ವೈದ್ಯೆ ಮೇಲಿನ ಅತ್ಯಾಚಾರ ಖಂಡಿಸಿ ವೈದ್ಯರ ಮುಷ್ಕರ: ಭಾರಿ ಬೆಂಬಲ

KannadaprabhaNewsNetwork | Published : Aug 19, 2024 12:49 AM

ಸಾರಾಂಶ

ವೈದ್ಯೆ ಮೇಲೆ ಅತ್ಯಾಚಾರ ಮತ್ತು ಕೊಲೆ ಖಂಡಿಸಿ ದೇಶಾದ್ಯಂತ ನಡೆಯುತ್ತಿರುವ ವೈದ್ಯರ ಮುಷ್ಕರಕ್ಕೆ ಪಟ್ಟಣದಲ್ಲಿ ಉತ್ತಮ ಬೆಂಬಲ ವ್ಯಕ್ತವಾಗಿದೆ. ಸಮುದಾಯ ಆರೋಗ್ಯ ಕೇಂದ್ರ ಸೇರಿದಂತೆ ಖಾಸಗಿ ಕ್ಲಿನಿಕ್‌ಗಳು ಬಂದು ಮಾಡಿ ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸುವಂತೆ ಆಕ್ರೋಶ ಹೊರಹಾಕಿದರು.

ಕನ್ನಡಪ್ರಭ ವಾರ್ತೆ ನಾಲತವಾಡ

ವೈದ್ಯೆ ಮೇಲೆ ಅತ್ಯಾಚಾರ ಮತ್ತು ಕೊಲೆ ಖಂಡಿಸಿ ದೇಶಾದ್ಯಂತ ನಡೆಯುತ್ತಿರುವ ವೈದ್ಯರ ಮುಷ್ಕರಕ್ಕೆ ಪಟ್ಟಣದಲ್ಲಿ ಉತ್ತಮ ಬೆಂಬಲ ವ್ಯಕ್ತವಾಗಿದೆ. ಸಮುದಾಯ ಆರೋಗ್ಯ ಕೇಂದ್ರ ಸೇರಿದಂತೆ ಖಾಸಗಿ ಕ್ಲಿನಿಕ್‌ಗಳು ಬಂದು ಮಾಡಿ ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸುವಂತೆ ಆಕ್ರೋಶ ಹೊರಹಾಕಿದರು.

ವೈದ್ಯರಿಗೆ ರಕ್ಷಣೆ ಸಿಗುತ್ತಿಲ್ಲ, ಕನಿಷ್ಠ ಗೌರವ ಸಿಗುತ್ತಿಲ್ಲ, ಅತ್ಯಾಚಾರ ಪ್ರಕರಣದಲ್ಲಿ ಪುರಾವೆಗಳನ್ನು ನಾಶ ಪಡಿಸಲಾಗಿದೆ. ಜೀವವನ್ನು ಉಳಿಸುವ ಕೆಲಸ ಮಾಡುವ ವೈದ್ಯರಿಗೆ ಜೀವ, ಮಾನವನ್ನೇ ಕಳೆಯುವ ಕೆಲಸ ಮಾಡಲಾಗುತ್ತಿದ್ದೆ, ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸುವ ತನಕ ನಮ್ಮ ಹೋರಾಟ ನಿಲ್ಲಲ್ಲ, ನ್ಯಾಯ ಸಿಗುವ ತನಕ ನಮ್ಮ ಹೋರಾಟ ಮುಂದುವರೆಯುತ್ತದೆ ಎಂದು ವೈದ್ಯರು ಎಚ್ಚರಿಕೆ ನೀಡಿದರು.ಹೊರರೋಗಿಗಳ ಪರದಾಟ:

ನಾಲತವಾಡ ಪಟ್ಟಣಕ್ಕೆ ದಿನಕ್ಕೆ ನೂರಾರು ರೋಗಿಗಳು ಹಳ್ಳಿಗಳಿಂದ ಆಗಮಿಸುತ್ತಾರೆ. ಶನಿವಾರ ಕೂಡ ಅನೇಕ ರೋಗಿಗಳು ಆರೋಗ್ಯ ತಪಾಸಣೆಗಾಗಿ ಬಂದರು ವೈದ್ಯರ ಲಭ್ಯತೆ ಇಲ್ಲದೇ ವಾಪಾಸಾದರು. ಹಲವರು ಗಂಟೆಗಟ್ಟಲೇ ಕಾದು ವೈದ್ಯರು ಇಲ್ಲದಿದ್ದಕ್ಕೆ ಮನೆಗೆ ತೆರಳಿದ ಘಟನೆ ಕೂಡ ನಡೆಯಿತು. ಇನ್ನು ಸಮುದಾಯ ಆರೋಗ್ಯ ಕೇಂದ್ರದಲ್ಲಿ ತುರ್ತು ರೋಗಿಗಳಿಗೆ ಮಾತ್ರ ಸೇವೆ ಒದಗಿಸುವುದು ಕಂಡು ಬಂತು.

ವೈದ್ಯರು ರೋಗಿಗಳ ಜೀವ ಉಳಿಸಲು ಕೆಲಸ ಮಾಡುತ್ತಾರೆ. ಆದರೆ, ಜೀವ ಉಳಿಸುವ ವೈದ್ಯರಿಗೆ ರಕ್ಷಣೆ ಇಲ್ಲದೆ ಹೋದರೆ ಹೇಗೆ?. ವೈದ್ಯರ ಮೇಲೆ ಹಲ್ಲೆಯ ಘಟನೆ ಆಗಾಗ ಕೇಳಿ ಬರುತ್ತಿತ್ತು. ಕೋಲ್ಕತ್ತಾದಲ್ಲಿ ವೈದ್ಯ ಮೇಲೆ ಅತ್ಯಾಚಾರ ಮಾಡಿ ಕೋಲೆ ಮಾಡಿದ್ದಾರೆ. ಹಗಲಿರುಳು ಎನ್ನದೆ ಸೇವೆ ನೀಡುವ ವೈದ್ಯರಿಗೆ ರಕ್ಷಣೆ ಇಲ್ಲದಂತಾಗಿದೆ. ಈ ಅಮಾನುಷ್ಯ ಕೃತ್ಯ ಎಸಗಿದ ಆರೋಪಿಗಳಿಗೆ ಜೀವಾವಧಿ ಶಿಕ್ಷೆ ನೀಡಬೇಕು.

ಡಾ.ಶರಣಬಸಪ್ಪ ಗಂಗನಗೌಡರ, ಖಾಸಗಿ ಆಸ್ಪತ್ರೆಯ ವೈದ್ಯರು.

Share this article