ವೃದ್ಧರು, ಅನಾಥರಿಗೆ ನೆರವಾಗುವ ಕೆಲಸ ಮಾಡಿ

KannadaprabhaNewsNetwork |  
Published : Dec 26, 2025, 02:01 AM IST
ವಿಜೆಪಿ ೨೩ವಿಜಯಪುರ ಪಟ್ಟಣದ ಸುಬ್ಬಮ್ಮ ಚನ್ನಪ್ಪ ಸಮುದಾಯ ಭವನದಲ್ಲಿ ಆಯೋಜಿಸಲಾಗಿದ್ದ, ಕಾನೂನು ಅರಿವು ಸಮಾರಂಭದಲ್ಲಿ, ವೃದ್ಧರಿಗೆ ಕಿಟ್ ಗಳು ವಿತರಣೆ ಮಾಡಿದರು. | Kannada Prabha

ಸಾರಾಂಶ

ವಿಜಯಪುರ: ಕುಟುಂಬಗಳಲ್ಲಿ ಹಿರಿಯರ ಮಾರ್ಗದರ್ಶನವಿಲ್ಲದೆ ಸಾಮರಸ್ಯ ಹದಗೆಡುತ್ತಿದೆ. ಯುವಪೀಳಿಗೆಗೆ ಬಾಂಧವ್ಯಗಳ ಬೆಲೆ ತಿಳಿಯುತ್ತಿಲ್ಲ. ವೃದ್ಧರನ್ನು ಹೊರೆಯಂತೆ ಕಾಣುತ್ತಿರುವ ಇಂದಿನ ದಿನಗಳಲ್ಲಿ ವೃದ್ಧಾಶ್ರಮಗಳ ಸಂಖ್ಯೆಯೂ ವೃದ್ಧಿಸುತ್ತಿದೆ ಎಂದು ತಾಪಂ ಇಒ ಶ್ರೀನಾಥ್‌ಗೌಡ ಹೇಳಿದರು.

ವಿಜಯಪುರ: ಕುಟುಂಬಗಳಲ್ಲಿ ಹಿರಿಯರ ಮಾರ್ಗದರ್ಶನವಿಲ್ಲದೆ ಸಾಮರಸ್ಯ ಹದಗೆಡುತ್ತಿದೆ. ಯುವಪೀಳಿಗೆಗೆ ಬಾಂಧವ್ಯಗಳ ಬೆಲೆ ತಿಳಿಯುತ್ತಿಲ್ಲ. ವೃದ್ಧರನ್ನು ಹೊರೆಯಂತೆ ಕಾಣುತ್ತಿರುವ ಇಂದಿನ ದಿನಗಳಲ್ಲಿ ವೃದ್ಧಾಶ್ರಮಗಳ ಸಂಖ್ಯೆಯೂ ವೃದ್ಧಿಸುತ್ತಿದೆ ಎಂದು ತಾಪಂ ಇಒ ಶ್ರೀನಾಥ್‌ಗೌಡ ಹೇಳಿದರು.

ಪಟ್ಟಣದ ಸುಬ್ಬಮ್ಮ ಚನ್ನಪ್ಪ ಸಮುದಾಯ ಭವನದಲ್ಲಿ ಗ್ರಾಮೀಣಾಭಿವೃದ್ಧಿ ಸಂಸ್ಥೆ ಮತ್ತು ಅಖಿಲ ಕರ್ನಾಟಕ ಎಸ್ಸಿ,ಎಸ್ಟಿ ದೌರ್ಜನ್ಯ ತಡೆ ಹೋರಾಟ ಸಮಿತಿ ಸಹಯೋಗದಲ್ಲಿ ವೃದ್ಧಾಶ್ರಮ ಮತ್ತು ಅನಾಥಾಶ್ರಮದ ನಿವಾಸಿಗಳಿಗೆ ಸಾಮಗ್ರಿಗಳ ವಿತರಣೆ ಹಾಗೂ ಕಾನೂನು ಅರಿವು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಸಂಘ ಸಂಸ್ಥೆಗಳು ವೃದ್ಧರ ಆಶ್ರಯಕ್ಕೆ ನಿಂತಿರುವುದು ಶ್ಲಾಘನೀಯ ಕೆಲಸ. ಅಂತಹ ಸಂಸ್ಥೆಗಳನ್ನು ಪ್ರೋತ್ಸಾಹಿಸಬೇಕು ಎಂದು ಹೇಳಿದರು.

ಭೀಮಾನಾಯಕ್ ಮಾತನಾಡಿ, ಸಮಾಜವನ್ನು ಕಟ್ಟುವಲ್ಲಿ ಹಿರಿಯರ ಪಾತ್ರ ಮಹತ್ತರ, ಅಂತಹ ಹಿರಿಯ ನಾಗರಿಕರನ್ನು ವೃದ್ಧಾಶ್ರಮಗಳಿಗೆ ದೂಡುತ್ತಿರುವುದು ನಾಗರಿಕ ಸಮಾಜ ತಲೆ ತಗ್ಗಿಸುವಂತಹ ಕೆಲಸ. ಹಿರಿಯರನ್ನು ಗೌರವದಿಂದ ನೋಡದವರಿಗೆ ಅವರ ಆಸ್ತಿಯ ಹಕ್ಕು ಸಿಗಬಾರದು. ಅವರು ಬದುಕಿರುವ ತನಕ ಅವರ ಹೆಸರಿನಲ್ಲಿರುವ ಆಸ್ತಿ ಪರಭಾರೆ ಮಾಡದಂತೆ ಕಾನೂನು ರೂಪುಗೊಳ್ಳಬೇಕು ಎಂದರು.

ಗ್ರಾಮೀಣಾಭಿವೃದ್ಧಿ ಸಂಸ್ಥೆ ಅಧ್ಯಕ್ಷ ರಾಮು, ಕಾರ್ಯಕ್ರಮದಲ್ಲಿ ನೂರಕ್ಕೂ ಹೆಚ್ಚು ವೃದ್ಧರು, ಅನಾಥರಿಗೆ ದೈನಂದಿನ ಅಗತ್ಯ ವಸ್ತುಗಳ ಕಿಟ್ ಹಾಗೂ ಸ್ಟೇಟರ್ ವಿತರಿಸಲಾಯಿತು. ಸರ್ಕಲ್ ಇನ್ಸ್‌ ಪೆಕ್ಟರ್ ಪ್ರಶಾಂತ್ ನಾಯಕ್, ತಾಪಂ ಸಹಾಯಕ ನಿರ್ದೇಶಕ ಅಮರನಾರಾಯಣಸ್ವಾಮಿ, ದೇವನಹಳ್ಳಿ ದೇವರಾಜ್ , ವಿಜಯಪುರ ವಾಲ್ಮೀಕಿ ಸಂಘದ ಅಧ್ಯಕ್ಷ ಶ್ರೀರಾಮಣ್ಣ, ಪ್ರಧಾನ ಕಾರ್ಯದರ್ಶಿ ಸಿ.ಎಂ.ರಾಮು, ಚಂದೇನಹಳ್ಳಿ ಮುನಿಯಪ್ಪ, ಭಟ್ರೇನಹಳ್ಳಿ ನಾರಾಯಣಪ್ಪ, ಪುರಸಭೆ ಮಾಜಿ ಉಪಾಧ್ಯಕ್ಷ ಎಂ.ನಾಗರಾಜ್, ಪಾಂಡು, ಆಶಾ, ಶ್ರೀನಿವಾಸಗಾಂಧಿ ಇತರರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಭಾಷಣ ಮಾಡಿಕೊಂಡು ಹೋದವನಲ್ಲ, ಪಕ್ಷದ ಎಲ್ಲಾ ಕೆಲ್ಸ ಮಾಡಿದ್ದೇನೆ: ಡಿಕೆಶಿ
ರಾಗಾ-ವೈಷ್ಣವ್‌ ಉದ್ಯೋಗ ಸೃಷ್ಟಿ ‘ಕ್ರೆಡಿಟ್‌ ವಾರ್’