ದಳ ಸರಿಯಿಲ್ಲವೆಂದು ಡಾಕ್ಟರ್‌ ಬಿಜೆಪಿಗೆ: ಡಿ.ಕೆ.ಸುರೇಶ್‌

KannadaprabhaNewsNetwork | Updated : Mar 15 2024, 12:11 PM IST

ಸಾರಾಂಶ

ದೇವೇಗೌಡರ ಅಳಿಯ ಚುನಾವಣಾ ಕಣದಲ್ಲಿದ್ದಾರೆ. ದೇವೇಗೌಡ ಹಾಗೂ ಕುಮಾರಸ್ವಾಮಿ, ಅವರ ಜೆಡಿಎಸ್‌ ಪಕ್ಷ ಸರಿ ಇಲ್ಲ ಎಂದು ಅವರ ಅಳಿಯ ಡಾ.ಮಂಜುನಾಥ್ ನಿರ್ಧಾರ ಮಾಡಿದ್ದು, ಅದಕ್ಕೆ ಬೇರೆ ಪಕ್ಷ ಆಯ್ಕೆ ಮಾಡಿಕೊಂಡಿದ್ದಾರೆ ಎಂದು ಸಂಸದ ಡಿ.ಕೆ.ಸುರೇಶ್‌ ವ್ಯಂಗ್ಯವಾಡಿದ್ದಾರೆ.

ಕನ್ನಡಪ್ರಭ ವಾರ್ತೆ ಚನ್ನಪಟ್ಟಣ

ದೇವೇಗೌಡರ ಅಳಿಯ ಚುನಾವಣಾ ಕಣದಲ್ಲಿದ್ದಾರೆ. ದೇವೇಗೌಡ ಹಾಗೂ ಕುಮಾರಸ್ವಾಮಿ, ಅವರ ಜೆಡಿಎಸ್‌ ಪಕ್ಷ ಸರಿ ಇಲ್ಲ ಎಂದು ಅವರ ಅಳಿಯ ಡಾ.ಮಂಜುನಾಥ್ ನಿರ್ಧಾರ ಮಾಡಿದ್ದು, ಅದಕ್ಕೆ ಬೇರೆ ಪಕ್ಷ ಆಯ್ಕೆ ಮಾಡಿಕೊಂಡಿದ್ದಾರೆ. 

ದೇವೇಗೌಡರು ಕಟ್ಟಿದ ಪಕ್ಷ, ಅವರ ಜನಪ್ರಿಯತೆ ಈಗ ರಾಜ್ಯದಲ್ಲಿ ಇಲ್ಲ ಎಂದು ಅವರೇ ನಿರ್ಧರಿಸಿದ್ದಾರೆ ಎಂದು ಸಂಸದ ಡಿ.ಕೆ.ಸುರೇಶ್‌ ವ್ಯಂಗ್ಯವಾಡಿದ್ದಾರೆ.

ಗುರುವಾರ ಸುದ್ದಿಗಾರರ ಜೊತೆ ಮಾತನಾಡಿ, ದೇವೇಗೌಡರ ಕುಟುಂಬದ ವಿರುದ್ಧ ಸ್ಪರ್ಧೆ ನನಗಾಗಲಿ, ಡಿಸಿಎಂ ಡಿ.ಕೆ.ಶಿವಕುಮಾರ್ ಅವರಿಗಾಗಲಿ ಹೊಸದಲ್ಲ. ದೇವೇಗೌಡರ ಅಳಿಯ ಈಗ ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಸ್ಪರ್ಧಿಸುತ್ತಿದ್ದು, ಅದನ್ನು ಸ್ವಾಗತಿಸುತ್ತೇನೆ ಎಂದರು.

ಬಿಜೆಪಿಯಲ್ಲಿ ಪ್ರತಾಪ್ ಸಿಂಹಗೆ ಕೈಕೊಟ್ಟಿದ್ದಾರೆ. ಪಕ್ಷ ಕಟ್ಟಿದ ನಳೀನ್ ಕುಮಾರ್ ಕಟೀಲ್‌ರನ್ನು ಏನು ಮಾಡಿದ್ದಾರೋ ಗೊತ್ತಿಲ್ಲ. ನನ್ನನ್ನು ಗುಂಡಿಕ್ಕಿ ಕೊಲ್ತೀವಿ ಅಂದೋರು ಬಂಡಾಯ ಎನ್ನುತ್ತಿದ್ದಾರೆ. 

ಸಂವಿಧಾನ ಬದಲಾವಣೆ ಮಾಡಲು ಹೋದವರ ಕಥೆ ಏನಾಗುತ್ತೋ ಗೊತ್ತಿಲ್ಲ ಎಂದು ಟಿಕೆಟ್ ಸಿಗದ ಬಿಜೆಪಿ ನಾಯಕರ ಬಗ್ಗೆ ಡಿ.ಕೆ.ಸುರೇಶ್ ಲೇವಡಿ ಮಾಡಿದರು.

Share this article