ವೈದ್ಯರಿಂದ ನಿತ್ಯ ಸಮಾಜಮುಖಿ ಕಾರ್ಯ

KannadaprabhaNewsNetwork |  
Published : Jul 03, 2025, 11:49 PM IST
ಪೊಟೋ ಪೈಲ್ ನೇಮ್ ೩ಎಸ್‌ಜಿವಿ೧ ಪಟ್ಟಣದಲ್ಲಿ ನಡೆದ ವಿಶ್ವ ವೈದ್ಯರ ದಿನ ಅಂಗವಾಗಿ ಡಾ.ಅವಿನಾಶ ರಾಜಮಾನೆ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.  | Kannada Prabha

ಸಾರಾಂಶ

ಕಾಯಕದ ಮೇಲೆ ನಂಬಿಕೆ, ವಿಶ್ವಾಸವಿಟ್ಟು ಕಾರ್ಯ ನಿರ್ವಹಿಸಿದಾಗ ಯಶಸ್ವಿ ಬೆನ್ನಟ್ಟಿ ಬರಲು ಸಾಧ್ಯವಿದೆ

ಶಿಗ್ಗಾಂವಿ:ವೈದ್ಯರು ನಿತ್ಯ ಜನ ಸೇವೆ ಮಾಡುವ ಮೂಲಕ ಸಮಾಜಮುಖಿ ಕಾರ್ಯ ಮಾಡುತ್ತಿದ್ದಾರೆ. ಆದರಿಂದ ಆರೋಗ್ಯಯುತ ಸಮಾಜ ನಿರ್ಮಾಣ ಸಾಧ್ಯ ಎಂದು ಮೃತ್ಯುಂಜಯ ಆಸ್ಪತ್ರೆಯ ಮುಖ್ಯ ವೈದ್ಯ ಡಾ. ಎಂ. ಎಂ. ತಿರ್ಲಾಪುರ ಹೇಳಿದರು.

ಫಿನಿಕ್ಸ್‌ ಇಂಟರ್‌ನ್ಯಾಷನಲ್‌ ಸ್ಕೂಲ್‌ ಆವರಣದಲ್ಲಿ ನಡೆದ ವಿಶ್ವ ವೈದ್ಯರ ದಿನ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಕಾಯಕದ ಮೌಲ್ಯ ಹೆಚ್ಚಳವಾಗಲು ಅದರಲ್ಲಿ ಸೇವಾ ಮನೋಭಾವನೆ ಮುಖ್ಯವಾಗಿದೆ. ಕಾಯಕದ ಮೇಲೆ ನಂಬಿಕೆ, ವಿಶ್ವಾಸವಿಟ್ಟು ಕಾರ್ಯ ನಿರ್ವಹಿಸಿದಾಗ ಯಶಸ್ವಿ ಬೆನ್ನಟ್ಟಿ ಬರಲು ಸಾಧ್ಯವಿದೆ. ಅಂತಹ ಕಾಯಕ ನಿಷ್ಠೆ ನಮ್ಮದಾಗಬೇಕು. ಸಮಾಜಕ್ಕೆ ಉತ್ತಮ ಸಂದೇಶ ನೀಡುವುದು ಅವಶ್ಯವಾಗಿದೆ. ಅದಕ್ಕೆ ಸಮಾಜವು ಸಹ ಬೆಂಬಲವಾಗಿ ನಿಲ್ಲಬೇಕು ಎಂದರು.

ಮಕ್ಕಳ ತಜ್ಞ ಡಾ. ಅವಿನಾಶ ರಾಜಮಾನೆ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಫಿನಿಕ್ಸ್‌ ಇಂಟರ್‌ನ್ಯಾಷನಲ್‌ ಸ್ಕೂಲ್‌ ಉಪಾಧ್ಯಕ್ಷ ನರಹರಿ ಕಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಮೃತ್ಯುಂಜಯ ಆಸ್ಪತ್ರೆ ವೈದ್ಯೆ ಡಾ. ರಾಣಿ ತಿರ್ಲಾಪುರ, ಪ್ರಾಚಾರ್ಯ ಗಂಗಾಧರ, ಶಶಾಂಕ ದೇಶಪಾಂಡೆ ಸೇರಿದಂತೆ ಶಿಕ್ಷಕರು, ಸಿಬ್ಬಂದಿ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸ್ವ ನಿಯಂತ್ರಣದಿಂದ ಏಡ್ಸ್ ದೂರವಿಡಲು ಸಾಧ್ಯ: ತಾರಾ ಯು. ಆಚಾರ್ಯ
ಛಾಯಾಗ್ರಾಹಕರು ಹೊಸ ತಂತ್ರಜ್ಞಾನಕ್ಕೆ ಒಗ್ಗಿಕೊಳ್ಳಬೇಕು: ಕೇಮಾರು ಶ್ರೀ