ಆರೋಗ್ಯ ರಕ್ಷಣೆಗೆ ವೈದ್ಯರ ಸಲಹೆ ಅಗತ್ಯ: ಡಾ.ಮೋಹನ ಆಳ್ವ

KannadaprabhaNewsNetwork |  
Published : Sep 01, 2025, 01:04 AM IST
ಕಾರ್ಯಕ್ರಮ ಉದ್ಘಾಟಿಸುತ್ತಿರುವ ಡಾ.ಎಂ. ಮೋಹನ್ ಆಳ್ವ. | Kannada Prabha

ಸಾರಾಂಶ

ಕಿರಣ್ ಗೇಮ್ಸ್ ಟೀಮ್ ಮಾರ್ನಮಿಕಟ್ಟೆ ಇದರ 55ನೇ ವಾರ್ಷಿಕೋತ್ಸವ ಅಂಗವಾಗಿ ನಗರದ ಮಂಗಳಾದೇವಿಯ ರಾಮಕೃಷ್ಣ ಆಶ್ರಮದಲ್ಲಿ‌ ನಡೆದ ಉಚಿತ ವೈದ್ಯಕೀಯ ತಪಾಸಣಾ ಶಿಬಿರ ಮತ್ತು ರಕ್ತದಾನ ಶಿಬಿರವನ್ನು‌ ಆಳ್ವಾಸ್ ಎಜುಕೇಶನ್ ಟ್ರಸ್ಟ್ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ ಉದ್ಘಾಟಿಸಿದರು.

ಕನ್ನಡಪ್ರಭ ವಾರ್ತೆ ಮಂಗಳೂರು

ಕಿರಣ್ ಗೇಮ್ಸ್ ಟೀಮ್ ಮಾರ್ನಮಿಕಟ್ಟೆ ಇದರ 55ನೇ ವಾರ್ಷಿಕೋತ್ಸವ ಅಂಗವಾಗಿ ನಗರದ ಮಂಗಳಾದೇವಿಯ ರಾಮಕೃಷ್ಣ ಆಶ್ರಮದಲ್ಲಿ‌ ನಡೆದ ಉಚಿತ ವೈದ್ಯಕೀಯ ತಪಾಸಣಾ ಶಿಬಿರ ಮತ್ತು ರಕ್ತದಾನ ಶಿಬಿರವನ್ನು‌ ಆಳ್ವಾಸ್ ಎಜುಕೇಶನ್ ಟ್ರಸ್ಟ್ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ ಉದ್ಘಾಟಿಸಿದರು.ರಾಮಕೃಷ್ಣ ಮಿಷನ್ ಮಂಗಳೂರು, ವಿಶ್ವಕರ್ಮ ಸಹಕಾರ ಬ್ಯಾಂಕ್ ಮತ್ತು ಮಹಾರಾಣಾ ಪ್ರತಾಪ್ ಸ್ಪೋರ್ಟ್ಸ್ ಕ್ಲಬ್ ಸಹಯೋಗದಲ್ಲಿ ಕೆಎಂಸಿ ಆಸ್ಪತ್ರೆ ಮತ್ತು ಕೆಎಸ್ ಹೆಗ್ಡೆ ಆಸ್ಪತ್ರೆಗಳ ಸಹಭಾಗಿತ್ವದಲ್ಲಿ ಈ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಈ ಸಂದರ್ಭ ಮಾತನಾಡಿದ ಡಾ.ಮೋಹನ್‌ ಆಳ್ವ, ವೈದ್ಯಕೀಯ ಕ್ಷೇತ್ರದಲ್ಲಿ ಇಂದು‌ ಮಹತ್ವದ ಬದಲಾವಣೆಯಾಗಿದ್ದರೂ ಆರೋಗ್ಯದ ಕುರಿತು ನಿರ್ಲಕ್ಷ್ಯ ವಹಿಸುವುದು ಸರಿಯಲ್ಲ. ಆರೋಗ್ಯ ರಕ್ಷಣೆಗೆ ಸೂಕ್ತ ತಪಾಸಣೆ, ವೈದ್ಯರ ಸಲಹೆ ಪಡೆಯುವುದು ಅತಿ ಅಗತ್ಯ ಎಂದು ಹೇಳಿದರು.

ರಾಮಕೃಷ್ಣ ಆಶ್ರಮದ ಸ್ವಾಮಿ ಜಿತಕಾಮಾನಂದಜೀ ಆಶೀರ್ವಚನ ನೀಡಿದರು. ಕೆಎಂಸಿ ವೈದ್ಯಕೀಯ ಅಧೀಕ್ಷಕ ಡಾ.ಚಕ್ರಪಾಣಿ ಎಂ. ಅಧ್ಯಕ್ಷತೆ ವಹಿಸಿದ್ದರು.‌ ಮಾಜಿ ಮೇಯರ್ ಪ್ರೇಮಾನಂದ ಶೆಟ್ಟಿ, ಕುದ್ರೋಳಿ ಗೋಕರ್ಣನಾಥ ದೇವಸ್ಥಾನದ ಕೋಶಾಧಿಕಾರಿ ಪದ್ಮರಾಜ್ ಆರ್., ಮಂಗಳೂರು ಪ್ರೆಸ್‌ಕ್ಲಬ್ ಅಧ್ಯಕ್ಷ ಪಿ.ಬಿ. ಹರೀಶ್ ರೈ, ಕಣಚೂರು ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ.ಬಿ.ದೇವದಾಸ್ ರೈ, ಚಿತ್ರನಟ ರೂಪೇಶ್ ಶೆಟ್ಟಿ, ವಿಶ್ವಕರ್ಮ ಸಹಕಾರಿ ಬ್ಯಾಂಕ್‌ ಅಧ್ಯಕ್ಷ ಡಾ.ಎಸ್. ಆರ್. ಹರೀಶ್ ಆಚಾರ್ಯ, ವಕೀಲ ರಾಘವೇಂದ್ರ ರಾವ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.

ಕಿರಣ್ ಗೇಮ್ಸ್ ಟೀಮ್‌ನ ಅಧ್ಯಕ್ಷ ಬಿ.ಕಿಶೋರ್ ಕುಮಾರ್ ಶೆಟ್ಟಿ ಶಿಬಿರದಲ್ಲಿ ಭಾಗವಹಿಸಿದ ವೈದ್ಯರ ಪರಿಚಯ‌ ನೀಡಿದರು. ಸಂಸ್ಥೆಯ ಸ್ಥಾಪಕ ಅಧ್ಯಕ್ಷ ಚಂದ್ರಹಾಸ ಶೆಟ್ಟಿ ಅವರನ್ನು‌ ಸನ್ಮಾನಿಸಲಾಯಿತು.‌ ಗೌರವ ಸಲಹೆಗಾರ ಯತಿರಾಜ್ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಬಿ.ಗುರುಪ್ರಸಾದ್ ಶೆಟ್ಟಿ ಸ್ವಾಗತಿಸಿ, ಪ್ರಧಾನ ಕಾರ್ಯದರ್ಶಿ ಗಿರೀಶ್ ಶೆಟ್ಟಿ ವಂದಿಸಿದರು.‌ ಡಾ.ಮಂಜುಳಾ ಶೆಟ್ಟಿ ನಿರೂಪಿಸಿದರು.

ತಜ್ಞ ವೈದ್ಯರಾದ ಡಾ.ವಿಜಯೇಂದ್ರ ಶೆಣೈ, ಡಾ.ಭೂಷಣ್ ಶೆಟ್ಟಿ, ಡಾ.ದೀಪಕ್ ಹೆಗ್ಡೆ, ಡಾ.ಕೀರ್ತನ್ ರಾವ್, ಡಾ.ವೀಣಾ.ಆರ್.ಭಟ್, ಡಾ.ಪ್ರಜೀತ್ ಹೆಗ್ಡೆ ನೇತೃತ್ವದಲ್ಲಿ‌ ವೈದ್ಯಕೀಯ ತಪಾಸಣಾ ಶಿಬಿರ ನಡೆಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕರಗಕ್ಕೆ ವಿಶ್ವಪ್ರಸಿದ್ಧಿ ಪಡೆದ ಧರ್ಮರಾಯ ದೇಗುಲ ಚಿನ್ನ ಕಳವು
ಸಿ.ಟಿ.ರವಿ ‘ಪಾಕ್‌ ನಾಲಿಗೆ’ ಹೇಳಿಕೆಗೆ ಸದನವೇ ಬಲಿ