ದೊಡ್ಡಭಂಡಾರ ಶ್ರೀ ಮಲ್ಲೇಶ್ವರಸ್ವಾಮಿ ವಿಗ್ರಹ ಪ್ರತಿಷ್ಠಾಪನಾ ಮಹೋತ್ಸವಕ್ಕೆ ಚಾಲನೆ

KannadaprabhaNewsNetwork |  
Published : Feb 12, 2024, 01:34 AM IST
ಪೋಟೋ:-  ದೊಡ್ಡಭಂಡಾರದ  ನೂತನವಾಗಿ ನಿರ್ಮಿಸಿರುವ ಶ್ರೀ ಮಲ್ಲೇಶ್ವರಸ್ವಾಮಿ ದೇವಾಸ್ತಾನ. 2.  ವಿಗ್ರಹ ಪ್ರತಿಷ್ಠಾನಾ ಮಹೋತ್ಸವದ ಪೂರಕವಾಗಿ ಮಹಿಳೆಯರು ಕಳಸ ಮೆರವಣಿಗೆಗೆ ತಯಾರಾಗಿರುವುದು | Kannada Prabha

ಸಾರಾಂಶ

ದೇವಸ್ಥಾನದಲ್ಲಿ ದೇವರಿಗೆ ಗಂಗಾಪೂಜೆ ಬಳಿಕ ಸಮಸ್ತ ಕಾಮದೇವ ಪೂಜೆ, ಆಲಯ ಪ್ರವೇಶ, ನಂದಾದೀಪ ಆರಾಧನೆ, ಗಣಪತಿ ಪೂಜೆ, ಪುಣ್ಯಾಹ ವಾಚನ, ನಾಂದಿ ಸಮಾಋಆರಾಧನೆ, ಹೃತ್ವಿಕ್‍ಗ್ರಹಣ, ಪಾನಕ ರಕ್ತಬಂಧನ ಮೊದಲಾದ ವೈದಿಕ ವಿಧಿ ವಿಧಾನಗಳು ನೆರವೇರಿತು.

ಕನ್ನಡಪ್ರಭ ವಾರ್ತೆ ಶನಿವಾರಸಂತೆ

ಇಲ್ಲಿಗೆ ಸಮೀಪದ ಬೆಸೂರು ಗ್ರಾ.ಪಂ. ವ್ಯಾಪ್ತಿಯ ದೊಡ್ಡಭಂಡಾರ ಗ್ರಾಮದ ಶ್ರೀ ಮಲ್ಲೇಶ್ವರಸ್ವಾಮಿ ವಿಗ್ರಹ ಪ್ರತಿಷ್ಠಾಪಾನೆ ಮಹೋತ್ಸವ ಮತ್ತು ನೂತನ ದೇವಾಲಯದ ಉದ್ಘಾಟನೆ ಹಾಗೂ ಪೂಜಾ ಮಹೋತ್ಸವ ಫೆ.12ರಂದು ನಡೆಯುತ್ತಿರುವ ಹಿನ್ನೆಲೆಯಲ್ಲಿ ಪ್ರತಿಷ್ಠಾಪನಾ ಮಹೋತ್ಸವದ ಅಂಗವಾಗಿ ಭಾನುವಾರ ದೇವಸ್ಥಾನದಲ್ಲಿ ಪೂಜಾ ವಿಧಿವಿಧಾನಗಳನ್ನು ನೆರವೇರಿಸುವ ಮೂಲಕ ಪೂಜಾ ಮಹೋತ್ಸವಕ್ಕೆ ಚಾಲನೆ ನೀಡಲಾಯಿತು.

ಭಾನುವಾರ ಸಂಜೆ 4 ಗಂಟೆಯಿಂದ ದೇವಸ್ಥಾನದಲ್ಲಿ ದೇವರಿಗೆ ಗಂಗಾಪೂಜೆ ಬಳಿಕ ಸಮಸ್ತ ಕಾಮದೇವ ಪೂಜೆ, ಆಲಯ ಪ್ರವೇಶ, ನಂದಾದೀಪ ಆರಾಧನೆ, ಗಣಪತಿ ಪೂಜೆ, ಪುಣ್ಯಾಹ ವಾಚನ, ನಾಂದಿ ಸಮಾಋಆರಾಧನೆ, ಹೃತ್ವಿಕ್‍ಗ್ರಹಣ, ಪಾನಕ ರಕ್ತಬಂಧನ, ಮಂಗಳಾರತಿ ತೀರ್ಥಪ್ರಸಾದ, ಮೃತ್ಯುಂಗ್ರಹಣ, ಅಂಕುರಾರೋಪಣ, ಪಂಚಂಗಾಭಿಷೇಕ, ಪುಣ್ಯತೀರ್ಥ, ಕಳಸಾಭಿಷೇಕ, ಷಡ್ವಶೋಧನಾ ಪೋಜೆ, ಜಲಾಧಿವಾಸ, ಮಹಾಮಂಗಳಾರತಿ, ತೀರ್ಥಪ್ರಸಾದ ವಿನಿಯೋಗದೊಂದಿಗೆ ಪೂಜಾ ಕಾರ್ಯಕ್ಕೆ ಅರ್ಚಕರು ಚಾಲನೆ ನೀಡಿದರು. ಸಂಜೆ 6 ಗಂಟೆಯಿಂದ ಪ್ರವೇಶಬಲಿ, ರಾಕ್ಷೋಘ್ನಹೋಮ, ದೇವತಾ ವಾಸ್ತು, ಪುರುಷಪೂಜೆ, ಪ್ರಧಾನಹೋಮ, ದಿಕ್ಪಾಲಕರಿಗೆಬಲಿ, ಪರಿಯಜ್ಞೀಕರಣ, ಪ್ರತಿಮಾಶೋಧನಾ, ಧ್ವಜಸ್ಥಂಭ, ಬಲಿಪೀಠಸ್ಥಾಪನೆ, ಶಿವಯೋಗಿ ಮಂಟಪ ಪ್ರತಿಷ್ಠೆ, ನವಗ್ರಹ, ಮೃತ್ಯುಂಜಯಹೋಮ, ಏಕಾದಾಶಿ ಏಕವಾರು ರುದ್ರಾದ್ವಾದಕಾದಿತ್ಯ, ಪುರುಷ ಚಂಡೇಶ್ವರ, ಅಷ್ಟಲಕ್ಷ್ಮಿ ಸಮೇತ ಹೋಮ, ನ್ಯಾಸವಿಧಾನ, ಪೀಠ ಸಂಸ್ಕಾರ ಮುಂತಾದ ಪೂಜಾ ವಿಧಿ ವಿಧಾನ ಹೋಮ ಹವನ ಕಾರ್ಯವನ್ನು ನಡೆಸಲಾಯಿತು.

ಫೆ.12ರಂದು ಮಧ್ಯಾಹ್ನ 2.30 ರಿಂದ ಧಾರ್ಮಿಕ ಸಮಾರಂಭ ನಡೆಯುತ್ತದೆ ಎಂದು ದೇವಾಲಯ ಸಮಿತಿಯವರು ಹೇಳಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಿದ್ದರಾಮಯ್ಯ ಭೇಟಿ ಮಾಡಿದ ರಮೇಶ್‌ ಜಾರಕಿಹೊಳಿ : ಕುತೂಹಲ!
ಬೆಂಗ್ಳೂರಲ್ಲಿರುವ ನಟಿ ಶಿಲ್ಪಾ ಶೆಟ್ಟಿ ಪಬ್‌ ಮೇಲೆ ಐಟಿ ದಾಳಿ