ಕಟೀಲು ಯಕ್ಷಗಾನ ಮೇಳಗಳ ಇತಿಹಾಸ ದಾಖಲೀಕರಣ ಆರಂಭ: ವಸ್ತು, ವಿಷಯ ಸಂಗ್ರಹ ಅಭಿಯಾನ

KannadaprabhaNewsNetwork |  
Published : Sep 02, 2025, 01:01 AM IST
32 | Kannada Prabha

ಸಾರಾಂಶ

ಶ್ರೀಹರಿನಾರಾಯಣದಾಸ ಆಸ್ರಣ್ಣ ಮತ್ತು ಕಲ್ಲಾಡಿ ದೇವಿಪ್ರಸಾದ ಶೆಟ್ಟರ ನಿರ್ದೇಶನದಲ್ಲಿ ಕಟೀಲು ಮೇಳದ ಇತಿಹಾಸವನ್ನು ಆದಷ್ಟು ಮಟ್ಟಿಗೆ ದಾಖಲಿಸುವ ಮಹತ್ವದ ಕೆಲಸ ಉಪಕ್ರಮಿಸಲಾಗಿದೆ. ಈ ನಿಟ್ಟಿನಲ್ಲಿ ಮೊದಲ ಹೆಜ್ಜೆಯಾಗಿ ಕಟೀಲು ಮೇಳದ ವಸ್ತು-ವಿಷಯಗಳ ಸಂಗ್ರಹಕ್ಕೆ ತೊಡಗಿಕೊಳ್ಳಲಾಗಿದೆ.

ಮೂಲ್ಕಿ: ಕಟೀಲು ಶ್ರೀ ದುರ್ಗಾಪರಮೇಶ್ವರೀ ಕೃಪಾಪೋಷಿತ ಯಕ್ಷಗಾನ ಮಂಡಳಿ ಏಳನೆಯ ಮೇಳದೊಂದಿಗೆ ದಿಗ್ವಿಜಯಕ್ಕೆ ಸಜ್ಜಾಗಿದ್ದು ಶ್ರೀ ಕ್ಷೇತ್ರದ ಆಡಳಿತ ಮಂಡಳಿ, ಆಸ್ರಣ್ಣ ಕುಟುಂಬದವರು ಮತ್ತು ಕಲ್ಲಾಡಿ ಮನೆಯವರು ಈ ದಿಗ್ವಿಜಯ ಸಂದರ್ಭ ಅವಿಸ್ಮರಣೀಯವಾಗಿಸಬೇಕೆಂಬ ಸಂಕಲ್ಪವನ್ನು ಹೊಂದಿದ್ದಾರೆ. ಕಟೀಲು ಮೇಳಗಳ ಇತಿಹಾಸ ದಾಖಲೀಕರಣಕ್ಕೆ ಉದ್ದೇಶಿಸಲಾಗಿದೆ.

ಶ್ರೀಹರಿನಾರಾಯಣದಾಸ ಆಸ್ರಣ್ಣ ಮತ್ತು ಕಲ್ಲಾಡಿ ದೇವಿಪ್ರಸಾದ ಶೆಟ್ಟರ ನಿರ್ದೇಶನದಲ್ಲಿ ಕಟೀಲು ಮೇಳದ ಇತಿಹಾಸವನ್ನು ಆದಷ್ಟು ಮಟ್ಟಿಗೆ ದಾಖಲಿಸುವ ಮಹತ್ವದ ಕೆಲಸ ಉಪಕ್ರಮಿಸಲಾಗಿದೆ. ಈ ನಿಟ್ಟಿನಲ್ಲಿ ಮೊದಲ ಹೆಜ್ಜೆಯಾಗಿ ಕಟೀಲು ಮೇಳದ ವಸ್ತು-ವಿಷಯಗಳ ಸಂಗ್ರಹಕ್ಕೆ ತೊಡಗಿಕೊಳ್ಳಲಾಗಿದೆ. ಯಕ್ಷಗಾನ ಕಲಾ ರಸಿಕರು, ಕಟೀಲು ಕ್ಷೇತ್ರದ ಮತ್ತು ಮೇಳದ ಭಕ್ತಾಭಿಮಾನಿಗಳು ತಮ್ಮ ಸಂಗ್ರಹದಲ್ಲಿರುವ, ಕಟೀಲು ಮೇಳಕ್ಕೆ ಸಂಬಂಧಿಸಿದ ವಸ್ತು-ವಿಷಯಗಳನ್ನು ನೀಡಿ ಉಪಕರಿಸುವಂತೆ ವಿನಂತಿಸಲಾಗಿದೆ. ಯಕ್ಷಗಾನಾಭಿಮಾನಿಗಳು ತಮ್ಮಲ್ಲಿರುವ ಸಂಗ್ರಹದ ಬಗ್ಗೆ ಪತ್ರ ಬರೆದು ತಿಳಿಸಬಹುದು ಅಥವಾ ವಾಟ್ಸಪ್ ಮೂಲಕ ಸಂದೇಶ ಕಳಿಸಬಹುದು. ಸಂದೇಶ ಕಳುಹಿಸುವಾಗ ತಮ್ಮ ಹೆಸರು, ಅಂಚೆ ವಿಳಾಸ, ಮೊಬೈಲ್ ಸಂಖ್ಯೆಯನ್ನು ನಮೂದಿಸಬೇಕು. ಸಂಗ್ರಹಕ್ಕೆ ನಿರೀಕ್ಷಿಸಲಾಗುವ ವಸ್ತು-ವಿಷಯಗಳು: ಕಟೀಲು ಮೇಳದ ಧ್ವನಿದಾಖಲೆ-ದೃಶ್ಯದಾಖಲೆಗಳು-ಫೊಟೊಗಳು, ಕಟೀಲು ಮೇಳದ ಕರಪತ್ರಗಳು, ಪ್ರಸಂಗಪುಸ್ತಕಗಳು, ಪ್ರಮುಖ ಪತ್ರಿಕಾ ಪ್ರಕಟಣೆಗಳು, ಕೃತಿಗಳು, ಪರಿಕರಗಳು, ಹಸ್ತಾಕ್ಷರದ ಪಾತ್ರಪಟ್ಟಿಗಳು, ಪತ್ರ ಸಂವಾದಗಳು, ವೇಷಭೂಷಣಗಳು. ವಸ್ತು-ವಿಷಯಗಳು ಹಳೆಯದಾದಷ್ಟೂ ಅವುಗಳ ಮೌಲ್ಯ ಅಧಿಕವಾಗುತ್ತದೆ. ಹಳೆಯ ವಸ್ತುಗಳು ಜೀರ್ಣಾವಸ್ಥೆಯಲ್ಲಿದ್ದರೂ ಅದೇ ಸ್ಥಿತಿಯಲ್ಲಿ ನಾವು ಸಂಗ್ರಹಿಸುತ್ತೇವೆ.2000 ನೇ ಇಸವಿಯ ಪೂರ್ವದಲ್ಲಿ ಕಟೀಲು ಮೇಳದ ಆಟ ನೋಡಿದ, ಕೇಳಿದ ಅನುಭವವಿದ್ದರೆ, ಕಲಾವಿದರು, ಪಾತ್ರಗಳು, ಆಟ ಆದ ವರ್ಷ, ತಿಂಗಳು, ದಿನಾಂಕ ಇತ್ಯಾದಿ ವಿವರಗಳೊಂದಿಗೆ ಮಾಹಿತಿ ನೀಡಿದರೆ ಅದೂ ಉಪಯಕ್ತವಾಗುತ್ತದೆ. ಕೃತಿರೂಪದಲ್ಲಿ, ಸಂಗ್ರಹಾಲಯ ರೂಪದಲ್ಲಿ ಪ್ರಕಟಿಸುವ ಸಂದರ್ಭದಲ್ಲಿ ಸಂಗ್ರಹಮೂಲ ಸ್ಮರಿಸಿಕೊಳ್ಳಲಾಗುವುದು ಎಂದು ಮಿಥುನ ಕೊಡೆತ್ತೂರು (೯೪೪೮೩೫೫೯೯೮) ಹಾಗೂ ಡಾ. ಶ್ರುತಕೀರ್ತಿರಾಜ (೯೪೪೮೫೦೨೯೯೪) ತಿಳಿಸಿದ್ದಾರೆ.ಮೇಳದ ಕುರಿತಾದ ಮಾಹಿತಿಗಳನ್ನು ಅನಂತ ಪ್ರಕಾಶ, ಅಂಚೆಪೆಟ್ಟಿಗೆ ಸಂಖ್ಯೆ ೧೫, ಕಿನ್ನಿಗೋಳಿ- ೫೭೪೧೫೦ ಮೂಲ್ಕಿ ತಾಲೂಕು. ದ.ಕ. ಇಲ್ಲಿಗೆ ಅಥವಾ ಈಮೇಲ್ yakshaprabhakateel@gmail.com ಇಲ್ಲಿಗೆ ಕಳುಹಿಸುವಂತೆ ಪ್ರಕಟಣೆ ತಿಳಿಸಿದೆ

PREV

Recommended Stories

ಅಸ್ಸಾಂನಲ್ಲಿ ಯಾವ ಪ್ರತಿಭೆ ಇದೆ ಎಂದು ಹೂಡಿಕೆ? : ಪ್ರಿಯಾಂಕ್‌
ಪ್ರಿಯಾಂಕ್‌ರಿಂದ ಅಸ್ಸಾಮಿ ಜನತೆಗೆ ಅವಮಾನ : ಸಿಎಂ ಶರ್ಮ