ದೊಡ್ಡಗಾಜನೂರು: ಅಣ್ಣಾವ್ರ ಸಂಬಂಧಿ ಮನೆ ಮೇಲೆ ದಾಳಿ

KannadaprabhaNewsNetwork |  
Published : Nov 12, 2026, 01:45 AM IST
ಗಾಜು ಪೀಸ್ ಪೀಸ್ | Kannada Prabha

ಸಾರಾಂಶ

ವರನಟ ಡಾ.ರಾಜ್‌ಕುಮಾರ್ ಸಂಬಂಧಿ ಮನೆ ಮೇಲೆ ನಿಗೂಢ ಸ್ಪೋಟ ದಾಳಿ ನಡೆದಿದ್ದು ಮನೆಯ ಕಿಟಕಿ ಗಾಜುಗಳು ಪುಡಿ ಪುಡಿ ಆಗಿವೆ. ಈ ಘಟನೆಯು ಸೋಮವಾರ ರಾತ್ರಿ ನಡೆದಿದ್ದು ಅಣ್ಣಾವ್ರ ಸಂಬಂಧಿಗಳು ತೀವ್ರ ಆತಂಕಕ್ಕೆ ಒಳಗಾಗಿದ್ದಾರೆ.

ಕನ್ನಡಪ್ರಭ ವಾರ್ತೆ ಚಾಮರಾಜನಗರ

ವರನಟ ಡಾ.ರಾಜ್‌ಕುಮಾರ್ ಸಂಬಂಧಿ ಮನೆ ಮೇಲೆ ನಿಗೂಢ ಸ್ಪೋಟ ದಾಳಿ ನಡೆದಿದ್ದು ಮನೆಯ ಕಿಟಕಿ ಗಾಜುಗಳು ಪುಡಿ ಪುಡಿ ಆಗಿವೆ. ಈ ಘಟನೆಯು ಸೋಮವಾರ ರಾತ್ರಿ ನಡೆದಿದ್ದು ಅಣ್ಣಾವ್ರ ಸಂಬಂಧಿಗಳು ತೀವ್ರ ಆತಂಕಕ್ಕೆ ಒಳಗಾಗಿದ್ದಾರೆ.

ದೊಡ್ಡಗಾಜನೂರು ಗ್ರಾಮ ಅಣ್ಣಾವ್ರ ತವರು ಊರಾಗಿದ್ದು ಇವರ ಸೋದರ ಸಂಬಂಧಿ ಮನೋಹರ್ ಎಂಬುವರ ಮನೆ ಮೇಲೆ ಈ ದಾಳಿ ನಡೆದಿದೆ. ಯಾರೋ ಕಿಡಿಗೇಡಿಗಳು ಕಚ್ಚಾ ಬಾಂಬ್ ಅಥವಾ ಪಟಾಕಿ ಬಾಂಬ್ ನ್ನು ಇವರ ಮನೆ ಮೇಲೆ ಎಸೆದಿದ್ದು ಸ್ಟೋಟದ ಸದ್ದಿಗೆ ಮನೆಯ ಕಿಟಕಿ ಗಾಜುಗಳು, ಬಾಗಿಲಿನ ಚೌಕಟ್ಟು ಪೀಸ್ ಪೀಸ್ ಆಗಿದ್ದು ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.

ತಾಳವಾಡಿ ಪೊಲೀಸ್ ಠಾಣಾ ವ್ಯಾಪ್ತಿಗೆ ಗಾಜನೂರು ಗ್ರಾಮ ಒಳಪಡಲಿದ್ದು ಪೊಲೀಸರು ಭೇಟಿ ಕೊಟ್ಟು ಸ್ಥಳ ಪರಿಶೀಲನೆ ನಡೆಸಿದ್ದಾರೆ.

ಮನೆಯವರು ಹೇಳಿದ್ದೇನು?:

ನಾವು ಒಳಗಡೆ ಕುಳಿತಿದ್ದೆವು. ದೊಡ್ಡ ಶಬ್ಧವಾಗಿದ್ದಕ್ಕೆ ಬಂದು ನೋಡಿದಾಗ ಕಿಟಕಿ ಗಾಜುಗಳು ಪುಡಿಪುಡಿಯಾಗಿತ್ತು. ನಾವು ನಿತ್ಯವೂ ಕಿಟಕಿ ಪಕ್ಕವೇ ಸೋಫಾದ ಮೇಲೆ ಕುಳಿತುಕೊಳ್ಳುತ್ತಿದ್ದೆವು. ಅದೃಷ್ಟವಶಾತ್ ನಿನ್ನೆ ರಾತ್ರಿ ಕುಳಿತಿರಲಿಲ್ಲ. ಸ್ಟೋಟವಾಗಿ ಒಂದು ನಿಮಿಷದಲ್ಲೇ ಹೊರಗಡೆ ಬಂದು ನೋಡಿದಾಗ ಐದು ಜನರು ಯುವಕರು ಕುಳಿತಿದ್ದರು. ಅವರೇ ಪ್ರತ್ಯಕ್ಷದರ್ಶಿಗಳು, ಅವರೇ ಹೇಳಬೇಕು ಯಾರು ಸ್ಫೋಟ ಮಾಡಿದರೆಂದು ಮನೋಹರ್ ಪುತ್ರಿ ಮನೋಘ್ನ ತಿಳಿಸಿದರು.

ಮನೋಹರ್ ಮಾತನಾಡಿ, ನಮಗೆ ಯಾರೂ ಧ್ವೇಷಿಗಳಿಲ್ಲ, ಮುಖ್ಯಬೀದಿ ಬಳಿಯೇ ನಮ್ಮ ಮನೆಯಿದ್ದು ಈ ದಾಳಿಯಿಂದ ತೀವ್ರ ಆತಂಕಕ್ಕೆ ಒಳಗಾಗಿದ್ದೇವೆ. ತಪ್ಪಿತಸ್ಥರನ್ನು ಶೀಘ್ರವೇ ಬಂಧಿಸಬೇಕು ಎಂದು ಒತ್ತಾಯಿಸಿದರು.

ಪೊಲೀಸರ ಸ್ಪಷ್ಟನೆ ಏನು?

ಘಟನೆ ಸಂಬಂಧ ತಮಿಳುನಾಡಿನ ಈರೋಡ್ ಜಿಲ್ಲಾ ಪೊಲೀಸರು ಪತ್ರಿಕಾ ಪ್ರಕಟಣೆ ಹೊರಡಿಸಿದ್ದು ಕಚ್ಚಾಬಾಂಬ್ ಬಳಕೆ ಬಗ್ಗೆ ಅಲ್ಲಗಳೆದಿದ್ದಾರೆ. ಪಟಾಕಿಯ ತೀವ್ರ ಸ್ಟೋಟದಿಂದ ಇದಾಗಿದ್ದು ಬಾಂಬ್ ಬಳಕೆಯಾಗಿಲ್ಲ. ಇನ್ನು, ಪಟಾಕಿಗಳನ್ನು ಸಿಡಿಸಿರುವ ಸಮಯವೂ ನಿಗದಿ ಪಡಿಸಿದ್ದ ಅವಧಿಯಲ್ಲಾಗಿದೆ ಎಂದು ತಿಳಿಸಿದೆ.

ಇಬ್ಬರು ಯುವಕರಿಂದ ತಪ್ಪೊಪ್ಪಿಗೆ:

ಚಾಮರಾಜನಗರದ ತಾಳವಾಡಿ ತಾಲೂಕಿನ ಗಾಜನೂರು ಗ್ರಾಮದಲ್ಲಿ ಡಾ.ರಾಜ್ ಸಂಬಂಧಿ ಮನೆ ಮೇಲೆ ದಾಳಿ ಪ್ರಕರಣ ಸಂಬಂಧಿಸಿದಂತೆ ‌‌ಇಬ್ಬರು ಯುವಕರು ತಪ್ಪೊಪ್ಪಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.

3-4 ಪಟಾಕಿ ಬಾಂಬ್ ಜಂಟಿ ಮಾಡಿ ಸ್ಪೋಟಿಸಿದೆವು, ಆಗ ಮನೆಯ ಕಿಟಕಿ ಗಾಜುಗಳು ಪುಡಿ ಪುಡಿಯಾಗಿರಬಹುದು, ತಾವೇ ಪಟಾಕಿ ಬಾಂಬ್ ಸಿಡಿಸಿದ್ದಾಗಿ ಹೇಳಿಕೆ ನೀಡಿದ್ದಾರೆ ಎನ್ನಲಾಗಿದೆ. ‌

ಇಬ್ಬರು ಯುವಕರನ್ನು ಕರೆತಂದ ತಾಳವಾಡಿ ಪೊಲೀಸರು ಸ್ಥಳ ಮಹಜರು ನಡೆಸಿದ್ದಾರೆ.‌

ಡಾ‌‌‌.ರಾಜ್ ಸೋದರ ಸಂಬಂಧಿ ಮನೋಹರ್ ಮನೆ ಮೇಲೆ ಈ ದಾಳಿ ನಡೆದಿದ್ದು ದಾಳಿ ತೀವ್ರತೆಗೆ ಮನೆಯ ಕಿಟಕಿ, ಹಣತೆ, ಬಾಗಿಲಿನ ಚೌಕಟ್ಟು ಪುಡಿಯಾಗಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ದೀಪಾವಳಿಲೀ ರಾಕೆಟ್‌ನಂತೆ ಹಾರಿದ ವಾಯು ಮಾಲಿನ್ಯ!
ಕೌಟುಂಬಿಕ ಕೇಸಲ್ಲಿ ಕುಟುಂಬ ಸಿಲುಕಿಸುವುದು ತರವಲ್ಲ: ಕೋರ್ಟ್‌