ಮಹಿಳೆ ಹೊಟ್ಟೆಯಲ್ಲಿದ್ದ 5 ಕೆ.ಜಿ. ಗಡ್ಡೆ ಹೊರತೆಗೆದ ವೈದ್ಯರು

KannadaprabhaNewsNetwork |  
Published : Aug 04, 2025, 11:45 PM ISTUpdated : Aug 05, 2025, 11:01 AM IST
surgery

ಸಾರಾಂಶ

5 ಕೆಜಿ ತೂಕದ ಫೈಬ್ರಾಯ್ಡ್‌ ಗಡ್ಡೆಗಳನ್ನು ಹೊಂದಿದ್ದ 51 ವರ್ಷದ ಮಹಿಳೆಗೆ ಡಾ.ಶಿವಕುಮಾರ ಸ್ವಾಮೀಜಿ ಆಸ್ಪತ್ರೆಯಲ್ಲಿ ಸರ್ಜರಿ ನಡೆಸಲಾಗಿದ್ದು, ದುಬಾರಿ ದರ ತೆರಬೇಕಿದ್ದ ರೈತ ಕುಟುಂಬದ ಮಹಿಳೆಗೆ ಉಚಿತ ಶಸ್ತ್ರಚಿಕಿತ್ಸೆ ನೀಡಿರುವ ಆಸ್ಪತ್ರೆಯ ಕಾರ್ಯುಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.

 ತುಮಕೂರು :  5 ಕೆಜಿ ತೂಕದ ಫೈಬ್ರಾಯ್ಡ್‌ ಗಡ್ಡೆಗಳನ್ನು ಹೊಂದಿದ್ದ 51 ವರ್ಷದ ಮಹಿಳೆಗೆ ಡಾ.ಶಿವಕುಮಾರ ಸ್ವಾಮೀಜಿ ಆಸ್ಪತ್ರೆಯಲ್ಲಿ ಸರ್ಜರಿ ನಡೆಸಲಾಗಿದ್ದು, ದುಬಾರಿ ದರ ತೆರಬೇಕಿದ್ದ ರೈತ ಕುಟುಂಬದ ಮಹಿಳೆಗೆ ಉಚಿತ ಶಸ್ತ್ರಚಿಕಿತ್ಸೆ ನೀಡಿರುವ ಆಸ್ಪತ್ರೆಯ ಕಾರ್ಯುಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ. 

ಈ ಕುರಿತು ಪ್ರಶಂಸೆ ವ್ಯಕ್ತಪಡಿಸಿದ ಆಸ್ಪತ್ರೆ ನಿರ್ದೇಶಕ ಡಾ.ಎಸ್.ಪರಮೇಶ್‌, ನಮ್ಮ ಸಿದ್ಧಗಂಗಾ ವೈದ್ಯಕೀಯ ಕಾಲೇಜಿನ ಡಾ.ಶಿವಕುಮಾರ ಸ್ವಾಮೀಜಿ ಆಸ್ಪತ್ರೆಯ ಪ್ರಸೂತಿ ಮತ್ತು ಸ್ತ್ರೀರೋಗ ವಿಭಾಗದ ಡಾ.ಹೇಮಾ ನೇತೃತ್ವದ ತಂಡ ಈ ಸರ್ಜರಿ ನಡೆಸಿದ್ದು ಗಂಭೀರ ಆರೋಗ್ಯ ಸಮಸ್ಯೆಯಿಂದ ಮಹಿಳೆ ಪಾರಾದಂತಾಗಿದೆ ಎಂದರು.  

ಕಳೆದ ವಾರ ಆಸ್ಪತ್ರೆಗೆ ಹೊಟ್ಟೆನೋವು, ಮೂತ್ರದಲ್ಲಿ ಸೋಂಕು ಸೇರಿದಂತೆ ವಿವಿಧ ಲಕ್ಷಣಗಳಿಂದ ಮಹಿಳೆ ಆಸ್ಪತ್ರೆಗೆ ಆಗಮಿಸಿದ್ದರು. ಈ ವೇಳೆ ಅಲ್ಟ್ರಾಸೌಂಡ್‌ ಸೇರಿದಂತೆ ವಿವಿಧ ಪರೀಕ್ಷೆಗಳಿಗೆ ಒಳಪಡಿಸಿದಾಗ ಒಟ್ಟು 5 ಕೆ.ಜಿ. ತೂಕದ 8 ಕ್ಕೂ ಹೆಚ್ಚು ಫೈಬ್ರಾಯ್ಡ್‌ ಗಡ್ಡೆಗಳಿರುವುದು ಕಂಡುಬಂದಿತು. 

ವೈದ್ಯರ ತಂಡ ಸತತ 3 ಗಂಟೆಗಳ ಕಾಲ ಸರ್ಜರಿ ನಡೆಸಿ ಯಶಸ್ವಿಯಾಗಿ ಹೊರತೆಗೆಯಲಾಗಿದ್ದು ಮಹಿಳೆ ಚೇತರಿಕೆ ಹೊಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ ಎಂದರು.ವೈದ್ಯಕೀಯ ಮೇಲ್ವಿಚಾರಕ ಡಾ.ನಿರಂಜನಮೂರ್ತಿ ಮಾತನಾಡಿ ಡಾ.ಶಿವಕುಮಾರ ಸ್ವಾಮೀಜಿಯವರ ಜನ್ಮದಿನದಿಂದ ಆರಂಭವಾಗಿರುವ ಉಚಿತ ಸರ್ಜರಿ ಶಿಬಿರದ ಅಡಿಯಲ್ಲಿ ಮಹಿಳೆಗೆ ಸರ್ಜರಿ ನಡೆಸಿದ್ದು ಇಂದಿಗೂ ಕೂಡ ಉಚಿತ ಸರ್ಜರಿ ಮುಂದುವರೆದಿದೆ. 

ಶಸ್ತ್ರಚಿಕಿತ್ಸೆ ನಡೆಸಿದ ತಂಡದಲ್ಲಿ ಡಾ.ಪವನ್, ಡಾ.ಪ್ರದೀಪ್ ಡಾ.ಸೌಮ್ಯ, ಡಾ.ಸಮುದ್ಯತ, ಡಾ.ಅನುಷಾ, ಡಾ.ಸಾಕೇತ್ ಅರಳವಳಿಕೆ ತಜ್ಞರಾದ ಡಾ.ಸ್ವಾಮಿ,ಡಾ.ಶಶಿಕಿರಣ್‌,ಡಾ. ಮಹಮದ್ ಶಬ್ಬಾಜ್ ಸೇರಿದಂತೆ ಯೂರಾಲಜಿಸ್ಟ್‌ ಡಾ.ನರಸಿಂಹಮೂರ್ತಿರ ಕಾರ್ಯ ಪ್ರಶಂಸನೀಯವಾಗಿದ್ದು, ಈ ಸೇವೆಗಳು ನಿರಂತರವಾಗಿ ಮುಂದುವರೆಯಲಿದೆ ಎಂದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.
Read more Articles on

Recommended Stories

ತರೀಕೆರೆಯಲ್ಲಿಂದು ಶ್ರೀ ಗುರು ರೇವಣಸಿದ್ದೇಶ್ವರ ಸ್ವಾಮಿ ನೂತನ ರಥೋತ್ಸವ
ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಬಸ್‌ ಸಂಚಾರ