ಕಾರವಾರದ ಹಳದಿಪುರ ಅವರ ನಿವಾಸದಲ್ಲಿ 1934ರ ಫೆ. 27ರಂದು ಗಾಂಧೀಜಿ ತಂಗಿದ್ದರು.
ಕಾರವಾರ: ಮಹಾತ್ಮ ಗಾಂಧೀಜಿಯವರು 1933- 34ರಲ್ಲಿ ಹರಿಜನ ಯಾತ್ರೆ ಕೈಗೊಂಡ ಸಂದರ್ಭದಲ್ಲಿ ಕಾರವಾರಕ್ಕೆ ಆಗಮಿಸಿ ವಾಸ್ತವ್ಯ ಮಾಡಿದ್ದ ಹಳದೀಪುರ ಅವರ ನಿವಾಸದ ಡಾಕ್ಯುಮೆಂಟರಿಯನ್ನು ಜಿಲ್ಲಾಡಳಿತದಿಂದ ಮಾಡಲು ನಿರ್ಧರಿಸಲಾಗಿದೆ ಎಂದು ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯಾ ತಿಳಿಸಿದರು.
ಬುಧವಾರ ಗಾಂಧೀ ಜಯಂತಿ ಕಾರ್ಯಕ್ರಮದ ನಂತರ ಹಳದಿಪುರ ಅವರ ಮನೆಗೆ ಭೇಟಿ ನೀಡಿ ಮಾತನಾಡಿದರು.ಕಾರವಾರದ ಹಳದಿಪುರ ಅವರ ನಿವಾಸದಲ್ಲಿ 1934ರ ಫೆ. 27ರಂದು ಗಾಂಧೀಜಿ ತಂಗಿದ್ದರು. ಗಾಂಧೀಜಿಯವರು ಭೇಟಿ ನೀಡಿದ ದಿನದಂದು ಬಳಕೆ ಮಾಡಿದ ವಸ್ತುಗಳನ್ನು ಹಾಗೂ ಆ ಕಾಲದ ಛಾಯಾಚಿತ್ರಗಳು ಸೇರಿದಂತೆ ಅನೇಕ ವಸ್ತುಗಳನ್ನು ಹಳದಿಪುರ ಅವರ ಕುಟುಂಬದವರು ತುಂಬಾ ಜೋಪಾನವಾಗಿ ಇರಿಸಿದ್ದಾರೆ. ಈ ಕುರಿತಂತೆ ಜಿಲ್ಲಾಡಳಿದ ಮೂಲಕ ಡಾಕ್ಯುಮೆಂಟರಿ ಮಾಡಲು ನಿರ್ಧರಿಸಲಾಗಿದೆ ಎಂದರು.ಮನೆಯಲ್ಲಿದ್ದ ಆಗಿನ ಕಾಲದ ಹಳೆಯ ಗ್ರಾಮಫೋನ್ ಸೇರಿದಂತೆ ಇತರೆ ಎಲೆಕ್ಟ್ರಾನಿಕ್ಸ್ ವಸ್ತುಗಳು ಹಾಳಾಗಿದ್ದು, ಅವುಗಳನ್ನು ಪರಿಶೀಲಿಸಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ. ನಾರಾಯಣ, ಈ ವಸ್ತುಗಳನ್ನು ತಾನೇ ದುರಸ್ತಿ ಮಾಡಿಸಿಕೊಡುವುದಾಗಿ ಮನೆಯವರಿಗೆ ಭರವಸೆ ನೀಡಿದರು.ವಿಧಾನಪರಿಷತ್ ಸದಸ್ಯ ಗಣಪತಿ ಉಳ್ವೇಕರ್, ನಗರಸಭೆ ಅಧ್ಯಕ್ಷ ರವಿರಾಜ್ ಅಂಕೋಲೆಕರ್, ಅಪರ ಜಿಲ್ಲಾಧಿಕಾರಿ ಪ್ರಕಾಶ್ ರಜಪೂತ್, ಜಿಲ್ಲಾ ನಗರಾಭಿವೃದ್ದಿ ಕೋಶದ ಯೋಜನಾ ನಿರ್ದೇಶಕಿ ಸ್ಟೆಲ್ಲಾ ವರ್ಗಿಸ್, ಪೌರಾಯುಕ್ತ ಜಗದೀಶ್ ಹುಲಗೆಜ್ಜಿ, ಹಳದಿಪುರ ಕುಟುಂಬದ ಸದಸ್ಯರು ಇದ್ದರು.
ರುದ್ರಭೂಮಿ ಸ್ವಚ್ಛತಾ ಅಭಿಯಾನ ಸಮಾರೋಪ
ಯಲ್ಲಾಪುರ: ವಿಶ್ವ ಹಿಂದೂ ಪರಿಷತ್ ಹಾಗೂ ವಿವಿಧ ಹಿಂದೂ ಸಂಘಟನೆಗಳ ವತಿಯಿಂದ ಸೆ. ೧೮ರಿಂದ ಆರಂಭಗೊಂಡಿದ್ದ ಪಟ್ಟಣದ ಹಿಂದೂ ರುದ್ರಭೂಮಿಯನ್ನು ಸ್ವಚ್ಛಗೊಳಿಸುವ ಅಭಿಯಾನದ ಸಮಾರೋಪ ಸಮಾರಂಭ ಅ. 2ರಂದು ನಡೆಯಿತು.ಶಾಸಕ ಶಿವರಾಮ ಹೆಬ್ಬಾರ ಮಾತನಾಡಿದರು. ವಿಧಾನ ಪರಿಷತ್ ಸದಸ್ಯ ಶಾಂತಾರಾಮ ಸಿದ್ಧಿ, ವಿಹಿಂಪ ತಾಲೂಕಾಧ್ಯಕ್ಷ ಗಜಾನನ ನಾಯ್ಕ, ಪಪಂ ಉಪಾಧ್ಯಕ್ಷ ಅಮಿತ ಅಂಗಡಿ, ಹಿರಿಯರಾದ ಎಸ್.ಎಂ. ಭಟ್ಟ ಏಕಾನ್, ರಾಮು ನಾಯ್ಕ, ಪಪಂ ಸದಸ್ಯೆ ಶ್ಯಾಮಿಲಿ ಪಾಟಣಕರ್ ಸೇರಿದಂತೆ ವಿವಿಧ ಸಂಘಟನೆಗಳ ಪ್ರಮುಖರು ಉಪಸ್ಥಿತರಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.