸಿದ್ದಾಪುರ, ಅಂಕೋಲಾ ಮುಂತಾದ ಕಡೆಗಳಿಂದ ಹೆರಿಗೆಗಾಗಿ ಆಗಮಿಸುತ್ತಾರೆ. ನಮ್ಮ ಆಸ್ಪತ್ರೆಯಲ್ಲಿ ತಿಂಗಳಿಗೆ 200ರಿಂದ 250 ಹೆರಿಗೆ ಆಗುತ್ತದೆ ಎಂದರು. ಆಗ ಶಾಸಕರು ಮಧ್ಯಪ್ರವೇಶಿಸಿ, ಹೆಚ್ಚಿನ ಪ್ರಮಾಣದಲ್ಲಿ ಹೆರಿಗೆ ಮಾಡಿಸಿ ಜನರ ಸೇವೆ ಮಾಡಲು ಕೈಜೋಡಿಸಿ ಎಂದು ಹೇಳಿದರು.
ಕೃಷಿ ಇಲಾಖೆಯ ಸಹಾಯಕ ಕೃಷಿ ಅಧಿಕಾರಿ ಮಧುಕರ್ ನಾಯ್ಕ್ ಮಾತನಾಡಿ, ಬನವಾಸಿ ಭಾಗದ ರೈತರಿಗೆ ಯಾವುದೇ ರೀತಿಯ ರಸಗೊಬ್ಬರ ಕೊರತೆ ಕಂಡು ಬಂದಿಲ್ಲ. ಅಲ್ಲದೇ 835 ಟನ್ ಬತ್ತದ ಬೀಜಗಳು ಲಭ್ಯವಿದೆ ಎಂದು ಹೇಳಿದರು.
ಮಳೆ ಮಾಪನ ಪದೇ ಪದೇ ಹಾಳಾಗುತ್ತಿರುವ ದೃಷ್ಟಿಯಿಂದ ತಹಶೀಲ್ದಾರ್ ನೇತೃತ್ವದಲ್ಲಿ ಒಂದು ಸಮಿತಿ ರಚಿಸಿ ಮಳೆ ಮಾಪನ ಕುರಿತು ಕ್ರಮಕೈಗೊಳ್ಳಬೇಕು ಎಂದು ಶಾಸಕರು ತಿಳಿಸಿದರು.
ಇದೇ ರೀತಿ ಬನವಾಸಿ ವ್ಯಾಪ್ತಿಯಲ್ಲಿ ಬರುವ ಎಲ್ಲಾ ವಿಭಾಗದ ಅಧಿಕಾರಿಗಳು ಪ್ರಗತಿಯ ಕುರಿತು ಮಾಹಿತಿ ನೀಡಿದರು.
ಈ ಸಂದರ್ಭ ತಾಪಂ ಇಒ ಚನ್ನಬಸಪ್ಪ ಎಚ್., ತಹಸೀಲ್ದಾರ್ ಪಟ್ಟ ರಾಜಗೌಡ, ದ್ಯಾಮಣ್ಣ ದೊಡ್ಡಮನಿ, ಪ್ರಶಾಂತ್ ಗೌಡ್ರು, ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.