ಪಕ್ಷದ ಸಿದ್ಧಾಂತಗಳನ್ನು ತಲೆಮೇಲೆ ಹೊತ್ತು ಕೆಲಸ ಮಾಡುತ್ತಿರುವ ಬಿಜೆಪಿ ಕಾರ್ಯಕರ್ತರ ಗೌರವಕ್ಕೆ ಧಕ್ಕೆ ಬರುವಂತಹ ಕೆಲಸವನ್ನು ನಾನೆಂದೂ ಮಾಡುವುದಿಲ್ಲ. ನಾನು ಮಾಡುವ ಕೆಲಸದಿಂದ ಪಕ್ಷದ ಕಾರ್ಯಕರ್ತರ ಗೌರವ ಹೆಚ್ಚಾಗಬೇಕು. ಆ ರೀತಿ ನಡೆದುಕೊಳ್ಳುವ ಮನಸ್ಸು ನನ್ನದು ಎಂದು ಶಾಸಕ ಡಾ.ಎಂ.ಚಂದ್ರಪ್ಪ ಹೇಳಿದರು.
ಸಿರಿಗೆರೆ: ಪಕ್ಷದ ಸಿದ್ಧಾಂತಗಳನ್ನು ತಲೆಮೇಲೆ ಹೊತ್ತು ಕೆಲಸ ಮಾಡುತ್ತಿರುವ ಬಿಜೆಪಿ ಕಾರ್ಯಕರ್ತರ ಗೌರವಕ್ಕೆ ಧಕ್ಕೆ ಬರುವಂತಹ ಕೆಲಸವನ್ನು ನಾನೆಂದೂ ಮಾಡುವುದಿಲ್ಲ. ನಾನು ಮಾಡುವ ಕೆಲಸದಿಂದ ಪಕ್ಷದ ಕಾರ್ಯಕರ್ತರ ಗೌರವ ಹೆಚ್ಚಾಗಬೇಕು. ಆ ರೀತಿ ನಡೆದುಕೊಳ್ಳುವ ಮನಸ್ಸು ನನ್ನದು ಎಂದು ಶಾಸಕ ಡಾ.ಎಂ.ಚಂದ್ರಪ್ಪ ಹೇಳಿದರು.ಭರಮಸಾಗರದಲ್ಲಿ ನಡೆದ ಬಿಜೆಪಿ ಮಂಡಲದ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿ, ಮತದಾರರು ನೀಡಿರುವ ಅಧಿಕಾರ ಶಾಶ್ವತವಲ್ಲ, ಅವರು ನೀಡಿರುವ ಅಧಿಕಾರದ ಅವಧಿ ೫ ವರ್ಷಕ್ಕೆ ಸೀಮಿತ. ಈ ಅವಧಿಯಲ್ಲಿ ಅವರಿಗೆ ಸಂತೋಷವಾಗುವಂತೆ ಕೆಲಸ ಮಾಡುತ್ತೇನೆ ಎಂದರು.
೪೮೩ ಗ್ರಾಮಗಳ ವ್ಯಾಪ್ತಿಗೆ ಬರುವ ಹೊಳಲ್ಕೆರೆ ಕ್ಷೇತ್ರದಲ್ಲಿ ಶಿಕ್ಷಣ, ಆರೋಗ್ಯ, ನೀರು, ವಿದ್ಯುತ್, ಕೃಷಿ ಮುಂತಾದ ಕ್ಷೇತ್ರಗಳಲ್ಲಿ ಅಗತ್ಯವಾದ ಎಲ್ಲ ಕೆಲಸಗಳನ್ನು ಮಾಡಿರುವೆ. ವಾಣಿ ವಿಲಾಸದಿಂದ ಕುಡಿಯುವ ನೀರು ತರುವ ಯೋಜನೆಯೂ ಆಗುತ್ತಿದೆ. ಇದೆಲ್ಲವೂ ಕಾರ್ಯಕರ್ತರ ಬಲದಿಂದ ಆಗಿರುವ ಕೆಲಸ. ಇದನ್ನೆಲ್ಲಾ ಗಮನಿಸುತ್ತಿರುವ ಕ್ಷೇತ್ರದ ವಿವಿಧ ಪಕ್ಷದ ಮುಖಂಡರು ಬಿಜೆಪಿಗೆ ಬರುವ ವಿಶ್ವಾಸ ತೋರಿದ್ದಾರೆ ಎಂದು ತಿಳಿಸಿದರು.ಸಾಲುಗಟ್ಟಿ ಬರುತ್ತಿರುವ ಯಾವುದೇ ಚುನಾವಣೆಗಳನ್ನು ನಮ್ಮ ಪಕ್ಷದ ಕಾರ್ಯಕರ್ತರು ನಿರ್ಲಕ್ಷಿಸದೆ, ಎಲ್ಲಾ ಚುನಾವಣೆಗಳಲ್ಲಿಯೂ ಪಕ್ಷದ ಕಾರ್ಯಕರ್ತರೇ ಗೆಲ್ಲುವಂತೆ ಸಂಕಲ್ಪತೊಟ್ಟು ಕೆಲಸ ಮಾಡಬೇಕು. ಗ್ರಾಮ ಪಂಚಾಯ್ತಿಯಿಂದ ಜಿಲ್ಲಾ ಪಂಚಾಯ್ತಿಯವರೆಗೆ ಬಿಜೆಪಿ ಕಾರ್ಯಕರ್ತರೆ ಆಯ್ಕೆಯಾಗುವಂತೆ ನೋಡಿಕೊಳ್ಳಬೇಕು ಎಂದು ಕರೆ ನೀಡಿದರು.ವಿಧಾನ ಪರಿಷತ್ ಸದಸ್ಯ ಕೆ.ಎಸ್.ನವೀನ್ ಮಾತನಾಡಿ, ರಾಜ್ಯದಲ್ಲಿ ಕಾನೂನು ಪರಿಸ್ಥಿತಿ ದುಸ್ಥಿತಿಯಲ್ಲಿದೆ. ಹಲವು ಇಲಾಖೆಗಳ ನೌಕರರಿಗೆ ನಿಯಮಿತವಾಗಿ ವೇತನ ನೀಡಲಾಗುತ್ತಿಲ್ಲ. ಸರ್ಕಾರವು ಎಲ್ಲಾ ಮೂಲಗಳಿಂದಲೂ ಹೆಚ್ಚು ಸಂಪನ್ಮೂಲ ಸಂಗ್ರಹಿಸಲು ಜನರ ಮೇಲೆ ಇನ್ನಿಲ್ಲದಂತೆ ತೆರಿಗೆಗಳನ್ನು ಹಾಕುತ್ತಿದೆ. ಇದರಿಂದ ಜನರು ರೋಸಿ ಹೋಗಿದ್ದಾರೆ. ಎಲ್ಲಿಯೂ ಕೂಡ ಕಾಂಗ್ರೆಸ್ ಆಡಳಿತದ ಬಗ್ಗೆ ಜನರು ಒಳ್ಳೆಯ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿಲ್ಲ. ಈ ಸನ್ನಿವೇಶವನ್ನು ಬಳಸಿಕೊಂಡು ಕಾರ್ಯಕರ್ತರು ಶಾಸಕ ಎಂ.ಚಂದ್ರಪ್ಪನವರ ಮಾರ್ಗದರ್ಶನದಲ್ಲಿ ಪಕ್ಷವನ್ನು ಮತ್ತಷ್ಟು ದೃಢವಾಗಿ ಕಟ್ಟಲು ಮುಂದಾಗಬೇಕು ಎಂದು ಸಲಹೆ ನೀಡಿದರು. ಜಿಲ್ಲಾ ಬಿಜೆಪಿ ಅಧ್ಯಕ್ಷ ಕೆ.ಟಿ.ಕುಮಾರಸ್ವಾಮಿ ಮಾತನಾಡಿ, ಬರುವ ತಾಲುಕು, ಜಿಲ್ಲಾ ಪಂಚಾಯಿತಿ, ಗ್ರಾಮ ಪಂಚಾಯಿತಿ ಹಾಗೂ ನಗರಸಭೆ ಚುನಾವಣೆಗಳನ್ನು ಗಮನದಲ್ಲಿಟ್ಟುಕೊಂಡು ಎಲ್ಲರೂ ಪಕ್ಷವನ್ನು ಕಟ್ಟುವ ಕೆಲಸಕ್ಕೆ ಮುಂದಾಗಬೇಕು ಎಂದು ಕರೆ ನೀಡಿದರು.ಈ ಸಂದರ್ಭದಲ್ಲಿ ಮಾಜಿ ಮಂಡಲದ ಅಧ್ಯಕ್ಷ ಶೈಲೇಶ್ ಕುಮಾರ್, ಜಿಲ್ಲಾ ರೈತ ಮೋರ್ಚಾದ ಅಧ್ಯಕ್ಷ ವೆಂಕಟೇಶ್ ಯಾದವ್, ರಾಜ್ಯ ರೈತ ಮೋರ್ಚಾದ ಕಾರ್ಯದರ್ಶಿ ಮಲ್ಲಿಕಾರ್ಜುನ್, ತೀರ್ಥಣ್ಣ, ಡಿ.ಎಸ್.ಪ್ರವೀಣ್‌ಕುಮಾರ್, ಕೋಗುಂಡೆ ಮಂಜುನಾಥ್, ಕಲ್ಲೇಶ್, ತಿಪ್ಪಣ್ಣ, ಮೋಹನ್. ಮಲ್ಲಣ್ಣ, ನಾಗೇಂದ್ರಪ್ಪ, ಶಿವಕುಮಾರ್, ಷಣ್ಮುಖಪ್ಪ, ಸಿದ್ದಲಿಂಗಪ್ಪ, ಶರಣಪ್ಪ, ನರಸಿಂಹಮೂರ್ತಿ, ಬಸವನಗೌಡ, ರವಿ, ಸತೀಶ್, ತಿಪ್ಪೇಶ್, ಬಾಬಣ್ಣ, ಗಿರೀಶ್, ಅರುಣ್ ಕುಮಾರ್, ಶ್ರೀನಿವಾಸ್, ನವೀನ್ ಹಾಗೂ ಭರಮಸಾಗರ ಮಂಡಲದ ಎಲ್ಲಾ ಪದಾಧಿಕಾರಿಗಳು ಮತ್ತು ಕಾರ್ಯಕರ್ತರು ಇದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.